ಸೆಕ್ಸ್ ವರ್ಕರ್ ಒಬ್ಬಳ ಆತ್ಮಕಥನ

Author : ಕೆ. ನಾರಾಯಣಸ್ವಾಮಿ

Pages 204

₹ 150.00
Year of Publication: 2009
Published by: ಸೃಷ್ಟಿ ಪ್ರಕಾಶನ
Address: ಸೃಷ್ಟಿ ಪ್ರಕಾಶನ, #1445, 3ನೇ ಕ್ರಾಸ್, ಕಾರ್ಪೋರೇಷನ್ ಕಾಲೋನಿ, ಗೋವಿಂದರಾಜನಗರ, ಬೆಂಗಳೂರು-560079
Phone: 9480966668

Synopsys

ಮಲಯಾಳಂ ಭಾಷೆಯಲ್ಲಿ ನಾನಾ ವಿವಾದಗಳಿಗೆ ಕಾರಣವಾದ ಜ್ಞಾನ್ ಲೈಂಗಿಕ ತೊಳಿಲಾಳಿ (ನಾನು ಲೈಂಗಿಕ ಕಾರ್ಮಿಕಳು) ಎಂಬ ಕೃತಿ ಅಪೂರ್ವವಾದದ್ದು. ಆ ಕೃತಿಯನ್ನು ಕೆ.ನಾರಾಯಣಸ್ವಾಮಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.

ಕೃತಿಯ ಮೂಲ ಲೇಖಕಿ ನಳಿನಿ ಜಮೀಲಾ ಲೈಂಗಿಕ ಸೇವಕಿ-ಕಾರ್ಯಕರ್ತೆ ಅಷ್ಟೇ ಅಲ್ಲದೆ ಓರ್ವ ಮಗಳಾಗಿ, ತಾಯಿಯಾಗಿ, ಪತ್ನಿಯಾಗಿ, ತನ್ನ ಒಡನಾಡಿಗಳ ಹಿತಾಸಕ್ತಿಗಳನ್ನು ಕಾಪಾಡುವ ಹೋರಾಟಗಾರ್ತಿಯಾಗಿ, ಬಂಡಾಯಗಾರ್ತಿಯಾಗಿ, ಕಾಯಕವೇ ಕೈಲಾಸ ಎಂದು ತನ್ನ ವೃತ್ತಿಧರ್ಮವನ್ನು ಪ್ರಾಮಾಣಿಕತೆಯಿಂದ ಪಾಲಿಸಿದ್ದಾರೆ, ಆ ಎಲ್ಲವನ್ನು ತನ್ನ ಆತ್ಮಕಥೆ  ನಾನ್ ಲೈಂಗಿಕ ತೊಳಿಲಾಳಿ ಎಂಬ ಕೃತಿಯಲ್ಲಿ ದಾಖಲಿಸಿದ್ದಾರೆ. ಈ ಪುಸ್ತಕ ಕೇರಳದಲ್ಲಿ ಅನೇಕ ವಿವಾದಗಳ ಸೃಷ್ಟಿಗೆ ಕಾರಣವಾಗಿದೆ. ಈ ಕೃತಿ ಈಗಾಗಲೇ ತಮಿಳು, ತೆಲುಗು, ಮರಾಠಿ, ಹಿಂದಿ, ಇಂಗ್ಲೀಷ್, ಮತ್ತು ಫ್ರೆಂಚ್ ಭಾಷೆಗಳಿಗೆ ಅನುವಾದಗೊಂಡಿದೆ. ಅತ್ಯಂತ ನಿರ್ಭಯವಾಗಿ, ನಿಸ್ಸಂಕೋಚವಾಗಿ, ನಿರ್ದಾಕ್ಷಿಣ್ಯವಾಗಿ, ನಿಷ್ಠುರವಾಗಿ ಬರೆದಿರುವ ಈ ಆತ್ಮಕಥೆ, ಕರುಣಾಜನಕವಾದ, ದಾರುಣವಾದ ವಾಸ್ತವೀಕತೆಯಿಂದ ತತ್ತರಿಸುವಂತೆ ಮಾಡಿ, ಕುತೂಹಲ ಕೆರಳಿಸುತ್ತಾ ಹೋಗುತ್ತದೆ. ಓದುಗರಿಗೆ ಒಂದು ಹೊಸ ಜಗತ್ತಿನಲ್ಲಿ ಪ್ರವೇಶಿಸಿದ ಅನುಭವವಾಗುತ್ತದೆ ಎನ್ನುತ್ತಾರೆ ಲೇಖಕ, ಅನುವಾದಕ ಕೆ.ನಾರಾಯಣಸ್ವಾಮಿ. 

About the Author

ಕೆ. ನಾರಾಯಣಸ್ವಾಮಿ

ಮಲಯಾಳಂ ಭಾಷೆಯಲ್ಲಿ ನಾನಾ ವಿವಾದಗಳಿಗೆ ಕಾರಣವಾದ ಜ್ಞಾನ್ ಲೈಂಗಿಕ ತೊಳಿಲಾಳಿ (ನಾನು ಲೈಂಗಿಕ ಕಾರ್ಮಿಕಳು) ಎಂಬ ಕೃತಿ ಅಪೂರ್ವವಾದದ್ದು. ಆ ಕೃತಿಯನ್ನು ಕೆ.ನಾರಾಯಣಸ್ವಾಮಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ...

READ MORE

Related Books