ಶಾಂಕರವೇದಾಂತ ನಿಘಂಟು

Author : ಮೋಹನ ಆರ್

Pages 48

₹ 20.00




Year of Publication: 2014
Published by: ಅಧ್ಯಾತ್ಮಪ್ರಕಾಶ ಕಾರ್ಯಾಲಯ, ಹೊಳೆನರಸೀಪುರ, ಹಾಸನ ಜಿಲ್ಲೆ
Address: ಆಧ್ಯಾತ್ಮ ಪ್ರಕಾಶ ಕಾರ್ಯಾಲಯ, ನಂ. 68, ಎ.ಪಿ.ಕೆ. ರಸ್ತೆ, ಎರಡನೆ ಬ್ಲಾಕ್, ತ್ಯಾಗರಾಜನಗರ, ಬೆಂಗಳೂರು-28
Phone: 08175-273820/080-26765548

Synopsys

ವೇದಾಂತ ಪ್ರವೇಶ ಬಯಸುವವರಿಗೆ ದಾರಿದೀವಿಗೆಯ ಹಾಗಿರುವ ಗ್ರಂಥ ’ಶಾಂಕರವೇದಾಂತ ನಿಘಂಟು’. ವೇದಾಂತ ಅಂದರೆ ವೇದದ ಪರಮಾರ್ಥ ಎಂದರ್ಥ. ಶಾಂಕರ ವೇದಾಂತಕ್ಕೆ ಶೃತಿಪ್ರಸ್ಥಾನವಾದ ಉಪನಿಷತ್ತು, ಸ್ಮೃತಿಪ್ರಸ್ಥಾನವಾದ ಭಗವದ್ಗೀತೆ ಮತ್ತು ಸೂತ್ರ ಅಥವಾ ನ್ಯಾಯಪ್ರಸ್ಥಾನವಾದ ಬ್ರಹ್ಮಸೂತ್ರಗಳು ಆಧಾರಸ್ಥಂಭಗಳು. ಆದಿಶಂಕರರು ಈ ಪ್ರಸ್ಥಾನತ್ರಯಗಳಿಗೆ ಭಾಷ್ಯ ಬರೆದಿದ್ದರು. ಈ ಭಾಷ್ಯದಲ್ಲಿನ ಬೋಧನೆ ಅರ್ಥವಾಗಬೇಕಾದರೆ ಅದರಲ್ಲಿ ಬಳಸಲಾದ ಪದಗಳ ಅರಿವು ಅಗತ್ಯ. ಅದನ್ನು ಮನಗಂಡ ಶ್ರೀಸಚ್ಚಿದಾನೇಂದ್ರಸರಸ್ವತಿಸ್ವಾಮಿಗಳು ಸಿದ್ಧಪಡಿಸಿದ ’ಪಾರಿಭಾಷಿಕ ಪದಕೋಶ’ ಇದು. ಆಧ್ಯಾತ್ಮ ಪ್ರಕಾಶ ಪತ್ರಿಕೆಯಲ್ಲಿ  ಪ್ರಕಟಿಸಿದ್ದ 41ಲೇಖನಗಳನ್ನು ಬಳಸಿ ಈ ಪದಕೋಶ ಸಿದ್ಧಪಡಿಸಲಾಗಿದೆ.

About the Author

ಮೋಹನ ಆರ್

ಮೋಹನ ಆರ್ ಅವರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿಯನ್ನು ಉನ್ನತ ಶ್ರೇಣಿಯಲ್ಲಿ ಮುಗಿಸಿ, ಪುಣೆಯ ಡೆಕ್ಕನ್ ಕಾಲೇಜಿನಿಂದ ಪಿಎಚ್.ಡಿ ಪದವಿ ಪಡೆದವರು. ಕಲಬುರ್ಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾನಿಲಯದಲ್ಲಿ ಕೆಲಕಾಲ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿರುತ್ತಾರೆ. ಪ್ರಸ್ತುತ UGC ಕೊಡಮಾಡುವ ಸರ್ವಪಲ್ಲಿ ರಾಧಾಕೃಷ್ಣನ್ ಪೋಸ್ಟ್ ಡಾಕ್ಟರಲ್ ಫೆಲೊ ಆಗಿ ಡೆಕ್ಕನ್ ಕಾಲೇಜಿನಲ್ಲಿ ಅಧ್ಯಯನ ನಡೆಸುತ್ತಿದ್ದಾರೆ.ಪುರಾತತ್ವ ನೆಲೆ ಮತ್ತು ಪ್ರಾಗೈತಿಹಾಸಿಕ ಚಿತ್ರಕಲೆಯ ನಿರಂತರ ಸಂಶೋಧನೆ ಮತ್ತು ಅಧ್ಯಯನದಲ್ಲಿ ತೊಡಗಿರುವ ಇವರು 30ಕ್ಕೂ ಹೆಚ್ಚು ಲೇಖನಗಳನ್ನು ಪ್ರಕಟಿಸಿದ್ದಾರೆ. 2015ರಲ್ಲಿ ಗ್ರೇಟ್ ಬ್ರಿಟನ್ ವಿಕ್ಟೋರಿಯಾ ಮತ್ತು ಆಲ್ಬರ್ಟ್ ಮ್ಯೂಸಿಯಂನ ನೆಹರೂ ಪ್ರಶಸ್ತಿ,  2016ರಲ್ಲಿ ತಮಿಳುನಾಡಿನ ತಿರುಚನಾಪಳ್ಳಿಯಲ್ಲಿ ನಡೆದ ರಾಷ್ಟ್ರೀಯ ...

READ MORE

Related Books