ಸವೆಯದೀ ಸವಿ

Author : ರವಿಶಂಕರ್ ಎ.ಕೆ (ಅಂಕುರ)

Pages 196

₹ 250.00




Year of Publication: 2022
Published by: ಎಸ್. ಎಲ್. ಎನ್ ಪಬ್ಲಿಕೇಷನ್
Address: ಎಸ್. ಎಲ್. ಎನ್. ಪಬ್ಲಿಕೇಷನ್ ನಂ. ೩೪೩೭, ೪ನೇ ಮುಖ್ಯರಸ್ತೆ, ೯ನೇ ಅಡ್ಡರಸ್ತೆ ಶಾಸ್ತ್ರಿ ನಗರ, ಬನಶಂಕರಿ, ೨ನೇ ಹಂತ ಬೆಂಗಳೂರು-೨೯ ಮೊ: ೯೯೭೨೧೨೯೩೭೬
Phone: 9972129376

Synopsys

ಸಾಹಿತ್ಯವೆಂಬುದು ಓದುಗನ ಸಹೃದಯ ಚಿಂತನೆ. ತನ್ನ ಓದಿನ ವಲಯವನ್ನು ವಿಸ್ತರಿಸಿಕೊಳ್ಳಲು ಬರಹದ ಮೂಲಕ, ನುಡಿಯ ಮೂಲಕ ಇನ್ನೊಬ್ಬರನ್ನು ತಲುಪುತ್ತೇವೆ. ಆ ತಲುಪುವ ಪ್ರಕ್ರಿಯೆಯಲ್ಲಿ ಸಹೃದಯರ ಪ್ರತಿಕ್ರಿಯೆಗಳು ಹೊಸ ಓದುವಿಗೆ ಸಹಾಯಮಾಡುತ್ತವೆ. ಸಹೃದಯರ ಜಾಗದಲ್ಲಿ ವ್ಯಕ್ತಿ ಇಲ್ಲವೆ ಉತ್ತಮ ಗ್ರಂಥ ಯಾವುದೇ ಇದ್ದರೂ ಜ್ಞಾನ ವಿಸ್ತರಿಸುವುದರಲ್ಲಿ ಅನುಕೂಲವೇ ಆಗುತ್ತದೆ. ಸಾಹಿತ್ಯವನ್ನು ಸಂಶೋಧನೆಗೆ ತೊಡಗಿಸುವುದೆಂದರೆ ವಿಮರ್ಶೆಯ ಆಳದಿಂದ ಹೊಸತೊಂದು ಜ್ಞಾನಬಿಂಧುವನ್ನು ಸ್ಪರ್ಶಿಸಿದಂತೆಯೇ ಸರಿ. ಇಲ್ಲಿ ಉಂಟಾಗುವ ಹೊಸತನವು ವಿಷಯ-ವಿಚಾರ-ಗ್ರಹಿಕೆಗಳ ತಾತ್ವಿಕತೆಯನ್ನು ವಿಶ್ವವಿಸ್ತಾರದಲ್ಲಿ ಮುಳುಗಿಸಿ, ಎಲ್ಲಾ ಸಂಕೋಲೆಗಳನ್ನು ಕಳಚುವ ಕಾರ್ಯವೇ ಆಗಿದೆ. ಇಪ್ಪತ್ತೊಂದನೇ ಶತಮಾನದ ಈ ಮೂರನೇ ದಶಕದಲ್ಲಿ ‘ಶತಮಾನದ ಕೃತಿಗಳ’ ಆಧುನಿಕ ಸ್ಪರ್ಶವನ್ನು ಕಾಣುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ನವೋದಯ, ನವ್ಯ, ದಲಿತ-ಬಂಡಾಯ, ಮಹಿಳಾ, ಮುಸ್ಲಿಂ, ಜೈನ, ಬೌದ್ಧ ಮೊದಲಾದ ಸಂವೇದನೆಗಳು ಆಯಾ ಕಾಲದ ತುರ್ತುಗಳಂತೆ ಬಂದು ಹೋದರೂ ಎಲ್ಲವೂ ವಿಶ್ವಮಾನವ ತತ್ವವನ್ನು ಹಂಬಲಿಸಿದರೆ ಮಾತ್ರ ಸಾಹಿತ್ಯ ಸಂವೇದನೆಗಳಾಗಿ ಉಳಿಯುತ್ತವೆ. ಕೇವಲ ಬದುಕಿನ ಮೀಸಲಾತಿಗಳನ್ನು ಆಯಾ ಚಿಂತನೆಗಳ ಮೂಲಕ ಪಡೆಯುವಂತೆ ಮೂಡಲೆತ್ನಿಸಿದರೆ, ತಮ್ಮ ಚಿಂತನೆಗಳು ಸೋಲಿನ ಸಂಕೇತಗಳನ್ನು ಕಾಣಿಸುವ ಜೊತೆಗೆ ಬಿತ್ತುತ್ತಲೇ ಸಾಗುತ್ತವೆ. ಸಾಹಿತ್ಯವೆಂದರೆ ಅಭಿಮಾನದ ದ್ಯೋತಕವಲ್ಲ, ಪ್ರಶಸ್ತಿ, ಹಣ ಗಳಿಕೆಯ ಉದ್ಯಮವಲ್ಲ. ಸಾಹಿತ್ಯ ರಚಿಸಿದ್ದು ಬುದ್ಧಿ ಹಾಗೂ ಮನಸ್ಸುನ ವಿಸ್ತಾರಕ್ಕಾಗಿ, ಅದರ ಹಾದಿಯೂ ನಮ್ಮ ಗ್ರಹಿಕೆಯಲ್ಲಿ ಕಾಣಿಸಿಕೊಳ್ಳಬೇಕಿದೆ. ಹೊಸದಿಗಂತವನ್ನು ತಲುಪುವ ಹಂಬಲವನ್ನು ಹೊಂದಿ, ಒಂದಿಷ್ಟು ಅನುವಾದ, ರೂಪಾಂತರಗಳಲ್ಲಿ ತೊಡಗಿಕೊಂಡಿದ್ದರೂ, ಈ ಸಮಗ್ರ ಸವಿಯು ಎಲ್ಲರಿಗೂ ತಲುಪುತ್ತಿಲ್ಲ. ಅಕಾಡೆಮಿಕ್ ಬರಹಗಳನ್ನು ಯಾಂತ್ರಿಕಗೊಳಿಸುತ್ತಿರುವ ಕ್ರಮದಲ್ಲಿ ಅಧ್ಯಯನವೆಂಬುದು ನೆಪದ ಸೋಗು ಎನಿಸುತ್ತಿರುವುದು ನಿಜ. ಈ ದಶಕದಲ್ಲಿ ಅಧ್ಯಯನ ಸಂಪನ್ಮೂಲ ಗರಿಬಿಚ್ಚಿ ಕಣ್ಣೆದುರೆ ತೆರೆದುಕೊಳ್ಳುವ ಕಾಲದಲ್ಲಿ ನಮಗೆ ಸಮಯದ ಸಮನ್ವಯತೆಯ ಅಗತ್ಯವಿದೆ. ನಮ್ಮ ನಡುವೆಯೇ ನಾವು ನಮ್ಮನ್ನು ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಅತಿ ಜಾಗೃತಿಯಿಂದ ನಮ್ಮನ್ನು ನಾವು ಹುಡುಕಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಬರಹದ ಮೊದಲ ಹೆಜ್ಜೆಗಳು ಅಷ್ಟೇನೂ ದೃಢವೆನಿಸದಿದ್ದರೂ, ನಮ್ಮೊಳಗೆ ನಮ್ಮನ್ನು ಕಂಡುಕೊಳ್ಳಲು ಸಹಕರಿಸಬಹುದು. ಓದಿನ ಕಣ್ಣು ಕಿರಿದಾದರೂ ಮನಸ್ಸಿನ ಕಣ್ಣನ್ನು ತೆರೆದಂತೆ ವಿಸ್ತಾರದಲ್ಲಿ ಕಾಣಬಹುದು. ಇಲ್ಲಿನ ಲೇಖನಗಳೆಲ್ಲವೂ ಅಂತಹ ಸಹೃದಯ ಪ್ರಯತ್ನಗಳೇ ಆಗಿವೆ. ನಿಮ್ಮ ದೃಷ್ಟಿಕೋನದ ಜೊತೆಗೆ ವಿಚಾರವನ್ನು ಬಯಸುತ್ತಾ ನಿಮ್ಮೊಳಗೆ ಹೊಸತೊಂದು ವಿಚಾರಕ್ಕೆ ನಾಂದಿಯಾದರೆ ಬರಹಗಾರ ಸಂತೃಪ್ತ.

