ಶಬ್ಧದ ಲಜ್ಜೆಯ ನೋಡಾ

Author : ಹೆಚ್. ಜಯಪ್ರಕಾಶ್ ಶೆಟ್ಟಿ

Pages 224

₹ 150.00




Year of Publication: 2012
Published by: ಜ್ಯೋತಿ ಪ್ರಕಾಶನ
Address: ಎಂ.45, ಕರ್ನಾಟಕ ಬ್ಯಾಂಕ್ ರೋಡ್, ವಿವೇಕಾನಂದ ಸರ್ಕಲ್ ಹತ್ತಿರ, ಮೈಸೂರು-570 023

Synopsys

‘ಶಬ್ಧದ ಲಜ್ಜೆಯ ನೋಡಾ’ ಕೃತಿಯು ಜಯಪ್ರಕಾಶ್ ಶೆಟ್ಟಿ ಹೆಚ್. ಅವರ ವಿಮರ್ಶಾ ಲೇಖನಸಂಕಲನವಾಗಿದೆ. ಹೊಸ ಬಗೆಯಲ್ಲಿ ಅವಲೋಕನ ಮಾಡಿರುವ ವಿಶಿಷ್ಟ ಕೃತಿ. ಇಲ್ಲಿ ಹನ್ನೆರಡು ವಿಮರ್ಶಾ ಲೇಖನಗಳಿದ್ದು, ಕೊನೆಯ ಎರಡು ಲೇಖನಗಳನ್ನು ಹೊರತುಪಡಿಸಿ ಉಳಿದೆಲ್ಲಾ ಲೇಖನಗಳು ಹಳೆಗನ್ನಡದ ಸಾಹಿತ್ಯವನ್ನು ಕುರಿತು ಚರ್ಚಿಸುವಂಥವು. ಬಿಡಿ ಲೇಖನಗಳಾಗಿದ್ದರೂ ಸಹ ಇಲ್ಲಿನ ಎಲ್ಲಾ ಲೇಖನಗಳಲ್ಲಿಯೂ ಕೆಲಸ ಮಾಡಿರುವ ದೃಷ್ಟಿಕೋನ ಆಲೋಚನಾ ಕ್ರಮ, ಪ್ರಗತಿಪರ ನಿಲುವು ಒಂದೇ ಆಗಿರುವುದರಿಂದ ಮಹಾಪ್ರಬಂಧದ ಹರಹು ಈ ಕೃತಿಗೆ ದಕ್ಕಿದೆ, ಮೊದಲಿನ ನಾಲ್ಕು ಲೇಖನಗಳಲ್ಲಿ ಪ್ರಾಚೀನ ಸಾಹಿತ್ಯದ, ಅದರಲ್ಲಿಯೂ ವಿಶೇಷವಾಗಿ ಪಂಪನ ಕಾವ್ಯಗಳನ್ನು ಕುರಿತ ವಿಶ್ಲೇಷಣೆಯಿದೆ. ಒಟ್ಟಾರೆಯಾಗಿ ಈ ಕೃತಿಯು ಹಲವಾರು ವಿಚಾರಗಳನ್ನು ಕಟ್ಟಿಕೊಡುತ್ತದೆ.  

About the Author

ಹೆಚ್. ಜಯಪ್ರಕಾಶ್ ಶೆಟ್ಟಿ

ಜಯಪ್ರಕಾಶ್ ಶೆಟ್ಟಿ ಹೆಚ್ ಅವರು ಮೂಲತಃ ಕುಂದಾಪುರ ಗ್ರಾಮದ ಅಂಪಾರಿನವರು. ವೃತ್ತಿಯಲ್ಲಿ ಅಧ್ಯಾಪಕರು. ತಮ್ಮ ಪ್ರಾಥಮಿಕ, ಪ್ರೌಢ ಹಾಗೂ ಪದವಿ ವಿದ್ಯಾಭ್ಯಾಸವನ್ನು ಬಸ್ರೂರಿನಲ್ಲಿಯೇ ಪೂರೈಸಿದರು. 1993ರಲ್ಲಿ ಮಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ ಪದವಿಯನ್ನು ಪಡೆದು, ಪ್ರೊ ರಹಮತ್ ತರಿಕೆರೆಯವರ ಮಾರ್ಗದರ್ಶನದಲ್ಲಿ ‘ಪಂಪಕಾವ್ಯಗಳ ವಿಭಿನ್ನ ಓದುಗಳು: ತಾತ್ವಿಕ ವಿಶ್ಲೇಷಣೆ’ ಮಹಾಪ್ರಬಂಧವನ್ನು ಮಂಡಿಸಿ, 2014ರಲ್ಲಿ ಹಂಪಿ ವಿಶ್ವವಿದ್ಯಾಲಯದಿಂದ ಪಿ.ಹೆಚ್.ಡಿ ಪದವಿಯನ್ನು ಪಡೆದರು. ಪ್ರಸ್ತುತ ತೆಂಕನಿಡಿಯೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2016ನೇ ಸಾಲಿನ ಪಂಪ ಪ್ರಶಸ್ತಿ, ಕನಕಶ್ರೀ, ಕುಂದಣಗಾರ, ಅತ್ತಿಮಬ್ಬೆ, ...

