ಸರ್ವಜ್ಞ ವಾಣಿ

Author : ಜಿ.ಕೆ. ಕುಲಕರ್ಣಿ

Pages 48

₹ 36.00
Year of Publication: 2014
Published by: ಗುರು ಪ್ರಕಾಶನ
Address: # 2ನೇ ಅಡ್ಡರಸ್ತೆ, ಎಂ.ಜಿ ರಸ್ತೆ, ತುಮಕೂರು-572101
Phone: 08162275699

Synopsys

ಲೇಖಕ ಜಿ.ಕೆ. ಕುಲಕರ್ಣಿ ಅವರು ಸರ್ವಜ್ಞನ ತ್ರಿಪದಿಗಳನ್ನು ತಮ್ಮದೇ ದೃಷ್ಟಿಕೋನದಿಂದ ವ್ಯಾಖ್ಯಾನಿಸಿ, ವಿಶ್ಲೇಷಿಸಿದ ಕೃತಿ-ಸರ್ವಜ್ಞವಾಣಿ. ಕಿರಿದಾದ ಪದಗಳ ಮೂಲಕ ಹಿರಿದಾದ ಅರ್ಥವನ್ನು ಸ್ಫುರಿಸಿ, ಬದುಕಿನ ಪ್ರೀತಿಯನ್ನು ಹೆಚ್ಚಿಸುವ ಸರ್ವಜ್ಞನ ತ್ರಿಪದಿಗಳನ್ನು ವ್ಯಾಖ್ಯಾನಿಸುವುದೆಂದರೆ ಬದುಕೇ ಆಗಿದೆ. ಬದುಕಿನ ಸ್ವರೂಪ-ಸ್ವಭಾವ ಎರಡನ್ನೂ ಪೂರ್ಣವಾಗಿ ತಿಳಿದು, ಅಧ್ಯಾತ್ಮವನ್ನೂ ಅಂದರೆ ಬದುಕಿನ ನೈಜತೆ ಹಾಗೂ ಸಾರ್ಥಕತೆಯನ್ನು ತಿಳಿಸುವುದು ತ್ರಿಪದಿಗಳ ಉದ್ದೇಶ. ತ್ರಿಪದಿಗಳ ಜೀವಾಳವನ್ನು ತೀರಾ ಸರಳವಾಗಿ ವ್ಯಾಖ್ಯಾನಿಸಿ, ತಮ್ಮದೇ ಆರ್ಥ ನೀಡಿದ್ದಾರೆ. 

 

 

About the Author

ಜಿ.ಕೆ. ಕುಲಕರ್ಣಿ
(01 March 1953)

ಹಿರಿಯ ಲೇಖಕ ಜಿ.ಕೆ. ಕುಲಕರ್ಣಿ ಅವರು ವಿಜಯಪುರ  ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಗ್ರಾಮದವರು. ತುಮಕೂರು ಜಿಲ್ಲಾ ಆರೋಗ್ಯ  ತರಬೇತಿ ಕೇಂದ್ರದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾಗಿ ನಿವೃತ್ತರು. ಸದ್ಯ ತುಮಕೂರಿನಲ್ಲಿ ವಾಸವಿದ್ದಾರೆ. ಎಚ್ ಐವಿ, ಏಡ್ಸ್ ಸೇರಿದಂತೆ ಸಾಂಕ್ರಾಮಿಕ ರೋಗಗಳ ಕುರಿತು ಜನಜಾಗೃತಿಗಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಧಾರವಾಡ, ಹೊಸಪೇಟೆ ಸೇರಿದಂತೆ ರಾಜ್ಯದ ವಿವಿಧ ಆಕಾಶವಾಣಿ ಕೇಂದ್ರಗಳಿಂದ ಇವರ ಕವನ-ಬರಹಗಳು ಪ್ರಸಾರಗೊಂಡಿವೆ.  ಕತ್ತಲೆ ಕರಗಿತು ಎಂಬ ರೇಡಿಯೋ ನಾಟಕವು ರಾಜ್ಯದ ಎಲ್ಲ ಬಾನುಲಿ ಕೇಂದ್ರಗಳಿಂದ ಪ್ರಸಾರಗೊಂಡಿದೆ. ನಗೆ ಮಲ್ಲಿಗೆ, ಹಾಸ್ಯಸಿಂಚನ ಹಾಗೂ ಹಾಸ್ಯಲೋಕ ಹೀಗೆ ವಿವಿಧ ವೇದಿಕೆಗಳಲ್ಲಿ ಹಾಸ್ಯ ಕಾರ್ಯಕ್ರಮ ನೀಡಿದ್ದಾರೆ. ಅಧ್ಯಾತ್ಮಿಕ ಉಪನ್ಯಾಸ, ಜೀವನ ...

READ MORE

Related Books