ಶಬರಿಮಲೆ ಸ್ವಾಮಿ ಅಯ್ಯಪ್ಪ

Author : ಅಶ್ವಿನಿ ಕೋಡಿಬೈಲು

Pages 64

₹ 60.00




Year of Publication: 2019
Published by: ನಲಂದ ಪ್ರಕಾಶನ
Address: ಸುಳ್ಯ, ದಕ್ಷಿಣ ಕನ್ನಡ

Synopsys

'ಸೌಗಂಧಿಕಾ' ಎಂಬ ಕವನ ಸಂಕಲನವನ್ನೂ, ಜನಮನ್ನಣೆ ಗಳಿಸಿದ 'ಶಬರಿಮಲೆ ಸ್ವಾಮಿ ಅಯ್ಯಪ್ಪ' ಎಂಬ ರೂಪಕದ ಕೃತಿಯನ್ನೂ ಸಾರಸ್ವತ ಲೋಕಕ್ಕೆನೀಡಿದ್ದಾರೆ. ಇವರು ಇದೀಗ ಇವರ ಹಲವಾರು ಭಾವಗೀತೆಗಳು ಹಾಡಾಗಿ ಕೇಳುಗರನ್ನು ಆರ‍್ಷಿಸಿ ಜನಪ್ರಿಯತೆ ಗಳಿಸುತ್ತಿದ್ದು 'ಬಂದಿ ಏಕಾದೆ ಮನವೇ' ಸುಪ್ರಸಿದ್ಧ ಗೀತೆಗಳಲ್ಲಿ ಮೊದಲನೆಯದು. ಹಲವಾರು ಸಂಘಸಂಸ್ಥೆಗಳು ಇವರ ಸಾಹಿತ್ಯ ಸೇವೆಯನ್ನು ಗುರುತಿಸಿ ಗೌರವಿಸಿದ್ದು ೨೦೨೨ನೇ ಸಾಲಿನಲ್ಲಿ ಚುಟುಕು ಸಾಹಿತ್ಯ ಪರಿಷತ್ತಿನ ಸುಳ್ಯ ಘಟಕದ ಅಧ್ಯಕ್ಷರಾಗಿ ‌ನೇಮಕಗೊಂಡಿದ್ದಾರೆ. ಅವನಿ ಮತ್ತು ಆತ್ಮೀಯ ಎಂಬ ಎರಡು ಮುದ್ದಾದ ಮಕ್ಕಳ ತಾಯಿಯಾಗಿ ಗೃಹಕೃತ್ಯಗಳಲ್ಲೇ ಸಂತೃಪ್ತ ಬದುಕನ್ನು ಕಾಣುತ್ತಿರುವ ಇವರಿಂದ ಇನ್ನಷ್ಟು ಕೃತಿಗಳು ಹೊರಬರಲಿ ಎಂದು ಬಿ.‌ ಐತ್ತಪ್ಪ ನಾಯ್ಕ್ ಬೆನ್ನುಡಿಯಲ್ಲಿ ಹೇಳಿದ್ದಾರೆ.

About the Author

ಅಶ್ವಿನಿ ಕೋಡಿಬೈಲು

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಕೃಷಿ ಕುಟುಂಬದವರಾದ ಅಶ್ವಿನಿ ಕೋಡಿಬೈಲು ಅವರು ವಳಂಗಜೆ ಗೋಪಾಕೃಷ್ಣ ಭಟ್ ಹಾಗೂ ಶಂಕರಿ ದಂಪತಿಯ ಪುತ್ರಿ, ರಾಮಚಂದ್ರ ಕೋಡಿಬೈಲು ಅವರ ಪತ್ನಿ. ಪ್ರಾಥಮಿಕ ಶಿಕ್ಷಣವನ್ನು ಕೆದಿಲ ಅನುದಾನಿತ ಹಿ.ಪ್ರಾ.ಶಾಲೆಯಲ್ಲೂ, ಪ್ರೌಢ ಶಿಕ್ಷಣವನ್ನು ಕರ್ನಾಟಕ ಪ್ರೌಢಶಾಲೆ ಮಾಣಿಯಲ್ಲೂ ಪಡೆದ ಇವರು ಪುತ್ತೂರಿನ ವಿವೇಕಾನಂದ ಮಹಾವಿದ್ಯಾಲಯದಲ್ಲಿ ಬಿ.ಎಸ್ಸಿ ಪದವಿ ಪೂರೈಸಿದವರು. ಮೈಸೂರು ಮುಕ್ತ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತದ ಸ್ನಾತಕೋತ್ತರ ಪದವಿಯನ್ನು ಚಿನ್ನದ ಪದಕದೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ಪೂರೈಸಿದ ಪ್ರತಿಭಾವಂತೆ. ಕೃತಿ: ಸೌಗಂಧಿಕಾ ...

READ MORE

Related Books