ಸರಳ ವಸ್ತುಗಳಿಂದ ರೋಮಾಂಚನಗೊಳಿಸುವ ವಿಜ್ಞಾನ

Author : ವಿ.ಎಸ್.ಎಸ್. ಶಾಸ್ತ್ರಿ

Pages 128

₹ 200.00




Year of Publication: 2012
Published by: ನವಕರ್ನಾಟಕ ಪ್ರಕಾಶನ
Address: # 11, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಶಿವಾನಂದ ವೃತ್ತ ಬಳಿ, ಕುಮಾರಪಾರ್ಕ್ ಪೂರ್ವ, ಬೆಂಗಳೂರು

Synopsys

ಅರವಿಂದ ಗುಪ್ತ ಅವರು ಇಂಗ್ಲಿಷಿನಲ್ಲಿ ಬರೆದ ಕೃತಿಯನ್ನು ಲೇಖಕ ವಿ.ಎಸ್.ಎಸ್. ಶಾಸ್ತ್ರೀ ಅವರು `ಸರಳ ವಸ್ತುಗಳಿಂದ ರೋಮಾಂಚನಗೊಳಿಸುವ ವಿಜ್ಞಾನ’ ಶೀರ್ಷಿಕೆಯಡಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಕಸದ ತೊಟ್ಟಿಯಲ್ಲಿಯ ನಿರುಪಯುಕ್ತ ಎಂದು ಭಾವಿಸಲಾದ ವಸ್ತುಗಳನ್ನು ಹುಡುಕಿ ಕಟ್ಟಿದರೆ ಅವೇ ವಿಜ್ಞಾನದ ಸಲಕರಣೆ-ಉಪಕರಣಗಳಾಗುತ್ತ ವೆ ಎಂಬ ರೋಮಾಂಚನಕಾರಿ ವಿಷಯವನ್ನು ಇಲ್ಲಿ ಮಕ್ಕಳಿಗೆ ಕುತೂಹಲ ಹುಟ್ಟುವ ರೀತಿಯಲ್ಲಿ ತಿಳಿಸಲಾಗಿದೆ. ಮಗುವಿಗೆ ಆಟವೆಂದರೆ ಆಟಿಕೆಯನ್ನು ಮುರಿಯುವುದು ಎಂದೇ ಅರ್ಥ. ಹೀಗೆ ಅವುಗಳನ್ನು ನಿರುಪಯುಕ್ತ ಎಂದು ತಿಳಿಯದೇ ವೈಜ್ಞಾನಿಕ ಉಪಕರಣಗಳನ್ನು ಇಲ್ಲವೇ ಸಲಕರಣಗಳನ್ನು ಮಾಡಲು ಸಾಧ್ಯವೇ ಎಂಬುದರತ್ತ ವಿಚಾರ ಶಕ್ತಿಯನ್ನು ಬಳಸಲು ಮಕ್ಕಳನ್ನು ಈ ಕೃತಿ ಪ್ರೇರೇಪಿಸುತ್ತದೆ. ಸರಳವಾದ ಹಾಗೂ ಎಲ್ಲೆಡೆ ಲಭ್ಯವಿರುವ ವಸ್ತುಗಳಿಂದ ಸೃಜನಶೀಲ ವಿಜ್ಞಾನ ಪ್ರಯೋಗಗಳಿಗೆ ವಿಪುಲ ಸಾಧ್ಯತೆಗಳಿವೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಜಂಟಿಯಾಗಿ ಮಾಡಿದ ಮಾದರಿಗಳು ಹೆಚ್ಚು ಕಾಲ ಬಾಳುತ್ತವೆ. ಈ ಪುಸ್ತಕದಲ್ಲಿ ವಿವರಿಸಿರುವ ಆಟಿಕೆಗಳು ಯಾವುದೇ ಬಡ ವಿದ್ಯಾರ್ಥಿಯೂ ತನ್ನ ಸುತ್ತ ಮುತ್ತ ಲಭ್ಯವಿರುವ ವಸ್ತುಗಳಿಂದ ತಯಾರಿಸಿಕೊಳ್ಳಬಹುದು. ಈ ಆಟಿಕೆಗಳೂ, ಮಾದರಿಗಳು ಅದ್ಭುತ ಸೃಜನಶೀಲತೆಯಿಂದ ತುಂಬಿವೆ. ಈ ಪುಸ್ತಕದಲ್ಲಿ ಶ್ರೇಷ್ಠ ಆಟಿಕೆಗಳನ್ನು ತಯಾರಿಸುವ ವಿಧಾನಗಳಿವೆ. ಈ ಕುರಿತು ವಿಸ್ತೃತ ಮಾಹಿತಿ ಒಳಗೊಂಡ ಕೃತಿ ಇದು.