READ MORE

Reviews

(ಹೊಸತು ಜನವರಿ 2012, ಪುಸ್ತಕ ಪರಿಚಯ)

ಇದು ನಮ್ಮ ಕನ್ನಡ ಸಾಹಿತ್ಯವನ್ನು ಹೊಸ ಬಗೆಯಲ್ಲಿ ಅವಲೋಕನ ಮಾಡಿರುವ ವಿಶಿಷ್ಟ ಕೃತಿ. ಇಲ್ಲಿ ಹನ್ನೆರಡು ವಿಮರ್ಶಾ ಲೇಖನಗಳಿದ್ದು, ಕೊನೆಯ ಎರಡು ಲೇಖನಗಳನ್ನು ಹೊರತುಪಡಿಸಿ ಉಳಿದೆಲ್ಲಾ ಲೇಖನಗಳು ಹಳೆಗನ್ನಡದ ಸಾಹಿತ್ಯವನ್ನು ಕುರಿತು ಚರ್ಚಿಸುವಂಥವು. ಬಿಡಿ ಲೇಖನಗಳಾಗಿದ್ದರೂ ಸಹ ಇಲ್ಲಿನ ಎಲ್ಲಾ ಲೇಖನಗಳಲ್ಲಿಯೂ ಕೆಲಸ ಮಾಡಿರುವ ದೃಷ್ಟಿಕೋನ ಆಲೋಚನಾ ಕ್ರಮ, ಪ್ರಗತಿಪರ ನಿಲುವು ಒಂದೇ ಆಗಿರುವುದರಿಂದ ಮಹಾಪ್ರಬಂಧದ ಹರಹು ಈ ಕೃತಿಗೆ ದಕ್ಕಿದೆ, ಮೊದಲಿನ ನಾಲ್ಕು ಲೇಖನಗಳಲ್ಲಿ ಪ್ರಾಚೀನ ಸಾಹಿತ್ಯದ, ಅದರಲ್ಲಿಯೂ ವಿಶೇಷವಾಗಿ ಪಂಪನ ಕಾವ್ಯಗಳನ್ನು ಕುರಿತ ವಿಶ್ಲೇಷಣೆಯಿದೆ. ಆ ಮೂಲಕ ಕನ್ನಡಕ್ಕೆ ಕನ್ನಡದ್ದೇ ಆದ ಕಾವ್ಯಮೀಮಾಂಸೆ ರೂಪಿಸುವ ಕೆ. ವಿ. ಸುಬ್ಬಣ್ಣರವರ 'ಪಂಪನ ಕವಿತೆ : ಅನುಸಂಧಾನಕ್ಕೆ ಹೊಸ ಮಾರ್ಗ' ಎಂಬ ಲೇಖನ ಹಾಗೂ ರಹಮತ್ ತರೀಕೆರೆಯವರ 'ಕನ್ನಡ ಸಾಹಿತ್ಯಮೀಮಾಂಸೆ ಭಾಗ-೧ ಮತ್ತು ಭಾಗ-೨' ಮು೦ದುವರಿಕೆಯಂತೆ ನಮಗೆ ಲೇಖನಗಳು ಕಾಣುತ್ತವೆ. ಕೃತಿಯ ಕೊನೆಯ ಭಾಗದಲ್ಲಿ ಮಧ್ಯಕಾಲೀನ ಸಾಹಿತ್ಯಕ್ಕೆ ಪ್ರಾತಿನಿಧಿಕ ವೆಂಬಂತೆ ಹರಿಹರ ಮತ್ತು ಕನಕದಾಸರ ಕೃತಿಗಳನ್ನು, ಆಧುನಿಕ ಸಾಹಿತ್ಯವನ್ನು ಪ್ರತಿನಿಧಿಸುವಂತೆ ರಾಘವೇಂದ್ರ ಪಾಟೀಲ ಮತ್ತು ಲಕ್ಷ್ಮಣ ಕೊಡಸೆಯವರ ಕೃತಿಗಳನ್ನು ಚರ್ಚೆಗೆ ಎತ್ತಿಕೊಳ್ಳಲಾಗಿದೆ. ಒಟ್ಟಿನಲ್ಲಿ ಇಲ್ಲಿನ ಎಲ್ಲ ಲೇಖನಗಳನ್ನು ಸಾಹಿತ್ಯ ವಿಮರ್ಶೆ, ಸಂಸ್ಕೃತ ವಿಮರ್ಶೆ ಮತ್ತು ಸಮಾಜ ವಿಮರ್ಶೆಯ ಲೇಖನಗಳಂತೆ ಓದಿಸಿಕೊಳ್ಳುತ್ತವೆ. ಒಟ್ಟಿನಲ್ಲಿ ನಮ್ಮ ಕನ್ನಡ ಸಾಹಿತ್ಯವನ್ನು ಹೊಸ ರೀತಿಯಲ್ಲಿ ಓದುವುದು ಹೀಗೆ ಎಂಬುದಕ್ಕೆ ಹಲವು ಒಳನೋಟಗಳನ್ನು ನೀಡುವ ಮಹತ್ವದ ಕೃತಿಯಿದು.

 

 

Related Books