ಶಂಬಾ ಕೃತಿ ಸಂಪುಟ-2 (ಕಂನಡ-ಕಂನುಡಿ)

Author : ಶಂ.ಬಾ. ಜೋಶಿ

Pages 475

₹ 125.00




Year of Publication: 1999
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು

Synopsys

ಶಂಬಾ ಎಂತಲೇ ಪರಿಚಿತರಾಗಿರುವ ಶಂಕರ ಬಾಳದೀಕ್ಷಿತ ಜೋಶಿ ಕನ್ನಡದ ಮಹಾವಿದ್ವಾಂಸರು. ಅವರು ಸೃಜಿಸಿದ ಸಾಂಸ್ಕೃತಿಕ ಸಂಶೋಧನೆ, ಭೂತ ಹಾಗೂ ವರ್ತಮಾನ ಕಾಲಗಳ ನಡುವಣ ನೆಲೆಗಳನ್ನು ತಿಳಿಯಲು ಅನುವು ಮಾಡಿಕೊಡುತ್ತವೆ. ‘ಕೃತಿಗಳೇ ಆಕೃತಿ ನಿರ್ಮಾಣಕ್ಕೆ ಮುಖ್ಯ ನೆಲೆಗಳು’ ಎಂಬುದು ಅವರ ನಿಷ್ಠೆ ಹಾಗೂ ಶ್ರದ್ಧೆ. ಪ್ರಸ್ತುತ ಕೃತಿಯು ಕಂನುಡಿಯ ಹುಟ್ಟು, ಕನ್ನಡ ನುಡಿಯ ಜೀವಾಳ, ಎಡೆಗಳು ಹೇಳುವ ಕಂನಾಡ ಕತೆ ಇವುಗಳನ್ನು ಒಳಗೊಂಡಿದೆ.

About the Author

ಶಂ.ಬಾ. ಜೋಶಿ
(04 January 1896 - 28 September 1991)

ಕನ್ನಡ ಭಾಷೆ, ಕರ್ನಾಟಕ ಇತಿಹಾಸ ಹಾಗೂ ಭಾರತೀಯ ಸಂಸ್ಕೃತಿಯ ಸಂಶೋಧಕರಾದ ಶಂ.ಬಾ. ಜೋಶಿ ಅವರು ಕನ್ನಡ ಸಂಶೋಧನಾ ಕ್ಷೇತ್ರದ ಬಲುದೊಡ್ಡ ಹೆಸರು. 1896ರ ಜನೇವರಿ 4ರಂದು ಗುರ್ಲಹೊಸೂರಿನಲ್ಲಿ ಜನಿಸಿದರು. ತಂದೆ ಬಾಳದೀಕ್ಷಿತ ಜೋಶಿ ಮತ್ತು ತಾಯಿ ಉಮಾಬಾಯಿ. ವಿದ್ಯಾಭ್ಯಾಸ ಗುರ್ಲಹೊಸೂರು, ಬೊಮ್ಮನಹಳ್ಳಿ, ಪುಣೆ ಹಾಗೂ ಧಾರವಾಡಗಳಲ್ಲಿ ಆಯಿತು. 1916ರಲ್ಲಿ ಧಾರವಾಡದ ಸರ್ಕಾರಿ ತರಬೇತಿ ಕಾಲೇಜು ಸೇರಿ ಶಿಕ್ಷಣ ತರಬೇತಿ ಪಡೆದರು. ಚಿಕ್ಕೋಡಿಯಲ್ಲಿ ಶಾಲಾ ಶಿಕ್ಷಕರಾಗಿ (1926-27) ಸೇವೆ ಸಲ್ಲಿಸಿದ ಮೇಲೆ 1928ರಲ್ಲಿ ವಿಕ್ಟೋರಿಯಾ ಹೈಸ್ಕೂಲಿನಲ್ಲಿ ಶಿಕ್ಷಕರಾಗಿ ಸೇರಿದ ಅವರು 1946ರ ವರೆಗೆ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಕರ್ನಾಟಕ ...

READ MORE

Related Books