ಶಂಕರ ವಿಹಾರ ಆಧುನಿಕನೊಬ್ಬನ ಅದ್ವೈತಯಾತ್ರೆ

Author : ಕೆ.ವಿ. ಅಕ್ಷರ

Pages 184

₹ 180.00




Year of Publication: 2019
Published by: ಅಕ್ಷರ ಪ್ರಕಾಶನ
Address: ಅಕ್ಷರ ಪ್ರಕಾಶನ, ಹೆಗ್ಗೋಡು ಸಾಗರ 577417

Synopsys

ರಂಗಕರ್ಮಿ, ಸಾಹಿತಿ ಕೆ. ವಿ ಅಕ್ಷರ ಅವರ ಕೃತಿ ’ಶಂಕರ ವಿಹಾರ’ ಆಧುನಿಕನೊಬ್ಬನ ಅದ್ವೈತಯಾತ್ರೆ .  ಆದಿಶಂಕರರನ್ನು ಕೇಂದ್ರದಲ್ಲಿಟ್ಟುಕೊಂಡು ಅದ್ವೆ ತ ಮತ್ತು ಬೇರೆ ಭಾರತೀಯ ದರ್ಶನಗಳ ಲೋಕದಲ್ಲಿ ನಡೆಸಿರುವ ಒಂದು ಮಾನಸಿಕ ಪ್ರವಾಸ ಕಥನವನ್ನು ಈ ಕೃತಿ ಪ್ರಸ್ತುತಪಡಿಸುತ್ತದೆ.

ಆಧುನಿಕನೊಬ್ಬನ ಅದ್ವೈತ ಯಾತ್ರೆ' ಎಂಬ ಉಪ ಶೀರ್ಷಿಕೆಯುಳ್ಳ ಈ ಕೃತಿ ಆದಿ ಶಂಕರರನ್ನು ಕೇಂದ್ರದಲ್ಲಿಟ್ಟುಕೊಂಡು ಅದ್ವೈತ ಮತ್ತು ಇತರ ಭಾರತೀಯ ದರ್ಶನಗಳ ಲೋಕದಲ್ಲಿ ನಡೆಸಿರುವ ಒಂದು ಮಾನಸಿಕ ಪ್ರವಾಸ ಕಥನದ ರೂಪದಲ್ಲಿ ರಚಿತವಾಗಿದೆ.

ಶಂಕರ- ವಿಚಾರ, ದರ್ಶನ, ವಿಧಾನ, ಚರಿತೆ, ಅನ್ವಯ ಮೊದಲಾದ ಹತ್ತು ವಿಭಾಗಗಳಲ್ಲಿ ಈ ವಿಹಾರ ನಡೆಯುತ್ತದೆ. ಶಂಕರರ ಚಿಂತನೆಗಳಲ್ಲಿ ನಂಬಿಕೆಯ ಪಾಲೆಷ್ಟು, ವೈಚಾರಿಕತೆಯ ಪಾಲೆಷ್ಟು? ಅವರ ವೈಚಾರಿಕತೆ ಯಾವ ಬಗೆಯದು? - ಮೊದಲಾದ ಪ್ರಶ್ನೆಗಳು `ಶಂಕರ ವಿಚಾರ' ಎಂಬ ಅಧ್ಯಾಯದಲ್ಲಿ ಚರ್ಚಿತವಾಗಿವೆ.  `ಶಂಕರ ದರ್ಶನ' ಎಂಬ ಭಾಗವು ಅದ್ವೆ ತ ಸಿದ್ಧಾಂತಕ್ಕೆ ಅಡಿಗಲ್ಲಾಗಿರುವ ಅದರ ಲೋಕಾಕೃತಿಯನ್ನು ಭಾರತದ ಬೇರೆಬೇರೆ ದರ್ಶನಗಳ ಸಂದರ್ಭದಲ್ಲಿಟ್ಟು ಈ ಕೃತಿ ಅವಲೋಕಿಸುತ್ತದೆ. 