About the Author

ರವಿಶಂಕರ್ ಎ.ಕೆ (ಅಂಕುರ)

ರವಿಶಂಕರ ಎ.ಕೆ. ಅವರು ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಅಳಿಲುಘಟ್ಟ ಗ್ರಾಮದವರು. ಅರವಿಂದ ಆಶ್ರಮದಿಂದ ಪ್ರಭಾವಿತರು. ಕನ್ನಡ ಸಾಹಿತ್ಯದಲ್ಲಿ ಶಿಕ್ಷಣ ಪದವಿ, ಸ್ನಾತಕೋತ್ತರ ಪದವಿ ಹಾಗೂ ‘ಬೇಂದ್ರೆ ಸಾಹಿತ್ಯ : ವಿಮರ್ಶೆಯ ಸ್ವರೂಪ ಮತ್ತು ತಾತ್ವಿಕತೆ’ ವಿಷಯದ ಮೇಲೆ ಪಿಎಚ್.ಡಿ ಪದವಿ ಪಡೆದಿದ್ದಾರೆ. ಜೈನ್ ವಿಶ್ವವಿದ್ಯಾಲಯ, ಆಳ್ವಾಸ್ ಶಿಕ್ಷಣ ಸಂಸ್ಥೆ, ಕೃಪಾನಿಧಿ ಶಿಕ್ಷಣ ಸಂಸ್ಥೆಗಳಲ್ಲಿ ಉಪನ್ಯಾಸಕರಾಗಿ ಸದ್ಯ ಬೆಂಗಳೂರಿನ ಕ್ರಿಸ್ತು ಜಯಂತಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ. ಅಂಕುರ-ಎಂಬುದು ಇವರ ಕಾವ್ಯನಾಮ.  ಕೃತಿಗಳು: ಖಾನ್ ಅಬ್ದುಲ್ ಗಫಾರ್ ಖಾನ್(ಜೀವನ ಚರಿತ್ರೆ 2013), ಎತ್ತಿಕೊಂಡವರ ಕೂಸು (ಕವನ ಸಂಕಲನ -2017), ...

