ಶಬ್ದಚಿತ್ರ

Author : ನಾಗೇಂದ್ರ ಮಸೂತಿ

Pages 122

₹ 100.00




Year of Publication: 2011
Published by: ಕನ್ನಡ ನಾಡು ಪ್ರಕಾಶನ
Address: ಕನ್ನಡ ನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘ ನಿಯಮಿತ ಗುಲಬರ್ಗಾ

Synopsys

ಡಾ.ನಾಗೇಂದ್ರ ಮಸೂತಿ ಅವರು  ಭಾಷಾ ವಿಜ್ಞಾನದಲ್ಲಿ ಆಸಕ್ತರಾಗಿದ್ದಾರೆ. ಇದರಲ್ಲಿ ಒಟ್ಟು 15  ಲೇಖನಗಳ ಸಂಗ್ರಹವಿದೆ. ಕನ್ನಡ ಶಾಸನ ಮತ್ತು ಸಾಹಿತ್ಯದ ಭಾಷೆಯ ಸ್ವರೂಪ, ಕಲಬುರುಗಿ ಮತ್ತು ಸುತ್ತಲಿನ ಪ್ರದೇಶದ ಭಾಷಾ ವ್ಯವಸ್ಥೆ   ಉಪಭಾಷೆ, ಆಡು ನುಡಿಯ ಬಳಕೆಯಲ್ಲಿ ಇರುವ ಸಂಖ್ಯಾಚಕಗಳು, ಯಾದಗಿರಿ ಜಿಲ್ಲೆಯ ಜನಪದ ಕಥೆಗಳ ಭಾಷಿಕ ವಿಶ್ಲೇ಼ಷಣೆ, ಉಳ್ಳವರು ಶಿವಾಲಯವ ಮಾಡುವರು, ವೈಜ್ಞಾನಿಕ ವಿಶ್ಲೇ಼ಷಣೇ ಲೇಖನಗಳಿವೆ. ಮ.ಗು.ಬಿರಾದಾರ, ಬಿ.ಮಹಾದೇವಪ್ಪ, ಶಾಂತವೀರ, ಶಿವಚಾರ್ಯರ ಸಾಹಿತ್ಯ ಕುರಿತ ಬರಹಗಳು ಕೂಡ ಈ ಕೃತಿಯಲ್ಲಿದೆ. ಇಲ್ಲಿರುವ ಲೇಖನಗಳು ಭಾಷೆ, ಸಾಹಿತ್ಯ, ಸಾಹಿತ್ಯ ವಿಮರ್ಶೆಯನ್ನು ಒಳಗೊಂಡಿದೆ. ಕನ್ನಡ ಸಾಹಿತ್ಯದ ಮೂಲ ಆಕಾರಗಳಾದ ಶಾಸನದಿಂದ ಪ್ರಾರಂಭಗೊಂಡು ಪ್ರಚಲಿತ ಸಾಹಿತ್ಯ ಚಟುವಟಿಕೆಗಳ ಆಭಿವ್ಯಕ್ತಿಯ ಸ್ವೂರೂಪವನ್ನು ಇಲ್ಲಿರುವ ಲೇಖನಗಳು ವಿವರಿಸುತ್ತದೆ.

 

About the Author

ನಾಗೇಂದ್ರ ಮಸೂತಿ
(20 June 1964)

ಕಲಬುರಗಿ ನಿವಾಸಿಯಾಗಿರುವ ಡಾ. ನಾಗೇಂದ್ರ ಎಸ್. ಮಸೂತಿ ಅವರು ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ವಿವಿಧ ಕಾಲೇಜುಗಳಲ್ಲಿ ಕನ್ನಡ ಅಧ್ಯಾಪಕರಾಗಿ, ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕಲಬುರಗಿಯ ವಿ.ಜಿ. ಮಹಿಳಾ ಪದವಿ ಕಾಲೇಜಿನಲ್ಲಿ ಸಹಪ್ರಾಧ್ಯಾಪಕರಾಗಿದ್ದಾರೆ.  ಕಲಬುರ್ಗಿ ಕನ್ನಡ; ವರ್ಣನಾತ್ಮಕ ವ್ಯಾಕರಣ ವಿಷಯವಾಗಿ ಸಲ್ಲಿಸಿದ ಮಹಾಪ್ರಬಂಧಕ್ಕೆ ಗುಲಬರ್ಗಾ ವಿ.ವಿ. ಪಿಎಚ್.ಡಿ. ನೀಡಿದೆ. ’ಗುರುಸಿದ್ಧ’ ಅಂಕಿತದಲ್ಲಿ ಇವರು ವಚನಗಳನ್ನು ಬರೆಯುತ್ತಾರೆ. ಕಲ್ಯಾಣರಾವ ಪಾಟೀಲ್‌ ಮತ್ತು ಶಿವಶರಣಪ್ಪ ಮೋತಕಪಲ್ಲಿ ಅವರು ಮಸೂತಿ ಅವರ ಜೀವನ- ಸಾಹಿತ್ಯ ಕುರಿತ ’ನುಡಿತೋರಣ’ ಪುಸ್ತಕವನ್ನು ಸಂಪಾದಿಸಿದ್ದಾರೆ. ...

READ MORE

Related Books