About the Author

ಕೆ.ವಿ. ಅಕ್ಷರ

ಇಂಗ್ಲೆಂಡಿನ ಲೀಡ್ಸ್ ವಿಶ್ವವಿದ್ಯಾಲಯದಿಂದ ರಂಗಕಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಕೆ.ವಿ. ಅಕ್ಷರ ಅವರು ಹೆಗ್ಗೋಡಿನ ನೀನಾಸಮ್ ರಂಗಶಿಕ್ಷಣ ಕೇಂದ್ರದಲ್ಲಿ ಅಧ್ಯಾಪಕ. ಖ್ಯಾತ ರಂಗ ನಿರ್ದೇಶಕರಾಗಿರುವ ಅವರು ಸೃಜನಶೀಲ ಸಾಹಿತಿ, ನಾಟಕ, ಕವನ, ಪ್ರಬಂಧಗಳನ್ನು ರಚಿಸಿದ್ದಾರೆ.  ಸಹ್ಯಾದ್ರಿಕಾಂಡ, ಚೂರಿಕಟ್ಟೆ (ನಾಟಕಗಳು), ಹದಿಹರೆಯದ ಹಾಡುಗಳು (ಕವನ ಸಂಕಲನ), ರಂಗಪ್ರಪಂಚ, ರಂಗಪ್ರಯೋಗ, ರಂಗ ಅನ್ವೇಷಣೆ, ರಂಗಭೂಮಿ- ಪೂರ್ವ ಪಶ್ಚಿಮ (ರಂಗಕೃತಿ), ಮಾವಿನ ಮರದಲ್ಲಿ ಬಾಳೆಹಣ್ಣು (ವಿಮರ್ಶೆ). ಕರ್ನಾಟಕ ನಾಟಕ ಅಕಾಡೆಮಿಯ ಫೆಲೋಶಿಪ್ (2000) ಲಭಿಸಿದೆ. ...

READ MORE

Reviews

ಅನಿರ್ವಚನೀಯವನ್ನು ನಿರ್ವಚಿಸುವ ಕಷ್ಟ ಕೋಟಲೆಗಳು

ಈ ಪುಸ್ತಕ ಭಾರತೀಯ ದರ್ಶನಗಳ ಕೇಂದ್ರ ತತ್ವವೆನಿಸಿರುವ ಅದೈತ ತತ್ವವನ್ನುಅದರೆಲ್ಲ ಅನ್ವಯ ಆವರಣಗಳೊಂದಿಗೆ ನಿರೂಪಿಸಿರುವ ಒಂದು ಮಹತ್ವಾಕಾಂಕ್ಷೆಯ ಪ್ರಯತ್ನವಾಗಿದೆ. ನಮ್ಮ ದರ್ಶನಗಳೆಲ್ಲವೂ – ಬಹುಪಾಲು ವೈದಿಕವೆನ್ನಿಸಿಕೊಂಡವು – ಅವುಗಳ ನಿರೂಪಣೆಗೇ ಸಿದ್ದವಾದ ಭಾಷೆಯಂತಿರುವ ಸಂಸ್ಕೃತದಲ್ಲೇ ಇರುವುದರಿಂದ ಅವನ್ನು ಕನ್ನಡದಂತಹ ಸಾಮಾನ್ಯರ ಭಾಷೆಯಲ್ಲಿ ಸ್ಫುಟವಾಗಿ ನಿರೂಪಿಸುವುದು ಬಹು ಕಷ್ಟದ ಕೆಲಸವೇ. ಆದರೆ ಅಕ್ಷರ ಅವರು ಅದನ್ನು ಸಾಕಷ್ಟು ಸಮರ್ಥವಾಗಿಯೇ ಮಾಡಿದ್ದಾರೆನ್ನಬಹುದು. ವಿಶೇಷವಾಗಿ, ಆದಿ ಶಂಕರರು ವೇದೋಪನಿಷತ್ತುಗಳಲ್ಲಿರುವ ಅದೈತ ತತ್ವಸಾರವನ್ನು ಸಂಗ್ರಹಿಸಿ ಅದನ್ನು ಒಂದು ಸ್ವಯಂಪೂರ್ಣ ಸಿದ್ದಾಂತವಾಗಿ ಮಂಡಿಸಲು ಆವರೆಗಿನ ಭಾರತೀಯ ದರ್ಶನಸಿದ್ದಾಂತಗಳಿಗೆ ಮುಖಾಮುಖಿಯಾಗಿ ನಡೆಸಿರುವ ತತ್ವವಿಮರ್ಶೆಯನ್ನು ವಿವರಿಸುವಲ್ಲಿ ಕಾಣುವ ಲೇಖಕರ ಅಪಾರ ಓದು ಮತ್ತು ಭಾಷಾ ಕೌಶಲ ಮೆಚ್ಚುವಂಥದ್ದೇ ಆಗಿದೆ.

