ಶಾಮಪ್ರಸಾದ್ ಮುಖರ್ಜಿ

Author : ಬಿ.ಎಸ್. ಜಯಪ್ರಕಾಶ ನಾರಾಯಣ

Pages 518

₹ 350.00
Year of Publication: 2022
Published by: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ
Address: ಎನ್ ಜಿಇಎಫ್ ಬಡಾವಣೆ, 2ನೇ ಹಂತ, ಚಂದ್ರಾ ಲೇಔಟ್, ಬೆಂಗಳೂರು-560056

Synopsys

ಹಿರಿಯ ಲೇಖಕ ತಥಾಗತ ರಾಯ್ ಅವರು ಇಂಗ್ಲಿಷಿನಲ್ಲಿ ರಚಿಸಿದ ಕೃತಿಯನ್ನು ಸಾಹಿತಿ-ಅನುವಾದಕ ಬಿ.ಎಸ್. ಜಯಪ್ರಕಾಶ ನಾರಾಯಣ ಅವರು ಕನ್ನಡಕ್ಕೆ ಅನುವಾದಿಸಿದ್ದೇ-‘ಶಾಮಪ್ರಸಾದ್ ಮುಖರ್ಜಿ. ಸಮಗ್ರ ಜೀವನ ಚರಿತ್ರೆಯನ್ನು ಈ ಕೃತಿ ಕಟ್ಟಿಕೊಡುತ್ತದೆ. ಕಲಕತ್ತಾ ಮೂಲದ ಶಾಮಪ್ರಸಾದ್ ಮುಖರ್ಜಿ ಅವರು (ಜನನ: 6 ಜುಲೈ 1901, ಮರಣ: 23 ಜೂನ್ 1953) ಶಿಕ್ಷಣ ತಜ್ಞ, ನ್ಯಾಯವಾದಿ. ಪ್ರಧಾನಿ ಜವಾಹರಲಾಲ ನೆಹರು ಅವರ ಸಚಿವ ಸಂಪುಟದಲ್ಲಿ ಕೈಗಾರಿಕೋದ್ಯಮ ಖಾತೆಯ ಸಚಿವರಾಗಿದ್ದರು. ಮುಂದೆ ಅವರು ಸಂಪುಟದಿಂದ ಹೊರಬಂದು, ಭಾರತೀಯ ಜನಸಂಘ ಎಂಬ ರಾಜಕೀಯ ಪಕ್ಷದ ಸ್ಥಾಪಿಸಿದರು. ಈ ಪಕ್ಷವೇ ನಂತರ ಭಾರತೀಯ ಜನತಾ ಪಕ್ಷವಾಯಿತು. ಶಾಮಪ್ರಸಾದ್ ಮುಖರ್ಜಿ ಅವರ ರಾಜಕೀಯ ಪ್ರವೇಶ, ಪಕ್ಷ ಸ್ಥಾಪನೆ ಅದರ  ಬೆಳವಣಿಗೆಯಲ್ಲಿ ಅವರ ಪಾತ್ರ, ಪ್ರಖರ ರಾಷ್ಟ್ರೀಯತೆ ಇತ್ಯಾದಿ ಸಂಗತಿಗಳನ್ನು ಒಳಗೊಂಡ ಕೃತಿ ಇದು.

About the Author

ಬಿ.ಎಸ್. ಜಯಪ್ರಕಾಶ ನಾರಾಯಣ

ಪತ್ರಕರ್ತ ಬಿ.ಎಸ್. ಜಯಪ್ರಕಾಶ್‌ ನಾರಾಯಣ ಅವರು ಉತ್ತಮ ಅನುವಾದಕ ಕೂಡ. ಪ್ರಜಾವಾಣಿ, ವಿಜಯ ಕರ್ನಾಟಕ ಪತ್ರಿಕೆಗಳಲ್ಲಿ ಉಪಸಂಪಾದಕ/ ವರದಿಗಾರರಾಗಿ ಕಾರ್ಯ ನಿರ್ವಹಿಸಿರುವ ಅವರು ಸದ್ಯ ಅನುವಾದದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಟಿ.ಜೆ.ಎಸ್‌. ಜಾರ್ಜ್‌ ಅವರ ಎಂ.ಎಸ್., ಯು.ಆರ್‌. ಅನಂತಮೂರ್ತಿ ಅವರ ’ನನ್ನ ಸಾಹಿತ್ಯದ ಐದು ದಶಕಗಳು’, ’ನಾನು ಮಲಾಲ’ ಕೃತಿಗಳನ್ನು ಅನುವಾದಿಸಿದ್ದಾರೆ. ಛಾಯಾಗ್ರಾಹಕ ಕೆ.ಜಿ. ಸೋಮಶೇಖರ ಅವರ ಆತ್ಮಕತೆ ’ನನ್ನ ಬದುಕು ನನ್ನ ಫೋಟೊಗ್ರಫಿ’ ಕೃತಿಯನ್ನು ನಿರೂಪಿಸಿದ್ದಾರೆ. ...

READ MORE

Related Books