ಸೀಳುನೋಟ

Author : ಪ್ರಕಾಶ ಕುಗ್ವೆ

Pages 100

₹ 100.00




Year of Publication: 2022
Published by: ಕವಿತಾ ಪ್ರಕಾಶನ
Address: 101, ಸೃಷ್ಟಿ ಸಾಲಿಗ್ರಾಮ ಅಪಾರ್ಮೆಂಟ್, ಜಯಲಕ್ಷ್ಮಿ ವಿಲಾಸ ರಸ್ತೆ, ಚಾಮರಾಜಪುರಂ, ಮೈಸೂರು- 570005
Phone: 9880105526

Synopsys

ಪತ್ರಕರ್ತ, ಲೇಖಕ ಪ್ರಕಾಶ ಕುಗ್ವೆ ಅವರ ಆಯ್ದ ಕಿರುಬರಹಗಳ ಸಂಕಲನ ಸೀಳುನೋಟ. ಈ ಕೃತಿಗೆ ಹಿರಿಯ ಪರಿಸರತಜ್ಞ, ವಿಜ್ಞಾನ ಬರಹಗಾರರಾದ ನಾಗೇಶ ಹೆಗಡೆ ಅವರ ಮುನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ ಈ ಸಂಕಲನದಲ್ಲಿ ವಾಸ್ತವ ಬದುಕಿನ ಸಾಕಷ್ಟು ಸೀಳುನೋಟಗಳಿವೆ. ವರದಿಗಾರನೊಬ್ಬ ಕಣ್ಣಂಚಿನಲ್ಲಿ ಕಂಡ ಅಪಸವ್ಯಗಳಿವೆ. ಪತ್ರಕರ್ತನ ಕೆಲಸವೆಂದರೆ ಹಗ್ಗದ ಮೇಲಿನ ನಡಿಗೆಯೇ ಸರಿ. ಅದೇ ಕಾರಣಕ್ಕೆ ಇಲ್ಲಿ ದಾಖಲಾದ ಅನೇಕಾನೇಕ ನಾಟಕೀಯ ಪ್ರಸಂಗಗಳಲ್ಲಿ ಪಾತ್ರಧಾರಿಗಳ ಹೆಸರು ನಮಗೆ ಗೊತ್ತಾಗುವುದಿಲ್ಲ. ಅವರಾಡುವ ನಾಟಕವಷ್ಟೇ ಕಾಣುತ್ತದೆ ಎಂದಿದ್ದಾರೆ ನಾಗೇಶ ಹೆಗಡೆ. ಜೊತೆಗೆ ನಾವು ಇತಿಹಾಸದಿಂದ ಯಾವುದೇ ಪಾಠ ಕವಿಯಲಾರೆವು ಎಂಬುದೇ ಚರಿತ್ರೆಯಿಂದ ನಮಗೆ ಸಿಗುವ ಪಾಠ ಎಂದು ದಕ್ಷಿಣಾ ಆಫ್ರಿಕಾದ ಧರ್ಮಗುರು ಮತ್ತು ಸಮಾಜ ಸುಧಾರಕ ಡೆಸ್ಮಂಡ್ ಟುಟು ಹೇಳಿದ್ದುಂಟು. ಅಂಥ ಪಾಠವಾದರೂ ಚರಿತ್ರೆಯ ಪಾಠ ಹೇಳುವವರಿಗೆ ಮತ್ತು ಚರಿತ್ರೆಯನ್ನು ಮರು ರೂಪಿಸ ಬಯಸುವವರಿಗೆ ಸಿಗುತ್ತಿರಬೇಕು. ಆ ಕಾರಣದಿಂದಲೇ ಇಲ್ಲಿನ ಟಿಪ್ಪಣಿಗಳು ದಶಕಗಳಷ್ಟು ಹಳತಾದರೂ ಮತ್ತೆ ಅವನ್ನು ಈಗ ಮುನ್ನೆಲೆಗೆ ತರಲು ನಿರ್ಧರಿಸಿದ್ದಕ್ಕೆ ಪ್ರಕಾಶ ಕುಗ್ವೆ ಮತ್ತು ಪ್ರಕಾಶಕ ಡಾ. ಗಣೇಶ ಅಮೀನಗಡ ಅಭಿನಂದನಾರ್ಹರು ಎಂದು ಮೆಚ್ಚುಗೆ ಸೂಚಿಸಿದ್ದಾರೆ. ಈ ಕೃತಿಯಲ್ಲಿ ಪತ್ರಕರ್ತ ಪ್ರಕಾಶ ಕುಗ್ವೆ ತಾವು ಬರೆದ ಸುದ್ಧಿಗಳಲ್ಲಿ ಆಯ್ದ ಕಿರು ಬರಹಗಳನ್ನು ಸಂಕಲನ ಮಾಡಿದ್ದಾರೆ.

About the Author

ಪ್ರಕಾಶ ಕುಗ್ವೆ

ಪತ್ರಕರ್ತ, ಲೇಖಕ ಪ್ರಕಾಶ ಕುಗ್ವೆ ಮೂಲತಃ ಶಿವಮೊಗ್ಗ ಜಿಲ್ಲೆ ಸಾಗರದ ಅಂಚಿನ ಕುಗ್ವೆಯವರು. ಸ್ನಾತಕೋತ್ತರ ಅರ್ಥಶಾಸ್ತ್ರದಲ್ಲಿ ಎರಡನೇ ರ್ಯಾಂಕ್ ಪಡೆದು, ಸೀದಾ ಸೇರಿದ್ದು ಪತ್ರಿಕೋದ್ಯಮಕ್ಕೆ. ಆರಂಭದ 9 ತಿಂಗಳು ಕರ್ನಾಟಕ ನ್ಯೂಸ್ ನೆಟ್‌ನಲ್ಲಿ ಪತ್ರಿಕೋದ್ಯಮದ ಪಾಠ. ನಂತರ ಮಯೂರ, ಸುಧಾ ಹಾಗೂ ಪ್ರಜಾವಾಣಿಯಲ್ಲಿ ಒಟ್ಟು 20 ವರ್ಷ ಕಾರ್ಯನಿರ್ವಹಣೆ, ಬೆಂಗಳೂರು, ಚಿತ್ರದುರ್ಗ, ಶಿವಮೊಗ್ಗ, ದಾವಣಗೆರೆಯಲ್ಲಿ ವರದಿಗಾರರಾಗಿ ಕೆಲಸ. ದಾವಣಗೆರೆ ಜಿಲ್ಲಾ ಪತ್ರಕರ್ತರ ಸಂಘದ ಗೌರವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಭಾಜನರು. ರಂಗ ವಿಮರ್ಶೆ, ರಾಜಕೀಯ ವಿಶ್ಲೇಷಣೆ ಆಸಕ್ತಿಯ ವಿಭಾಗಗಳು. ಮಂಗಳೂರಿನಲ್ಲಿ ಪ್ರಜಾವಾಣಿ ಬ್ಯೂರೊ ಮುಖ್ಯಸ್ಥರಾಗಿ ...

READ MORE

Related Books