ಆದರೆ ಅದೈತ ತತ್ವವು ಶಂಕರರ ಕಾಲದಿಂದಲೂ ಒಳಗಾಗುತ್ತಿರುವ ಹಲವು ಟೀಕೆ, ವಿರೋಧಿ, ವಿಸ್ತರಣೆಗಳಿಗೆ ಕಾರಣವಾಗಿರುವ ಅಂಶಗಳನ್ನು ಚರ್ಚಿಸುವಾಗ ಅಕ್ಷರ ಅವರು ಅನುಸರಿಸುವ ಅನುಸಂಧಾನ ಮಾರ್ಗ ಸಾಕಷ್ಟು ಸಮಸ್ಯಾತ್ಮಕವಾಗಿದೆ ಎಂಬುದನ್ನೂ ಇಲ್ಲಿ ಹೇಳಬೇಕು. ಹಾಗಾಗಿಯೇ ದೇಶದಲ್ಲಿನ ಬಹುತತ್ವಗಳ ಸಹಬಾಳ್ವೆ ಕುರಿತು ಅವರು ವ್ಯಕ್ತಪಡಿಸುವ ಸಹಾನುಭೂತಿಯ ಹೊರತಾಗಿಯೂ, ಶಂಕರ ಪ್ರಣೀತ ಅದೈತವು ತಮ್ಮ ಕುಲ ನಂಬಿಕೆಯೂ ಹೌದೆಂದು ಹೇಳುವ ಅಭಿಮಾನದ ನಿರೂಪಣೆಯಲ್ಲಿ ಹಲವು ತಾತ್ತಿಕ ಸಂದಿಗ್ಧತೆಗಳು ಎದ್ದು ಕಾಣುತ್ತವೆ. ಇದು ಅನಿರ್ವಚನೀಯವೆಂದು ಹೇಳಲಾಗುವ ಸತ್ಯವನ್ನು ಭಾಷೆಯ ಮೂಲಕ ನಿರ್ವಚನಗೊಳಿಸುವ ಪ್ರಯತ್ನದಲ್ಲಿ ಸಹಜವೂ ಹೌದು. ಅದೇ ವೇಳೆಗೆ ಅದು ನಿಜ ಮೌನದ ಅರ್ಥವನ್ನು ಬೌದ್ಧಿಕವಾಗಿ ಅರಿತ, ಆದರೆ ಆಚರಿಸಲಾಗದ ಮತ್ತು ಲೇಖಕರೇ ಪುಸ್ತಕದಲ್ಲಿ ನೆಪ ಸಿಕ್ತಡೆಯಲ್ಲೆಲ್ಲಾ ಸಾರಾ ಸಗಟಾಗಿ ಟೀಕಿಸುವ ಆಧುನಿಕ ಭಾರತೀಯ ಬುದ್ಧಿಜೀವಿಯ ಪೀಕಲಾಟವೂ ಹೌದು.

ಅಕ್ಷರ ಅವರು ಪುಸ್ತಕದಲ್ಲಿ ವಿಭಿನ್ನ ನೋಟಗಳ ಭಾರತೀಯ ದರ್ಶನಗಳು ಜಗಳವೂ ಅಲ್ಲದ ಜುಗಲಬಂದಿಯೂ ಅಲ್ಲದ ಸಂಬಂಧದ ಸ್ವರೂಪವನ್ನು ಆಧುನಿಕರು ಅರ್ಥ ಮಾಡಿಕೊಳ್ಳಲಾಗದಿರುವ ಕಾರಣವನ್ನು ಪಶ್ಚಿಮದ ಇಮ್ಯಾನುಯಲ್ ಕಾಂಟ್ ವೈಚಾರಿಕತೆಯ ವಿಧಾನದಲಿನ ದಿದಳ ನೋಟದ ಪ್ರಭಾವದಲಿ ಕಾಣುತ್ತಾರೆ. ಆದರೆ ಸಂಬಂಧ ಸ್ವರೂಪ ಇಲ್ಲಿ ನಿರೂಪಿತವಾಗಿರುವ ರೀತಿ ಸಡಿಲ ತತ್ವಗಳ ಸುಲಭ ಹೊಂದಾಣಿಕೆಯಂತೆ ಮಾತ್ರ ಕಾಣುತ್ತದೆ. ಬದುಕಿನ ಅರ್ಥವನ್ನು ಅನ್ವೇಷಿಸುವ ಆತ್ಯಂತ ಗಂಭೀರ ವ್ಯವಹಾರವಾದ ದರ್ಶನಗಳನ್ನು ದೇವೇಗೌಡರಂಥವರ 'ಧಾರ್ಮಿಕತೆ' ಮೊರೆ ಹೊಕ್ಕು ಕಟ್ಟುವ ಮಾತಿನ ಮಂಟಪದ ಮೂಲಕ ಹೊಂದಾಣಿಸುವ ಉದ್ದೇಶವಾದರೂ ಏನು? ಭಾರತೀಯ ದರ್ಶನ ಪರಂಪರೆ ಪಶ್ಚಿಮದ ತತ್ವಶಾಸ್ತ್ರೀಯ ಪರಂಪರೆಗಿಂತ ಸಾಮಾಜಿಕವಾಗಿ ಶ್ರೇಷ್ಠವೆಂದು ಸಾಧಿಸುವುದೇ? ಅಂತಹ ಉದ್ದೇಶ ಪುಸ್ತಕದಲ್ಲಿ ಕಂಡೂ ಕಾಣದಂತೆ ಹರಿದಾಡುತ್ತಾ ಪುಸ್ತಕದ ದಿಗಂತ ದೃಷ್ಟಿಯನ್ನೇ ವಿಚಲಿತಗೊಳಿಸಿಬಿಟ್ಟಿದೆ.