About the Author

ವಿ.ಎಸ್.ಎಸ್. ಶಾಸ್ತ್ರಿ

ಒರಿಗಾಮಿ ಗಣಿತದ ಬಗ್ಗೆ ಅಧಿಕೃತವಾಗಿ ಮಾತನಾಡಬಲ್ಲ ಕೆಲವೇ ಕೆಲವರಲ್ಲಿ ವಿ.ಎಸ್.ಎಸ್. ಶಾಸ್ತ್ರಿ ಒಬ್ಬರು. ನವಕರ್ನಾಟಕದ ಗಣಿತ ಸಂವತ್ಸರ ಮಾಲೆಯ ಸಂಪಾದಕರ ಪೈಕಿ ಇವರೂ ಒಬ್ಬರು.  ಗಣಿತ ಮತ್ತು ವಿಜ್ಞಾನ ಕುರಿತು ಹಲವು ಕೃತಿಗಳನ್ನು ರಚಿಸಿದ್ದಾರೆ. ಅರವಿಂದ ಗುಪ್ತ ಅವರ ಪುಸ್ತಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಗಣಿತ ಚಟುವಟಿಕೆಗಳು, ಆಹಾ ಎಷ್ಟೊಂದು ಚಟುವಟಿಕೆಗಳು, ಸೌರಶಕ್ತಿಯ ಕತೆ, ತ್ಯಾಜ್ಯವಸ್ತುಗಳಿಂದ ವಿಜ್ಞಾನ-ಆಟಿಕೆಗಳು ಮುಂತಾದವು ಪ್ರಮುಖ ಕೃತಿಗಳು. ಇವರಿಗೆ ವಿಜ್ಞಾನ ಸಂವಹನಕಾರ ಪ್ರಶಸ್ತಿಯು ಲಭಿಸಿದೆ.  ...

READ MORE

Reviews

(ಹೊಸತು, ಡಿಸೆಂಬರ್ 2012, ಪುಸ್ತಕದ ಪರಿಚಯ)

ಪತ್ರಿಕೆಗಳಲ್ಲಿ ಮತ್ತು ಮಕ್ಕಳ ಪಠ್ಯಪುಸ್ತಕಗಳಲ್ಲಿ ಈಗಾಗಲೇ ನಾವು ಕಂಡಿರಬಹುದಾದ 'ನೋಡಿ ಕಲಿ ಮಾಡಿ ನಲಿ' ಮಾದರಿಯ ಕೃತಿಯಿದು. ಇದು ಇಂಗ್ಲಿಷಿನಿಂದ ಕನ್ನಡಕ್ಕೆ ಅನುವಾದ ಗೊಂಡಿದ್ದು, ಇದರ ಶೀರ್ಷಿಕೆ ಇಂಗ್ಲಿಷಿನಲ್ಲಿರುವಂತೆ ಸಂಕ್ಷಿಪ್ತವಾಗಿರದೆ ಸ್ವಲ್ಪ ವಿವರಣಾತ್ಮಕವಾಗಿದೆ. ಕೃತಿಯ ಉದ್ದೇಶವೇ ಸರಳ ವಸ್ತುಗಳಿಂದ ಆಟಿಕೆಗಳನ್ನು ತಯಾರು ಮಾಡಿಕೊಳ್ಳುವುದು ಹೇಗೆ ಎಂಬುದನ್ನು ತೋರಿಸುವುದು ಮತ್ತು ಆ ಮೂಲಕ ವಿಜ್ಞಾನ - ಗಣಿತದ ತಿಳುವಳಿಕೆಯನ್ನು ನೀಡುವುದು. ಈ ಕೃತಿಯ ಲೇಖಕರು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಪದವಿ ಪಡೆದವರಾಗಿದ್ದರೂ ಸಹ ಮಕ್ಕಳ ಮನಸ್ಸನ್ನು ಅರಿತವರು. ವಿಜ್ಞಾನದೊಂದಿಗೆ ಸೃಜನಶೀಲ ಕಲೆಯನ್ನು ಮೈಗೂಡಿಸಿಕೊಂಡವರು. ಈ ಅಂಶವು ಪ್ರತಿಯೊಂದು ಆಟಿಕೆ ತಯಾರಿಕೆಯ ವಿವರಣೆಯಲ್ಲಿಯೂ ನಮಗೆ ಮನದಟ್ಟಾಗುತ್ತದೆ. ಕುತೂಹಲಿಗಳಿಗೆ ಆಸಕ್ತರಿಗೆ ಹೊಳಹುಗಳನ್ನು ನೀಡುವ ಮಹತ್ವದ ಕೃತಿಯಿದು. ಒಂದೊಂದು ಆಟಿಕೆ ತಯಾರಿಕೆಯೂ ಒಂದೊಂದು ಪ್ರಯೋಗವೇ. ಶಾಸ್ತ್ರದ ಭಾರವನ್ನು ಹೇರದೆ ಕಲಾತ್ಮಕವಾಗಿ ಜ್ಞಾನಪ್ರಸಾರ ಮಾಡುವುದು ಹೇಗೆ ಎಂಬುದನ್ನು ತಿಳಿಸಿಕೊಡುವ ಕೃತಿಯಿದು. ಇಲ್ಲಿರುವ ವಿವರಗಳನ್ನು ಕೇವಲ ಓದಿದರೆ ಸಾಲದು, ಪ್ರಯೋಗಿಸಿ ನೋಡಬೇಕು. ನೋಡಿ ಆನಂದಿಸಬೇಕು. ಕಲೆ, ವಿಜ್ಞಾನ, ತಂತ್ರಜ್ಞಾನಗಳು ಮೇಲೈಸಿ ರಚನೆಯಾಗಿರುವ ವಿಶಿಷ್ಟ ಕೃತಿ ಇದು. ಹಿರಿಯರನ್ನು ಸಹ ಬಾಲ್ಯಕ್ಕೆ ಕರೆದೊಯ್ಯುವ ಶಕ್ತಿ ಇದಕ್ಕಿದೆ.

Related Books