ಸಾವಿರದ ವರಕವಿ ಬೇಂದ್ರೆ

Author : ಎನ್ಕೆ (ಎನ್‌.ಕೆ. ಕುಲಕರ್ಣಿ)

₹ 28.00




Year of Publication: 2015
Published by: ಸಪ್ನ ಬುಕ್ ಹೌಸ್

Synopsys

ಬೇಂದ್ರೆಯವರ ಒಡನಾಡಿಯಾಗಿದ್ದ ಎನ್.ಕೆ. ಕುಲಕರ್ಣಿ ಅವರು ಬೇಂದ್ರೆಯವರನ್ನು ಕುರಿತು ರಚಿಸಿದ ಮೂರು ಜೀವನ ಚರಿತ್ರೆ ರಚಿಸಿದ್ದಾರೆ. ಐಬಿಎಚ್ ಪ್ರಕಾಶನವು ಪ್ರಕಟಿಸಿದ ಮಕ್ಕಳನ್ನು ಗಮನದಲ್ಲಿಟ್ಟು ಕೊಂಡು ರಚಿಸಿದ ಪುಟ್ಟ ಪರಿಚಯಾತ್ಮಕ ಜೀವನ ಚರಿತ್ರೆಯಿದು. ಮೊದಲ ಬಾರಿಗೆ ಕಲಾವಿದ ಚಂದ್ರನಾಥ ಆಚಾರ್ಯ ಅವರು ಪೇಂಟಿಂಗ್ ಮುಖಪುಟದಲ್ಲಿತ್ತು. ಸಪ್ನಾ ಬುಕ್ ಹೌಸ್ ಪ್ರಕಟಿಸಿ ಎರಡನೆಯ ಮುದ್ರಣದಲ್ಲಿ ಅದನ್ನು ಕೈಬಿಡಲಾಗಿದೆ. ಆದರೆ ಬೇಂದ್ರೆಯವರ ಜೀವನ ಆಧರಿಸಿದ ಮನೋಹರ ಆಚಾರ್ಯ ಅವರು ರಚಿಸಿದ ರೇಖಾಚಿತ್ರಗಳನ್ನು ಉಳಿಸಿಕೊಳ್ಳಲಾಗಿದೆ. ಬೇಂದ್ರೆಯವರನ್ನು ಮಕ್ಕಳಿಗೆ ಪರಿಚಯಿಸುವ ಉದ್ದೇಶದಿಂದ ರಚಿತವಾದ ಕೃತಿಯಿದು.

About the Author

ಎನ್ಕೆ (ಎನ್‌.ಕೆ. ಕುಲಕರ್ಣಿ)
(29 August 1913 - 23 April 2005)

ಎನ್ಕೆ (ಎನ್‌.ಕೆ. ಕುಲಕರ್ಣಿ) ಅವರು ಎನ್.ಕೆ , ಎಂದೇ ಸುಪ್ರಸಿದ್ಧರಾದ ಎ.ಕೆ.ಕುಲಕರ್ಣಿಯವರು, 1913 ರ ಆಗಸ್ಟ್ 29 ರಂದು ಗದುಗಿನಲ್ಲಿ ಜನಿಸಿದರು.  ಧಾರವಾಡದ ಕರ್ನಾಟಕ ಕಾಲೇಜಿನಿಂದ ಬಿ.ಎ .(ಕನ್ನಡ ಆನರ್ಸ್) ಪದವಿಯನ್ನು ಹಾಗು ವಿದ್ಯಾರಣ್ಯ ಪಾರಿತೋಷಕವನ್ನು ಪಡೆದರು.1938 ರಲ್ಲಿ ಕನ್ನಡ  ಹಾಗೂ ಸಂಸ್ಕೃತದಲ್ಲಿ ಎಂ.ಎ. ಪದವಿಯನ್ನು ಪಡೆದರು. 1940 ರಲ್ಲಿ ಬಿ.ಟಿ. ಪದವಿ ಪಡೆದರು.  1943 ರಿಂದ 1946 ರವರೆಗೆ ಕನ್ನಡ ಸಂಶೋಧನ ಸಂಸ್ಥೆಯಲ್ಲಿ ಕುಮಾರವ್ಯಾಸನ ಕುರಿತು ಸಂಶೋಧನೆ ಮಾಡಿ ಪ್ರಬಂಧರಚನೆ ಮಾಡಿದರು. 1971 ರಲ್ಲಿ  ಧಾರವಾಡ ಆಕಾಶವಾಣಿಯಿಂದ ಕಾರ್ಯಕ್ರಮ ನಿರ್ವಾಹಕರಾಗಿ ನಿವೃತ್ತರಾದರು. ಸಾವಿನ ಉಡಿಯಲ್ಲಿ, ಎರಡನೆಯ ...

READ MORE

Related Books