ಸರ್ವಜ್ಞನ ವಚನಗಳು

Author : ರೆ. ಉತ್ತಂಗಿ ಚೆನ್ನಪ್ಪ

Pages 312

₹ 300.00




Year of Publication: 2022
Published by: ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು
Address: ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು 560018\n
Phone: 080- 26612991 / 26623584

Synopsys

‘ಸರ್ವಜ್ಞನ ವಚನಗಳು’ ಕೃತಿಯು ಸರ್ವಜ್ಞನ ಕುರಿತು ಬಂದಿರುವ ಅಧಿಕೃತ ಕೃತಿಯಾಗಿದೆ. ಇಲ್ಲಿ ವಚನಗಳ ಸಂಗ್ರಹ ಮಾತ್ರವಲ್ಲದೆ ಅಧ್ಯಯನಪೂರ್ಣ ಪೀಠಿಕೆಯನ್ನು ಕೂಡ ಚನ್ನಪ್ಪ ಉತ್ತಂಗಿಯವರು ಬರೆದಿದ್ದಾರೆ. ಈ ಹೊಸ ಆವೃತ್ತಿಯಲ್ಲಿ ಸರ್ವಜ್ಞನ 2100 ವಚನಗಳನ್ನು ಕಾಣಬಹುದು. ಕೃತಿಯಲ್ಲಿರುವ ಸರ್ವಜ್ಞನ ವಚನವೊಂದು ಹೀಗಿದೆ; ಆದಿ ಗುರುರಾಯನು ಭೇದಿಸಿ ಲಿಂಗವಕೊಟ್ಟ ಮೂಜಗದ ಕರ್ತನೇ ಆದಿ ಗುರುಬಸವ ಸರ್ವಜ್ಞ ಹರನೆ ಗುರುವಾಗಿ ತಾಮೃರ್ತ್ಯಲೋಕಕೆ ಬಂದು ಪರಶಿವಲಿಂಗವನು ಕರಕೆ ತಂದು ಕೊಟ್ಟ ಗುರುವೆ ಬಸವಣ್ಣ ಸರ್ವಜ್ಞ ಆಗಿಲ್ಲ ಹೋಗಿಲ್ಲ ಮೇಗಿಲ್ಲ ಕೆಳಗಿಲ್ಲ ತಾಗಿಲ್ಲ ತಪ್ಪು ತಡೆ ಇಲ್ಲ ಲಿಂಗಕ್ಕೆ ದೇಗುಲವೇ ಇಲ್ಲ ಸರ್ವಜ್ಞ

About the Author

ರೆ. ಉತ್ತಂಗಿ ಚೆನ್ನಪ್ಪ
(28 October 1881 - 04 August 1962)

ಉತ್ತಂಗಿ ಚೆನ್ನಪ್ಪ ಅವರ ಕಾವ್ಯನಾಮ ತಿರುಳು ಗನ್ನಡದ ತಿರುಕ. ಹದಿನೆಂಟನೆ ಶತಮಾನದ ಮಧ್ಯಭಾಗದಲ್ಲಿ. ಸ್ವಾತಂತ್ರ್ಯ ಪೂರ್ವದ ಬ್ರಿಟಿಷರ ಆಡಳಿತದ ಕಾಲದಲ್ಲಿ ಕ್ರೈಸ್ತಧರ್ಮಾನುಯಾಯಿಗಳಾದ ರೆವರೆಂಡ್ ಕಿಟಲ್, ಬಿ.ಎಲ್ ರೈಸ್ ಮೊದಲಾದವರಿಂದ ಕನ್ನಡದಲ್ಲಿ ಕೆಲಸ ಆರಂಭವಾಯಿತು. ಅದೇ ಪರಂಪರೆಯನ್ನು ಮುಂದುವರಿಸಿ ಕನ್ನಡದ ಜನಪದದಲ್ಲಿ ಶಿವಶರಣರ ವಚನಗಳನ್ನು ಅದರಲ್ಲೂ ನಾಡಿನ ಜನರ ನಾಲಗೆಯ ಮೇಲೆ ನಲಿದಾಡುವ ತ್ರಿಪದಿಗಳನ್ನು ರಚಿಸಿದ ಸರ್ವಜ್ಞ ಕವಿಯ ಸಂಪೂರ್ಣ ಪರಿಚಯ ಮಾಡಿಕೊಟ್ಟವರಲ್ಲಿ ಪ್ರಮುಖರು ರೆವೆರೆಂಡ್ ಉತ್ತಂಗಿ ಚೆನ್ನಪ್ಪ. ಇವರು ಭಾರತೀಯರು. ಧರ್ಮಪ್ರಚಾರ ಅವರ ವೃತ್ತಿಯಾದರೂ ಪ್ರವೃತ್ತಿಯಿಂದ ಕನ್ನಡದ ಕಟ್ಟಾಳು. ನಾಡಿಗರ ನಾಲಿಗೆಯ ಮೇಲೆ ನೆಲಸಿದ್ದ , ಪಂಡಿತ ಪಾಮರರ ಪ್ರೀತಿಗೆ ...

READ MORE

Related Books