ಸೀತೆಯ ಅಡುಗೆಮನೆ

Author : ಜಿ.ರಾಜಶೇಖರ

Pages 288

₹ 350.00




Year of Publication: 2022
Published by: ಋತುಮಾನ ಟ್ರಸ್ಟ್
Address: ಎಫ್-3, ಎ ಬ್ಲಾಕ್, ಶಾಂತಿನಿಕೇತನ ಅಪಾರ್ಟ್ಮೆಂಟ್, ಶಾಂತಿನಿಕೇತನ ಬಡಾವಣೆ, ಅರೆಕೆರೆ, ಬನ್ನೇರುಘಟ್ಟ ರಸ್ತೆ, ಬೆಂಗಳೂರು- 560076.
Phone: 9480009997

Synopsys

ಸೀತೆಯ ಅಡುಗೆ ಮನೆ ರಾಮಚಂದ್ರ ಗಾಂಧಿ ಅವರು ಬರೆದಿರುವ ಮೂಲ ಕೃತಿಯಾಗಿದ್ದು, ಜಿ.ರಾಜಶೇಖರ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ರಾಮಜನ್ಮಭೂಮಿ ಚಳವಾಯು ಪ್ರತಿನಿಧಿಸುತ್ತಿದ್ದ ರಾಜಕಾರಣ ಮತ್ತು ಅದು ಸೃಷ್ಟಿಸಿದ ಸಾಮಾಜಿಕ ಪಲ್ಲಟಗಳು ರಾಮಚಂದ್ರ ಗಾಂಧಿಯವರನ್ನು ತೀವ್ರವಾಗಿ ಕಲಕಿದ್ದವು. ಆ ಒತ್ತಡದಲ್ಲೇ ಅಯೋಧ್ಯೆಗೆ ಹೋಗುವ ಅವರಿಗೆ, 'ಜನ್ಮಭೂಮಿಯ ಆವರಣದಲ್ಲೇ ಇರುವ, ಆದರೆ, ಮಾಧ್ಯಮ ವರದಿಗಳಲ್ಲಿ ಯಾವತ್ತೂ ಮಹತ್ವ ಪಡೆಯದ 'ಸೀತಾ 6. ರಸೋಯಿ', ಕಾಣಿಸುತ್ತದೆ. ರಮಣ ಪ್ರಣೀತ ಅದೈತದ ಬೆಳಕಿನಲ್ಲಿ ಸೀತೆಯ ಅಡುಗೆಮನೆ" ರಾಮಚಂದ ಗಾಂಧಿಯವರಿಗೆ ಕಳೆದುಹೋದ ಪುರಾಣವನ್ನು ಮತ್ತೆ ಪಡೆಯುವ ಭರವಸೆಯನ್ನು ಹುಟ್ಟಿಸುತ್ತದೆ. ಇದರಿಂದ ರೂಪುಗೊಂಡದ್ದೆ Sita's Kitchen: A testimony of faith and inquiry " ಇಲ್ಲ 'ಸೀತೆಯ ಅಡುಗೆಮನೆ' ಎಂಬುದು ಬಹುದೊಡ್ಡ ರೂಪಕ, ಶ್ರದ್ಧೆಯನ್ನು ಸತತ ಶೋಧನೆಯ ನಿಕಷಕ್ಕೊಡ್ಡಿ ಮತ್ತೆ ಮತ್ತೆ ಖಾತರಿಪಡಿಸಿಕೊಳ್ಳುವ ಚಲನಶೀಲತೆಯ ಪ್ರತೀಕ ಎಂದು ಎನ್‌.ಎ. ಎಂ ಇಸ್ಮಯಿಲ್‌ ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.

About the Author

ಜಿ.ರಾಜಶೇಖರ
(03 April 1946 - 20 July 2022)

1946ರ ಏಪ್ರಿಲ್ 3ರಂದು ಉಡುಪಿ ಜಿಲ್ಲೆಯ ಗುಂಡ್ಮಿಯಲ್ಲಿ ಜನಿಸಿದ ಜಿ. ರಾಜಶೇಖರ ಅವರು ಪದವಿ ಪಡೆದದ್ದು ಉಡುಪಿಯಲ್ಲಿ. ಮೊದಲಿಗೆ ಕೆಲಕಾಲ ಶಿಕ್ಷಕರಾಗಿ ಕೆಲಸ ಮಾಡಿದ ಇವರು ಬಳಿಕ ಎಲ್‌ಐಸಿಯ ಉದ್ಯೋಗಿಯಾಗಿದ್ದರು. ಸಾಹಿತ್ಯ-ಸಮಾಜ- ರಾಜಕಾರನ ಕುರಿತಂತೆ ಹಾಗೂ ಕೋಮುವಾದವೂ ಸೇರಿದಂತೆ ಸಮಕಾಲೀನ ತುರ್ತಿನ ವಿದ್ಯಮಾನಗಳ ಬಗ್ಗೆ ಅವರು ಬಹುಸಂಖ್ಯೆಯ ಲೇಖನಗಳನ್ನು ಸತತವಾಗಿ ಪ್ರಕಟಿಸುತ್ತಲೇ ಬಂದಿದ್ದರೂ ಈ ಬರಹಗಳು ಸಂಕಲನಗೊಂಡು ಪ್ರಕಟಗೊಂಡಿದ್ದು ಕಡಿಮೆ. ಸಮಕಾಲೀನ ಕನ್ನಡದ ಪ್ರಮುಖ ವಿಮರ್ಶಕ- ಚಿಂತಕರೆಂದು ಮನ್ನಣೆ ಗಳಿಸಿರುವ ರಾಜಶೇಖರ ಅವರು ಎಡಪಂಥೀಯ ಧೋರಣೆಯನ್ನು ನಿಷ್ಠುರ ಆತ್ಮವಿಮರ್ಶೆಯೊಂದಿಗೆ ಕಸಿ ಮಾಡಿದವರು. ಕೃತಿಗಳು: ’ಕಾಗೋಡು ಸತ್ಯಾಗ್ರಹ’, ಪರಿಸರ ...

READ MORE

Related Books