ಸೆಜುವಾನ್‌ ನಗರದ ಸಾಧ್ವಿ

Author : ಕೆ.ವಿ. ಸುಬ್ಬಣ್ಣ

Pages 142

₹ 180.00




Year of Publication: 1987
Published by: ಅಕ್ಷರ ಪ್ರಕಾಶನ
Address: ಹೆಗ್ಗೋಡು, ಹೊನ್ನೇಶ್ವರ ಅಂಚೆ, ಸಾಗರ ತಾಲೂಕು, ಶಿವಮೊಗ್ಗ - 57741 ಅಕ್ಷರ ಪ್ರಕಾಶನ Address: ಹೆಗ್ಗೋಡು, ಹೊನ್ನೇಶ್ವರ ಅಂಚೆ, ಸಾಗರ ತಾಲೂಕು, ಶಿವಮೊಗ್ಗ - 577417
Phone: 9480280401

Synopsys

ಕೆ. ವಿ. ಸುಬ್ಬಣ್ಣ ಅವರು ಅನುವಾದಿಸಿದ ನಾಟಕ ಕೃತಿ ʼಸೆಜುವಾನ್‌ ನಗರದ ಸಾಧ್ವಿʼ. ಇದು ಜರ್ಮನಿಯ ನಾಟಕಕಾರ ಬರ್ಟೊಲ್ಟ್‌ ಬ್ರೆಕ್ಟ್‌ನ ’ಗುಡ್‌ ವುಮನ್‌ ಆಫ್‌ ಸೆಟ್ಜುವಾನ್‌ʼ ಎಂಬ ನಾಟಕದ ಅನುವಾದವಾಗಿದೆ. ಎಪಿಕ್ ಶೈಲಿಯನ್ನು ವಿಷದಗೊಳಿಸುವ ಮುಖ್ಯ ನಾಟಕಗಳಲ್ಲಿ ಇದೊಂದು. ಕಥೆ ಚೀನಾದಲ್ಲಿ ನಡೆದಂತೆ ಚಿತ್ರಿತವಾಗಿದ್ದರೂ ಈ ನಾಟಕ ಬಹುಮಟ್ಟಿಗೆ ಕಾಲದೇಶಗಳ ಬದ್ಧತೆಯನ್ನು ಮೀರಿಕೊಂಡದ್ದಾಗಿದೆ. ಸಮಾಜದ ಕೆಳಸ್ತರದಲ್ಲಿರುವ ಮಹಿಳೆಯೊಬ್ಬಳು ಒಳ್ಳೆಯವಳಾಗಿದ್ದುಕೊಂಡು ಅಕ್ಕಪಕ್ಕದವರಿಗೆ ಒಳ್ಳೆಯದು ಮಾಡುತ್ತ, ಪ್ರೀತಿಗಾಗಿ ಹಂಬಲಿಸುತ್ತ, ತನ್ನ ಕೂಸಿನ ಬದುಕು ತನ್ನದಕ್ಕಿಂತ ಉತ್ತಮವಾಗಬೇಕೆಂದು ಹಾರೈಸುತ್ತ ತನ್ನ ಪರಿಸರದ ಕಹಿಕೋಟಲೆ ಹಿಂಸೆಗಳ ದೆಸೆಯಿಂದ ವಿಫಲಳಾಗುವುದೇ ಈ ನಾಟಕದ ವಸ್ತು. ಸಾಧ್ವಿಯಾಗಿ ಬದುಕುವುದು ದುಸ್ಸಾಧ್ಯವಾದಾಗ ಶೆನ್‍ತೆ, ನಿಷ್ಠುರ ಮನಸ್ಸಿನ ಶುಯಿತಾನ ಮುಖವಾಡ ತೊಡುತ್ತಾಳೆ. ಕ್ರಮೇಣ ಆಕೆಗೆ ಶುಯಿತಾನ ಮುಖವಾಡವೇ ಹೆಚ್ಚು ಹೆಚ್ಚು ಅಗತ್ಯವಾಗುತ್ತ ಹೋಗುತ್ತದೆ. ಈ ಜಗತ್ತಿನಲ್ಲಿ ಒಳ್ಳೆಯವರಾಗಿ ಉಳಿಯುವುದು ಹೇಗೆ? ಎಂದು ಬ್ರೆಕ್ಟ್ ನಮ್ಮನ್ನೇ ಪ್ರಶ್ನಿಸುತ್ತಾ ಯೋಚಿಸಲು ಬಿಡುತ್ತಾನೆ.

About the Author

ಕೆ.ವಿ. ಸುಬ್ಬಣ್ಣ
(20 February 1931)

ಕೆ.ವಿ. ಸುಬ್ಬಣ್ಣ ಕನ್ನಡದ ಅಪರೂಪದ ವ್ಯಕ್ತಿಗಳಲ್ಲಿ ಒಬ್ಬರು. ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ. ಎ. ಪದವಿ ಪಡೆದ ನಂತರ ಅವರು ಕೃಷಿಕಾಯಕ ಆರಂಭಿಸಿದರು. ಸಾಹಿತ್ಯ ಕ್ಷೇತ್ರದಲ್ಲಿ ಅವರು ಮಾಡಿದ ಸಾಧನೆ ಅಚ್ಚರಿಪಡುವ ಹಾಗಿದೆ. ಕವಿ, ನಾಟಕಕಾರ, ಅನುವಾದಕರಾಗಿದ್ದ ಅವರು 'ಅಕ್ಷರ ಪ್ರಕಾಶನ' 'ನೀನಾಸಂ ರಂಗ ಚಟುವಟಿಕೆ'ಗಳನ್ನು ನಿರ್ವಹಿಸಿದವರು. ಭಾರತೀಯ ಸಂಸ್ಕೃತಿಗೆ ವಿಶಿಷ್ಟ ಮಾದರಿ ಎನ್ನುವ ಹಾಗೆ ಸಾಹಿತ್ಯಕ, ಸಾಂಸ್ಕೃತಿಕ ಚಟುವಟಿಕೆಗಳನ್ನು ಪುಟ್ಟಹಳ್ಳಿಯಲ್ಲಿ ನಡೆಸಿದ್ದು ಒಂದು ದಾಖಲೆ. ಮ್ಯಾಗ್ಸೆಸ್ಸೆ ಪ್ರಶಸ್ತಿಯಿಂದ ಹೆಗ್ಗೋಡು ಅಂತರರಾಷ್ಟ್ರೀಯ ನಕ್ಷೆಯಲ್ಲಿ ದಾಖಲಾಯಿತು. ಕೆ.ವಿ. ಸುಬ್ಬಣ್ಣ ಒಬ್ಬ ವ್ಯಕ್ತಿಯಲ್ಲ, ಮಹಾನ್ ಶಕ್ತಿ. ಅವರ ಬೆಳವಣಿಗೆ ವೈಯಕ್ತಿಕವಾದದ್ದಲ್ಲ, ಸಾಂಘಿಕವಾದದ್ದು. 'ಅಕ್ಷರ ಪ್ರಕಾಶನದ ಮೂಲಕ , 'ನೀನಾಸಂ' ಮೂಲಕ ಅನೇಕ ಪ್ರತಿಭೆಗಳನ್ನು ಅವರು ...

READ MORE

Related Books