ಶಾಂಪೂ ರಾಜಕುಮಾರಿ

Author : ಸತ್ಯನಾರಾಯಣರಾವ್ ಅಣತಿ

Pages 48

₹ 35.00




Year of Publication: 2017
Published by: ಕಾಲ ಪ್ರಕಾಶನ
Address: ನಂ 39/3, ನೆಲ ಮಹಡಿ, 9 ನೇ ಮುಖ್ಯ, ಶಿವನಗರ, ಪಶ್ಚಿಮ ಕೋರ್ಡ್ ರಸ್ತೆ., ರಾಜಾಜಿನಗರ, ಬೆಂಗಳೂರು - 560 010
Phone: 08023206778

Synopsys

ಲೇಖಕ ಸತ್ಯನಾರಾಯಣರಾವ್ ಅಣತಿ ಅವರ ಮಕ್ಕಳ ನಾಟಕ ‘ಶಾಂಪೂ ರಾಜಕುಮಾರಿ’. ಈ ಕೃತಿಗೆ ಮುನ್ನುಡಿ ಬರೆದ ರಂಗಕರ್ಮಿ ಇಕ್ಬಾಲ್ ಅಹಮದ್ ‘ಈ ನಾಟಕದಲ್ಲಿ ನಾಟಕೀಯ ಘಟನಾವಳಿಗಳು ಕಡಿಮೆ ಇದ್ದಾಗಿಯೂ ಇದು ಒಳ್ಳೆಯ ನಾಟಕವೆನಿಸಲು ಕಾರಣ ಅವರು ಬರೆದಿರುವ ಹಳೆಯ ಹೊಸ ಶಿಶುಪ್ರಾಸಗಳು. ಆಧುನಿಕ ಶಿಶುಪ್ರಾಸಗಳನ್ನು ಬರೆಯುವುದು ಅಷ್ಟು ಸುಲಭದ ಕೆಲಸವಲ್ಲ. ಅದನ್ನು ಬರೆದು ತೋರಿಸಿದ್ದಾರೆ. ಈ ನಾಟಕ ಗೀತರೂಪಕವಾಗಿ ರಂಗದ ಮೇಲೆ ವಿಜೃಂಭಿಸುತ್ತದೆ ಎನ್ನುವುದರಲ್ಲಿ ದೂಸರಾ ಮಾತಿಲ್ಲ. ನನ್ನ ಬಾಲ್ಯದಲ್ಲಿ ಆಟ ಆಡುವಾಗ ನಾವು ಬಳಸುತ್ತಿದ್ದ ಶಿಶುಗೀತೆಗಳನ್ನು ನೆನಪಿಸಿಕೊಟ್ಟಿದ್ದಾರೆ. ಉದಾ- 'ಕಣ್ಣಾಮುಚ್ಚೆ ಕಾಡೇಗೂಡೆ' 'ರತ್ತೋ ರತ್ತೋ ರಾಯನ ಮಗಳೆ' ಇತ್ಯಾದಿ ಪ್ರಾಸಗಳನ್ನೇ ಬರೆಯುತ್ತಾ, ಇದ್ದಕ್ಕಿದ್ದ ಹಾಗೆ ಇಂದಿನ ಆಧುನಿಕ ಜಗತ್ತಿನ ವಸ್ತುಗಳ ಧ್ವನಿಯ ಆವಿಷ್ಕಾರಗಳನ್ನು ತಮ್ಮ ಶಿಶುಪ್ರಾಸಗಳಲ್ಲಿ ಸೇರಿಸಿ ಕೊಳ್ಳುವುದು ಮತ್ತು ಸಹಜವೆನಿಸುವಂತೆ ಹಾಡುವುದು ಇವರ ಬರವಣಿಗೆಯ ವಿಶೇಷ ಗುಣವಾಗಿದೆ.’ ಎಂದು ಪ್ರಶಂಸಿದ್ದಾರೆ.

About the Author

ಸತ್ಯನಾರಾಯಣರಾವ್ ಅಣತಿ
(12 December 1935)

ಕವಿ, ನಾಟಕಕಾರ ಕೆ. ಸತ್ಯನಾರಾಯಣರಾವ್ ಅಣತಿ ಅವರು ಮೂಲತಃ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಅಣತಿ ಗ್ರಾಮದವರು. ತಂದೆ-ಎ.ಎನ್. ಮೂರ್ತಿರಾವ್, ತಾಯಿ-ಶ್ರೀಮತಿ ರತ್ನಮ್ಮ . 1935 ಡಿಸೆಂಬರ್ 12, ರಂದು ಜನಿಸಿದ ಅವರು ಹುಟ್ಟಿದ ಊರಾದ ಅಣತಿ, ತಿಪಟೂರು, ಹಾಸನ, ಬೆಂಗಳೂರು, ಧಾರವಾಡಗಳಲ್ಲಿ ತಮ್ಮ ವಿದ್ಯಾಭ್ಯಾಸ ಪೂರ್ಣಗೊಳಿಸಿದರು. ಪ್ರಾಧ್ಯಾಪಕರಾಗಿ ವೃತ್ತಿ ಆರಂಭಿಸಿದ ಸತ್ಯನಾರಾಯಣರಾವ್ ಸಾಹಿತ್ಯಿಕವಾಗಿಯೂ ತಮ್ಮನ್ನು ತೊಡಗಿಸಿಕೊಂಡು ಸಾಹಿತ್ಯ ಕ್ಷೇತ್ರದ ಹಲವು ವಿಭಾಗಳಲ್ಲಿ ಕೃಷಿಮಾಡಿದ್ದಾರೆ.  ಕೃತಿಗಳು: ನೀಲಕುರುಂಜಿ (ಆಯ್ದ ಕವಿತೆಗಳ ಸಂಕಲನ), ಪಾತ್ರಗಳು ಇರಲಿ ಗೆಳೆಯ, ತೆರಕೊಂಡ ಆಕಾಶ, ಕೃಷ್ಣ ಕಣ್ಣಿನ ನೋಟ, ಭೂಮಿ ಬದುಕಿನ ಗಂಧ, ...

READ MORE

Related Books