ಸೀತಾ ಚರಿತ

Author : ಎಸ್. ಮಾಲತಿ

Pages 56

₹ 45.00




Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, , ಕುಮಾರ ಪಾರ್ಕ್ ಪೂರ್ವ, ಬೆಂಗಳೂರು-560001
Phone: 22161911

Synopsys

ರಾಮಾಯಣದಲ್ಲಿ ಸೀತೆಯನ್ನು ಕೇಂದ್ರವಾಗಿಟ್ಟು ಮತ್ತೆ ಮತ್ತೆ ಬರಹಗಳು ಬರುತ್ತಲೇ ಇವೆ. ಆಧುನಿಕ ಮಹಿಳಾ ಸಂವೇದನೆಗಳು ಜಾಗೃತಗೊಂಡ ದಿನದಿಂದ ರಾಮಾಯಣವನ್ನು ಸೀತೆಯ ಕಣ್ಣಲ್ಲಿ ವಿಶ್ಲೇಷಿಸಿದ ಹಲವು ಕೃತಿಗಳು ಬಂದಿವೆ. ಇಲ್ಲಿ ಎಸ್. ಮಾಲತಿ ಅವರು ವಾಲ್ಮೀಕಿ ರಾಮಾಯಣವನ್ನು ಆಧರಿಸಿ ಸೀತಾ ಚರಿತ ಎನ್ನುವ ಕಿರು ನಾಟಕವನ್ನು ಬರೆದಿದ್ದಾರೆ. ಓರ್ವ ಮಹಿಳೆಯಾಗಿ ಸೀತೆ ಮಾಲತಿಯವರನ್ನು ಹೆಚ್ಚು ಕಾಡಿರುವುದೂ ಈ ಕೃತಿಯಲ್ಲಿ ಕಾಣಸಿಗುತ್ತದೆ . ಇದು, ಪುರುಷ ಪ್ರಧಾನ ವ್ಯವಸ್ಥೆಯಿಂದ ಪದೇ ಪದೇ ವಂಚನೆಗೊಳಗಾಗುತ್ತಾ, ಶೋಷಣೆಗೊಳಗಾಗುತ್ತಾ ರೋಸಿ ಭೂಮಿ ತಾಯಿಯ ಗರ್ಭ ಸೇರುವ ಸೀತೆಯ ಕತೆ, ಸೀತೆಯ ಶೋಷಣೆಯೇ ನಾಟಕದ ಮುಖ್ಯ ಭಾಗವಾದಾಗ, ಶ್ರೀರಾಮನ ಪಾತ್ರ ಮಂಕಾಗುತ್ತಾ ಬರುತ್ತದೆ. ಇಡೀ ರಾಮಾಯಣದ ಕತೆಯ ಸಾರವನ್ನು ಒಳಗೊಂಡಿರುವ ಈ ಕಿರು ನಾಟಕ 14 ದೃಶ್ಯಗಳನ್ನು ಹೊಂದಿದೆ.  ಶ್ರೀರಾಮಪಟ್ಟಾಭಿಷೇಕದಿಂದ ಆರಂಭವಾಗಿ, ವನವಾಸ, ಸೀತಾಪಹರಣ, ರಾವಣ ವಧೆ, ಅಯೋಧ್ಯೆ ಪಟ್ಟಾಭಿಷೇಕ, ಸೀತೆ ಮತ್ತೆ ಕಾಡುಪಾಲು, ಲವಕುಶ ಜನನ, ಅಂತಿಮವಾಗಿ ಮತ್ತೆ ರಾಮನ ಮುಖಾಮುಖಿ, ಸೀತೆಯ ನಿರ್ಗಮನ ಹೀಗೆ ಪ್ರಮುಖ ಸಂಗತಿಗಳನ್ನು ಈ ಕಿರುನಾಟಕದಲ್ಲಿ ಕಟ್ಟಿಕೊಡಲಾಗಿದೆ.

About the Author

ಎಸ್. ಮಾಲತಿ
(01 May 1952 - 02 April 2019)

ರಂಗಕರ್ಮಿ, ಬರಹಗಾರ್ತಿ ಎಸ್. ಮಾಲತಿ ಅವರು ಜನಿಸಿದ್ದು 1952 ಮೇ 1ರಂದು ಶಿವಮೊಗ್ಗದಲ್ಲಿ. ತಾಯಿ ಉಮಾ ಶೇಷಗಿರಿ ಪೈ, ತಂದೆ ಶೇಷಗಿರಿ ಪೈ. ದೆಹಲಿಯ ಎನ್.ಎಸ್.ಡಿ ಗರಡಿಯಲ್ಲಿ ಬೆಳೆದುಬಂದವರು.  ಇವರು ಬರೆದ ನಾಟಕಗಳೆಂದರೆ ಎರಡು ಕಿರು ನಾಟಕಗಳು, ಶೀಮ ಕಥಾನಕ, ದಲಿತಲೋಕ. ಇವರು ಅನುವಾದಿಸಿದ ನಾಟಕಗಳು ಜನತೆಯ ಶತ್ರು, ರೊಷೊಮನ್, ಒಂದು ಪಯಣದ ಕಥೆ, ಹೊಸದಿಕ್ಕು. ಇವರ ಬರಹಗಳು ನಾಟಕಕ್ಕೆ ಮಾತ್ರ ಸೀಮಿತವಾಗಿರದೇ ಕಾವ್ಯದಲ್ಲಿಯೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಕ್ಷಣಿಕವಲ್ಲದ ಕ್ಷಣಗಳು, ಹೇಳಬೇಕೆನಿಸಿದ್ದು, ನನ್ನ ಪ್ರಿಯತಮನ ಬಾಳು, ಭಾವಕೋಶ ಇವರ ಪ್ರಮುಖ ಕವನ ಸಂಕಲನಗಳು. ಸುಮಾರು 42ಕ್ಕೂ ...

READ MORE

Related Books