ಷೇಕ್ಸ್‌ಪಿಯರ್‌ನ ಟೆಂಪೆಸ್ಟ್‌ ಒಂದು ಅಧ್ಯಯನ

Author : ಕರೀಗೌಡ ಬೀಚನಹಳ್ಳಿ

Pages 156

₹ 100.00




Year of Publication: 2010
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ,ವಿದ್ಯಾರಣ್ಯ, ಹಂಪಿ-583276
Phone: 08022372388

Synopsys

ವಿಲಿಯಂ ಷೇಕ್ಸ್‌ ಪಿಯರ್ ಜಗತ್ತಿನ ಮಹಾನ್ ನಾಟಕಕಾರ. ಕನ್ನಡ ರಂಗಭೂಮಿಗೆ, ಶಾಲಾ-ಕಾಲೇಜಿನ ಪಠ್ಯಪುಸ್ತಕಗಳಿಗೆ, ಕನ್ನಡದ ಭಾಷಾಂತರ ಹಾಗೂ ರೂಪಾಂತರವಾಗಿರುವ ಶೇಕ್ಸ್‌ಪಿಯರ್‌ನ ನಾಟಕಗಳಿಗೆ ಶತಮಾನದ ಇತಿಹಾಸವಿದೆ. ವಿವಿಧ ಬರಹಗಾರರು ಶೇಕ್ಸ್‌ಪಿಯರ್‌ನ ನಾಟಕಗಳನ್ನು ವಿವಿಧ ಬಗೆಯಲ್ಲಿ ಅನುವಾದಿಸಿದ್ದಾರೆ. ಈ ನಿಟ್ಟಿನಲ್ಲಿ ಅವರ ’ಟೆಂಪೆಸ್ಟ್‌' ನಾಟಕವನ್ನು ಕರೀಗೌಡ ಬೀಚನಹಳ್ಳಿ ಅವರು ವಿವಿಧ ದೃಷ್ಟಿಕೋನಗಳಿಂದ ಆಳವಾದ ಅಧ್ಯಯನಕ್ಕೆ ಒಳಪಡಿಸಿ ಅತ್ಯಂತ ಸೂಕ್ಷ್ಮವಾದ ಒಳನೋಟಗಳನ್ನು ನೀಡಿದ್ದಾರೆ.

 

About the Author

ಕರೀಗೌಡ ಬೀಚನಹಳ್ಳಿ
(10 September 1951)

ಕರೀಗೌಡ ಬೀಚನಹಳ್ಳಿ ಅವರು 1951 ಸೆಪ್ಟೆಂಬರ್‌ 10ರಂದು ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಬೀಚನಹಳ್ಳಿಯಲ್ಲಿ ಜನಿಸಿದರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು, ವ್ಯಷ್ಟಿ-ಸಮಷ್ಟಿ ಪ್ರಬಂಧ ಮಂಡಿಸಿ  ಪಿಎಚ್‌ಡಿ ಪದವಿಯನ್ನು ಪಡೆದಿದ್ದಾರೆ. .ಬೆಂಗಳೂರು ವಿಶ್ವವಿದ್ಯಾಲಯದ ಪ್ರಸಾರಂಗದಲ್ಲಿ ಕಾರ್ಯ ನಿರ್ವಹಿಸಿದ ನಿವರು, ಹಂಪಿ ವಿಶ್ವವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ, ಪ್ರಸಾರಂಗದ ನಿರ್ದೇಶಕರಾಗಿ ನಂತರ ಕುಲಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.  ಕನ್ನಡ ಸಾಹಿತ್ಯದೆಡೆಗಿನ ಒಲವು ಕಾಲೇಜು ದಿನಗಳಿಂದಲೇ ಸಾಹಿತ್ಯ ಕೃಷಿಯಲ್ಲಿ ತೊಡಗುವಂತೆ ಮಾಡಿತ್ತು. ಇವರು ಬರೆದ ಕಥೆ, ಕವನಗಳು ತುಮಕೂರು ವಿಶ್ವವಿದ್ಯಾಲಯ ಪದವಿ ತರಗತಿಗಳಿಗೆ ಪಠ್ಯವಾಗಿವೆ. ಇವರ ಕಥೆಗಳು ...

READ MORE

Related Books