
`ಶಾಲೆಗಳಲ್ಲಿ ಸಮಾಜ ವಿಜ್ಞಾನದ ಬೋಧನೆ' ಅಲೆಕ್ಸ್ ಎಂ ಚಾರ್ಜ್ ಹಾಗೂ ಅಮನ್ ದುದಾನ್ ಅವರ ಮೂಲ ಕೃತಿಯಾಗಿದೆ. ಸಹನಾ ಹೆಗಡೆ ಹಾಗೂ ರೋಸಿ ಡಿ’ಸೋಜಾ ಅವರು ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. 2005ರಲ್ಲಿ ಭಾರತದ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಲಿ ಭಾರತೀಯ ಶಾಲೆಗಳಲ್ಲಿ ಸಾಮಾಜಿಕ ವಿಜ್ಞಾನವನ್ನು ಕಲಿಸುವ ಹೊಸ ವಿಧಾನದ ಪಠ್ಯಪುಸ್ತಕವನ್ನು ಪರಿಚಯಿಸಿದ ಸಂದರ್ಭದಲ್ಲಿ ಈ ಬೋಧನಾ ವಿಧಾನದ ಹಿಂದಿರುವ ವಿವೇಚನೆಯನ್ನು ಪರಿಶೀಲಿಸಲು ಮತ್ತು ವಿವರಿಸಲು ಇಂಗ್ಲಿಷ್‌ನಲ್ಲಿ ರಚಿಸಿದ್ದಾಗಿದೆ. ಈ ಪುಸ್ತಕವನ್ನು ಶಿಕ್ಷಣ ಕ್ಷೇತ್ರದ ಪ್ರಮುಖ ಭಾಗೀದಾರರಾದ ಪೋಷಕರು, ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಶಿಕ್ಷಣ ತಜ್ಞರ ಕಾಳಜಿಗಳನ್ನು ಉದ್ದೇಶಿಸಿ ಚರ್ಚಿಸುವ ರೀತಿಯಲ್ಲಿ ಕ್ರಮವಾಗಿ ವಿಂಗಡಿಸಿ ಸಂಯೋಜಿಸಲಾಗಿದೆ.
©2025 Book Brahma Private Limited.