ಅಕ್ಷರ ಅವರು ಪಶ್ಚಿಮದ ನೋಟಕ್ರಮ ಐಡಿಯಾಲಜಿಕಲ್; ಆದರೆ ನಮ್ಮದು ದರ್ಶನದ್ದು ಎನ್ನುತ್ತಾರೆ. ಆದರೆ ನಮ್ಮ ದರ್ಶನಗಳೂ ಕಾಲದಲ್ಲಿ ತುಕ್ಕು ಹಿಡಿದು ಐಡಿಯಾಲಿಜಿಗಳೇ ಆಗಿ ಮಾರ್ಪಟ್ಟು ಹಲವು ಸಾಮಾಜಿಕ ವಿಷಮತೆಗಳಿಗೆ ಕಾರಣವಾಗಿವೆ ಅಲ್ಲವೆ? ಶಂಕರಾಚಾರ್ಯರ ಕಾಲದಲ್ಲಿ ಯಾಕೆ ಜಾತಿಗಳಿದ್ದವೋ, ಅವರೇಕೆ ಅವುಗಳನ್ನನುಸರಿಸಿ ನೀತಿ ನಿಯಮಗಳನ್ನು ಹೇಳಿದರೋ ತಿಳಿಯದು. ಆದರೆ ಅವರ ತತ್ವ ಮಾತ್ರ ಅದ್ಭುತವಾದದ್ದು ಎನ್ನುವ ಲೇಖಕರ ವಾದ ಅವರು 'ಶಂಕರ ವಿಜಯ' ಎನ್ನುವ ಪುರಾಣವನ್ನು ಇಲ್ಲಿ ಪ್ರಸ್ತುತ ಮುಖಪುಟವನ್ನು ರವಿವರ್ಮನ ವರ್ಣನಾತ್ಮಕ ಚಿತ್ರದಿಂದ ಸಜ್ಜುಗೊಳಿಸಿರುವ ರೀತಿ ಪುಸ್ತಕದ ಒಟ್ಟು ಉದ್ದೇಶವನ್ನೇ ಸಂಕುಚಿತಗೊಳಿಸುವಂತಿದೆ. ಬುದ್ಧನ ಅನಾತ್ಮವಾದವು ಶಂಕರರ ಆತ್ರವಾದದಿಂದ ವೈಧಾನಿಕವಾಗಿ ಮಾತ್ರ ಭಿನ್ನವೆಂದು ತಿಳಿಯುವುದರಿಂದ ಉಂಟಾಗುವ ಸಮಸ್ಯೆ ಇದು ಇರಬಹುದು. ಅಂದಹಾಗೆ, ಇಲ್ಲಿನ ಮುಖ್ಯ ಚರ್ಚೆಯಲ್ಲಿ ಜೈನ ದರ್ಶನ ಬಿಟ್ಟುಹೋಗಿದೆ ಏಕೆ?

-ಡಿಎಸ್ಸೆನ್ 

ಕೃಪೆ :   ಹೊಸ ಮನುಷ್ಯ (ಆಗಸ್ಟ್‌ 2019)

Related Books