ಸ್ಕೂಲ್‌ ಫೋಬಿಯಾ

Author : ಪಿ.ವಿ. ಭಂಡಾರಿ



Year of Publication: 2018
Published by: ನವಕರ್ನಾಟಕ ಪ್ರಕಾಶನ
Address: 64/1, 5Tನೇ ಮುಖ್ಯ ರಸ್ತೆ, ಗಾಂಧಿನಗರ, ಬೆಂಗಳೂರು- 560009
Phone: 7353530805

Synopsys

ಲೇಖಕ ಪಿ.ವಿ. ಭಂಡಾರಿ ಅವರ ಕೃತಿ ʻಸ್ಕೂಲ್‌ ಫೋಬಿಯಾʼ ಶಾಲೆ...ನಾ ಒಲ್ಲೆ. ಪುಸ್ತಕವು ಮಕ್ಕಳು ಶಾಲೆಗೆ ಹೋಗದಿರಲು ತೋರುವ ನಿರಾಕರಣದ ಹಿಂದಿರುವ ಕಾರಣಗಳು, ಅದಕ್ಕೆ ಸಮರ್ಪಕವಾದ ಪರಿಹಾರಗಳ ಬಗ್ಗೆ ವಿವರಿಸುತ್ತದೆ. ಸಾಮಾನ್ಯವಾಗಿ ಮಕ್ಕಳು ಒಂದಲ್ಲಾ ಒಂದು ಕಾರಣದಿಂದ ಶಾಲೆಗೆ ಹೋಗಲು ಹಿಂದೇಟು ಹಾಕುತ್ತಾರೆ. ಆದರೆ ಕೆಲವು ಮಕ್ಕಳು ಶಾಲೆ ಅಂದಾಕ್ಷಣ ವಿಪರೀತ ಭಯಕ್ಕೊಳಗಾಗುವುದು, ತರಗತಿಯಲ್ಲಿ ಅಸ್ವಸ್ಥತೆಯನ್ನು ತೋರುವುದು, ಆತಂಕಕ್ಕೊಳಗಾಗುವುದು ಅವರಲ್ಲಿ ಕಂಡುಬರುವ ಫೊಬಿಯಾದ ಒಂದು ರೀತಿಯ ಲಕ್ಷಣವಾಗಿದೆ. ಹಾಗಾಗಿ ಅಂತಹ ಸಮಸ್ಯೆಗಳ ಕುರಿತು ಮನೋವೈಜ್ಞಾನಿಕವಾಗಿ ಈ ಕೃತಿಯು ವಿಶ್ಲೇಷಿಸುತ್ತದೆ.

About the Author

ಪಿ.ವಿ. ಭಂಡಾರಿ

ಡಾ. ಪಿ.ವಿ. ಭಂಡಾರಿ ವೈದ್ಯರು. ಜೆ.ಜೆ.ಎಂ.ವೈದ್ಯಕೀಯ ಮಹಾವಿದ್ಯಾನಿಲಯದಲ್ಲಿ ಎಂ.ಬಿ.ಬಿ.ಎಸ್, ಮಣಿಪಾಲ ವಿಶ್ವವಿದ್ಯಾನಿಲಯದಲ್ಲಿ ಮನೋವೈಜ್ಞಾನಿಕ ಚಿಕಿತ್ಸೆಯಲ್ಲಿ ಡಿಪ್ಲೊಮಾ, ಮಂಗಳೂರಿನ ಫಾ. ಮುಲ್ಲರ್ಸ್ ವೈದ್ಯಕೀಯ ಮಹಾ ವಿದ್ಯಾನಿಲಯದಿಂದ ಡಿ.ಎನ್.ಬಿ (ಮನೋವೈಜ್ಞಾನಿಕ ಚಿಕಿತ್ಸೆ) ಪದವಿ ಪಡೆದರು. ತಾಲ್ಲೂಕು ಕನ್ನಡ ಸಾಹಿತ್ಯ ಪ್ರಶಸ್ತಿ. ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಡಾ. ಎಸ್.ಎಸ್. ಜಯರಾಂ ಪ್ರಶಸ್ತಿ, ಸ್ಪಂದನ ಪ್ರಶಸ್ತಿ, ಶ್ರೇಷ್ಠ ಮನೋವೈದ್ಯ-2012 ಪ್ರಶಸ್ತಿ, ಕರ್ನಾಟಕ ರಾಜ್ಯ ಸರ್ಕಾರದಿಂದ ನೀಡುವ 2012ರ ಸಂಯಮ ಪ್ರಶಸ್ತಿಗಳು ಸಂದಿವೆ. ಕಳೆದ 15 ವರ್ಷಗಳಿಂದ ಡಾ.ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯಲ್ಲಿ ತಜ್ಞ ಮನೋವೈದ್ಯ ಮತ್ತು ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಉಪನ್ಯಾಸಗಳ ಮೂಲಕವೂ ಸ್ವಸ್ಥ ಜೀವನಕ್ಕಾಗಿ ...

READ MORE

Related Books