ಸತ್ತ ಮೇಲೆ ಸಮಾಜ ಸೇವೆ

Author : ಎಸ್.ಜೆ. ನಾಗಲೋಟಿಮಠ

Pages 30

₹ 30.00




Year of Publication: 2016
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ವಿದ್ಯಾರಣ್ಯ, ಹಂಪಿ-583276
Phone: 08022372388

Synopsys

ಡಾ. ಎಸ್.ಜೆ. ನಾಗಲೋಟಿಮಠ ಅವರು ಬರೆದ”ಸತ್ತ ಮೇಲೆ ಸಮಾಜ ಸೇವೆ’ ಕೃತಿಯು 1993ರಲ್ಲಿ ಮೊದಲ ಮುದ್ರಣ ಕಂಡಿದ್ದು, ಕನ್ನಡ ವಿಶ್ವವಿದ್ಯಾಲಯದ ಬೆಳ್ಳಿ ಹಬ್ಬದ ನಿಮಿತ್ತ ಮರುಮುದ್ರಿಸಲಾಗಿದೆ. ವೃತ್ತಿಯಿಂದ ವೈದ್ಯರಾಗಿದ್ದರೂ ಅವರಲ್ಲಿ ಒಬ್ಬ ಸಾಹಿತಿ ಇದ್ದ. ಶರಣನಿದ್ದ. ಸಂತನಿದ್ದ. ಸೇವಕನಿದ್ದ. ವೈದ್ಯರು ದೇವರ ಸಮಾನ ಎಂಬುದಕ್ಕೆ ಅವರು ಮಾದರಿಯಾಗಿದ್ದರು. ಮನುಷ್ಯನ ಹುಟ್ಟಿನ ಜೊತೆಗೆ ಸೇವೆ ಆರಂಭವಾಗಿ ಸತ್ತ ಮೇಲೂ ಮುಂದುವರಿದರೆ ಅದು ಸಾರ್ಥಕ ಬದುಕು ಎಂಬ ವೈಚಾರಿಕತೆಯ ಲೇಖನಗಳು, ಅವರ ಜೀವನಾನುಭವದ ಆಳ-ವಿಸ್ತಾರಗಳಿಗೆ ಸಾಕ್ಷಿ ನುಡಿಯುತ್ತವೆ. ಸತ್ತ ಮೇಲೂ ಸೇವೆ ಎಂದರೆ ದೇಹದಾನ. ಇದರಲ್ಲಿ ಕಳೆದುಕೊಳ್ಳುವಂತಹದ್ದು ಏನೂ ಇಲ್ಲ ಎಂಬುದು ಲೇಖಕರ ಅಚಲ ಪ್ರತಿಪಾದನೆ. ದೇಹದಾನವು ಅತ್ಯುತ್ತಮ ದಾನ. ಈ ಕುರಿತು ಜನಮಾನಸದಲ್ಲಿದ್ದ ತಪ್ಪು ಕಲ್ಪನೆಗಳನ್ನು ನಿವಾರಿಸುವುದು ಕೃತಿಯ ಉದ್ದೇಶ.

About the Author

ಎಸ್.ಜೆ. ನಾಗಲೋಟಿಮಠ
(20 July 1940 - 24 July 2006)

ವೈದ್ಯಕೀಯ ಹಾಗೂ ವೈಜ್ಞಾನಿಕ ಬರೆಹಗಳಲ್ಲಿ ಡಾ. ಎಸ್.ಜಿ. ನಾಗಲೋಟಿಮಠ ಹೆಸರು ಚಿರಪರಿಚಿತ. ಮೂಲತಃ ಬಾಗಲಕೋಟೆ ಜಿಲ್ಲೆಯವರು. ಇವರು ಜನಿಸಿದ್ದು 1940 ಜುಲೈ 20ರಂದು. ತಂದೆ ಜಂಬಯ್ಯ. ತಾಯಿ ಹಂಪವ್ವ್. ಹುಬ್ಬಳ್ಳಿಯ ಕರ್ನಾಟಕ ವ್ಯದ್ಯಕೀಯ ಮಹಾವಿದ್ಯಾಲಯದಲ್ಲಿ ವೈದ್ಯ ಪದವೀಧರರು. ಹುಬ್ಬಳ್ಳಿಯ ವೈದ್ಯಕೀಯ ಕಾಲೇಜಿನಲ್ಲಿ ಉಪನ್ಯಾಸಕರಾಗಿ, ನಂತರ ಕಿಮ್ಸ್ ನಿರ್ದೇಶಕರೂ ಹಾಗೂ ಕರ್ನಾಟಕ ವಿಜ್ಞಾನ ಪರಿಷತ್ತು ಮಾಜಿ ಅಧ್ಯಕ್ಷರೂ ಆಗಿದ್ದರು.   ಕೃತಿಗಳು:  ಮಾನವ ದೇಹದ ಮಿಲಿಟರಿ ಪಡೆ, ವೈದ್ಯಕೀಯ ಪ್ರಯೋಗಾಲಯ, ಸರ್ವಜ್ಞ ವಚನಗಳಲ್ಲಿ ಆರೋಗ್ಯ, ಪ್ಲಾಸ್ಟಿಕ್‌ ಸರ್ಜರಿ, ಪರಿಸರ ಮಾಲಿನ್ಯ, ವೈದ್ಯಕೀಯ ವಿಶ್ವಕೋಶ. ಪ್ರಶಸ್ತಿ- ಪುರಸ್ಕಾರಗಳು:  ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ...

READ MORE

Related Books