READ MORE

Excerpt / E-Books

ಸಾಹಿತ್ಯ ಪ್ರಜ್ಞೆಯೆಂಬುದು ಜನರ ಬದುಕಿನ ಅನಂತವಾದ ಅಲೋಚನೆ. ಇದು ಶ್ರೀ ಸಾಮಾನ್ಯನ ಸರಳವಾದ ಅಲೋಚನೆಯಾದರೂ ಯೋಚಿಸುವುದು ಕಷ್ಟ. ಈ ಅಲೋಚನೆಯ ಕೆಲಸವನ್ನು ಸಾಹಿತ್ಯ ನಿರ್ವಹಿಸುತ್ತದೆ. ಸಾಹಿತ್ಯವೆಂಬುದು ಸಹಹಿತ ಬಯಸುವ ಆಯಾಮ ಎಂಬ ವ್ಯಾಖ್ಯಾನಗಳ ಮರುಚಿಂತನೆ ನಡೆದು ಸಹಹಿತವೆಂದರೇನು? ಎಂಬ ಹಲವು ಹೊಸ ದೃಷ್ಟಿಗಳನ್ನು ಚರ್ಚಿಸಿದ್ದಾರೆ. ಬೆವರಿನ ಭಾಷೆ, ಕಣ್ಣೀರಿನ ಭಾಷೆ, ಆಕ್ರಂಧನದ ತಾತ್ವಿಕತೆ ಈ ಎಲ್ಲಾ ನೋವಿನಲ್ಲಿಯೂ ಹುಡುಕಾಟವಿದೆ. ಅದು ಹಿತಕ್ಕಾಗಿಯೇ ಚಿಂತಿಸುತ್ತದೆ. ಭಾರತೀಯ ಸಂಸ್ಕೃತಿಯು ಶುಭಪ್ರದವಾದದು. ಅದಕ್ಕೆ ರೌದ್ರತೆಯ ಅಂತಿಮ ನೆರಳಿಲ್ಲವೆಂಬ ಪ್ರಾಚೀನ ಅಧ್ಯಯನಗಳಿಗೆ ಕಳೆದ ಶತಮಾನದಿಂದಲೂ ಕಟ್ಟಲ್ಪಟ್ಟ ಸಾಹಿತ್ಯ ಅಳಿವು-ಉಳಿವನ್ನು ಗಮನಿಸಿದರೆ ಮರುಚಿಂತನೆಯ ಸಾಧ್ಯತೆಗಳು ಲಭಿಸುತ್ತವೆ. ಸಾಹಿತ್ಯ ಸಹಹಿತವನ್ನು ಹುಡುಕುವುದೇ ಆಗಿದೆ. ಅದು ಶ್ರೀಸಾಮಾನ್ಯನನ್ನು ಮುಟ್ಟದೇ ಪರಿಕಲ್ಪನೆಯ ಪಟ್ಟದಲ್ಲಿ ದಿಟ್ಟಿಯಾದರೆ ಯಾವ ಲಾಭವೂ ಇಲ್ಲ. ಪ್ರಾಚೀನ ಸಾಹಿತ್ಯ ಶ್ರೀಸಾಮಾನ್ಯನನ್ನು ತಲುಪಲಿಲ್ಲವೆಂಬುದು ಸತ್ಯದಷ್ಟೇ ತಲುಪಿರುವ ಉತ್ತರಗಳೂ ಇವೆ. ಇದು ಭಾಷೆಯ ತೊಂದರೆಯೇ ಹೊರೆತು ಕೃತಿಕಾರ್ಯದ ತೊಂದರೆಯಲ್ಲ. ಪ್ರಾಚೀನ ಸಾಹಿತ್ಯವು ಒಂದು ಪ್ರಜ್ಞೆಯಿಂದ ನಿರೂಪಿತವಾದ ಭವಿಷ್ಯತ್ತಿನ ಕಥೆಗಳು. ಅವು ವಾಸ್ತವದಲ್ಲಿ ನಿತ್ಯ ಚಲಿಸುತ್ತವೆ. ಪ್ರಸ್ತುತ ಕೂಡ ಪ್ರಾಚೀನ ಸಾಹಿತ್ಯದ ಎಲ್ಲಾ ಪಾತ್ರಗಳ ವ್ಯಕ್ತಿತ್ವಗಳನ್ನು ಕಾಣಬಹುದು. ಪ್ರತಿಯೊಬ್ಬ ಮನುಷ್ಯನೂ ಈ ವ್ಯಕ್ತಿತ್ವಗಳಲ್ಲಿ ಹಲವು ಪರಕಾಯ ಪ್ರವೇಶ ಮಾಡುತ್ತಾನೆ.

Related Books