ಸ್ಕಾರ್ಲೆಟ್ ಪ್ಲೇಗ್

Author : ಚನ್ನಪ್ಪ ಕಟ್ಟಿ

Pages 138

₹ 120.00




Year of Publication: 2020
Published by: ಪಲ್ಲವ ಪ್ರಕಾಶನ
Address: ಚನ್ನಪಟ್ಟಣ ಪೋಸ್ಟ್, ಎಮ್ಮಿಗನೂರು, ಬಳ್ಳಾರಿ- 583113
Phone: 888087235

Synopsys

‘ಸ್ಕಾರ್ಲೆಟ್ ಪ್ಲೇಗ್’ ಜಾಕ್ ಲಂಡನ್ ಅವರ ಕಾದಂಬರಿ. ಲೇಖಕ ಚನ್ನಪ್ಪ ಕಟ್ಟಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. 2073ರಲ್ಲಿ ಪ್ರಾರಂಭವಾಗುವ ಇಲ್ಲಿಯ ಕತೆಯನ್ನು ಅವರವತ್ತು ವರ್ಷಗಳ ಹಿಂದೆ ಅಂದರೆ 2013ರಲ್ಲಿ ಕ್ಯಾಲಿಫೋರ್ನಿಯಾದಲ್ಲಿ ಸಂಭವಿಸಿದಂತೆ ಕಲ್ಪಿಸಿಕೊಂಡು ಸ್ಕಾರ್ಲೆಟ್ ಪ್ಲೇಗ್ ಸೃಷ್ಟಿಸಿದ ಅನಂತ ಅವಘಡಗಳ ಸರಮಾಲೆಯನ್ನು ಈ ಕಾದಂಬರಿಯಲ್ಲಿ ಚಿತ್ರಿಸಲಾಗಿದೆ.

ವಿಸ್ಮಯದ ಸಂಗತಿ ಎಂದರೆ, ಈ ಕಾದಂಬರಿಯನ್ನು ಜಾಕ್ ಲಂಡನ್ ರಚಿಸಿದ್ದು 1912ರಲ್ಲಿ ಸ್ಕಾರ್ಲೆಟ್ ಪ್ಲೇಗ್ ಹೆಸರಿನ ಪಿಡುಗು ನೂರು ವರ್ಷಗಳ ನಂತರ ವಿಶ್ವವನ್ನು ತಲ್ಲಣಗೊಳಿಸಿತು ಎಂದು ಕಲ್ಪಿಸಿ ಬರೆಯಲಾಗಿರುವ ಈ ಕಾದಂಬರಿಯನ್ನು Futuristic Tale ಸಾಹಿತ್ಯ ಪ್ರಕಾರಕ್ಕೆ ಸೇರಿಸಲಾಗಿದೆ. ಸ್ಕಾರ್ಲೆಟ್ ಪ್ಲೇಗ್ ನಂತಹ ಸಾಂಕ್ರಾಮಿಕ ಮಹಾಮಾರಿಯೊಂದಕ್ಕೆ ಮನುಷ್ಯರು ತುತ್ತಾದಾಗ ಅವರ ಎದೆಯ ಪಾತಾಳದಲ್ಲಿ ಅವಿತು ಕುಳಿತಿದ್ದ ನಿಗೂಢ ಹಾಗೂ ವಿಸ್ಮಯಕಾರಿ ರಾಗದ್ವೇಷ, ಹಪಾಹಪಿತನ-ಔದಾರ್ಯ- ಕ್ರೌರ್ಯ- ಕಾರುಣ್ಯಗಳೆಲ್ಲ ಹೇಗೆ ಮುನ್ನೆಲೆಗೆ ಬರುತ್ತವೆ ಎನ್ನುವುದರ ದಟ್ಟ ವಿವರಣೆ ಇಲ್ಲಿದೆ. ಅವೆಲ್ಲ ಅನುಭವಗಳನ್ನು ಯಥಾವತ್ತಾಗಿ ಕಲ್ಪನೆಯ ಪಾತಾಳಗರಡಿಯಿಂದ ಎತ್ತಿ ನಿಗಿ ನಿಗಿ ಕೆಂಡದಂಥ ಕಥನವನ್ನಾಗಿಸಿ ಓದುಗರ ಬೊಗಸೆಯಲ್ಲಿ ಬೀಳುತ್ತದೆ ಈ ಕಾದಂಬರಿ.

About the Author

ಚನ್ನಪ್ಪ ಕಟ್ಟಿ
(01 May 1956)

ಡಾ. ಚನ್ನಪ್ಪ ಕಟ್ಟಿಯವರ ಪೂರ್ಣ ಹೆಸರು ಚನ್ನಪ್ಪ ಕನಕಪ್ಪ ಕಟ್ಟಿ. ಮೂಲತಃ  ಗದಗ ಜಿಲ್ಲೆ, ರೋಣ ತಾಲ್ಲೂಕು ಹಿರೇಹಾಳ ಗ್ರಾಮದವರು. ಪ್ರಾಥಮಿಕ ಶಿಕ್ಷಣವನ್ನು ಹಿರೇಹಾಳ ಗ್ರಾಮದಲ್ಲಿ ಮುಗಿಸಿದ ಅವರು ಮಾಧ್ಯಮಿಕ ಶಿಕ್ಷಣವನ್ನು ಶ್ರೀ ವೀರಪುಲಿಕೇಶಿ ಮಾಧ್ಯಮಿಕ ಶಾಲೆಯಲ್ಲಿ ಪೂರ್ಣಗೊಳಿಸಿದ್ದಾರೆ. ಆನಂತರ ಶ್ರೀವೀರಪುಲಿಕೇಶಿ ಪದವಿ ಪೂರ್ವ ಮಹಾವಿದ್ಯಾಲಯ, ಬಾದಾಮಿಯಲ್ಲಿ ಪದವಿ ಪೂರ್ಣ ಶಿಕ್ಷಣ ಪಡೆದ ಅವರು, ಕರ್ನಾಟಕ ಕಲಾ ಮಹಾವಿದ್ಯಾಲಯ, ಧಾರವಾಡದಲ್ಲಿ ಇಂಗ್ಲಿಷ್ ನಲ್ಲಿ ಪದವಿ ಪಡೆದಿದ್ದಾರೆ. ಜೊತೆಗೆ ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಆನಂತರ ಸಿಂದಗಿಯ ಜಿ.ಪಿ.ಪೋರವಾಲ ಕಲಾ, ವಾಣಿಜ್ಯ ಹಾಗೂ ವಿ.ವಿ.ಸಾಲಿಮಠ ವಿಜ್ಞಾನ ...

READ MORE

Conversation

Related Books