ಶರಣು ಶರಣಾರ್ಥಿ-2

Author : ಬಾಲಚಂದ್ರ ಜಯಶೆಟ್ಟಿ

Pages 436

₹ 280.00




Year of Publication: 2015
Published by: ಶ್ರೀ ಸಿದ್ಧಲಿಂಗೇಶ್ವರ ಬುಕ್ಪ್ರ ಡಿಪೋ ಮತ್ತು ಪ್ರಕಾಶನ
Address: ಮುಖ್ಯಬೀದಿ ಕಲಬುರಗಿ-585101

Synopsys

ಲೇಖಕ ಭಾಲಚಂದ್ರ ಜಯಶೆಟ್ಟಿ ಅವರ ಕೃತಿ- ಶರಣು ಶರಣಾರ್ಥಿ-2. ಶರಣ ಚಿಂತನೆಯ ನೆಲೆಯಲ್ಲಿ, ಶರಣ ಸಾಹಿತ್ಯ ಸುತ್ತಮುತ್ತ, ವೈಜ್ಞಾನಿಕ ನೆಲೆಯಲ್ಲಿ ಅಷ್ಟಾವರಣ, ಬಸವಣ್ಣ ಮತ್ತು ತುಲಸಿದಾಸ ಹಾಗೂ ಬಸವಣ್ಣ ಮತ್ತು ಲೋಹಿಯಾ ಹೀಗೆ ಐದು ಪ್ರಮುಖ ಶೀರ್ಷಿಕೆಗಳಡಿ ಲೇಖಕರು ತಮ್ಮ ಚಿಂತನೆಯನ್ನು ಪ್ರತಿಪಾದಿಸಿದ ಕೃತಿ ಇದು. ಅಖಿಲ ಭಾರತ ಕನ್ನಡ ಸಾಹಿತ್ಯ ಪರಿಷತ್ತು ತನ್ನ ರಜತ ಮಹೋತ್ಸವ ನಿಮಿತ್ತ ಪ್ರಕಟಿಸಿದ ಉತ್ತಮ 25 ಕೃತಿಗಳ ಪೈಕಿ ಇದೂ ಒಂದು.

About the Author

ಬಾಲಚಂದ್ರ ಜಯಶೆಟ್ಟಿ
(22 November 1939)

ಲೇಖಕ, ಅನುವಾದಕ ಭಾಲಚಂದ್ರ ಜಯಶೆಟ್ಟಿ ಅವರು ಮೂಲತಃ ಬೀದರ ಜಿಲ್ಲೆಯವರು. ಬೀದರ ಜಿಲ್ಲೆಯ ಬಸವ ಕಲ್ಯಾಣ ತಾಲೂಕಿನ ರಾಜೇಶ್ವರದಲ್ಲಿ  ಜನಿಸಿದ ಅವರು ಪ್ರಾಥಮಿಕ ಶಿಕ್ಷಣವನ್ನು ರಾಜೇಶ್ವರ, ಬಸವಕಲ್ಯಾಣದಲ್ಲಿ ಪಡೆದರು. ಆನಂತರ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪ್ರಥಮ ಶ್ರೇಣಿಯಲ್ಲಿ ಎಂ.ಎ ಪದವಿ ಪಡೆದರು. ಕನ್ನಡ, ಹಿಂದಿ, ಮರಾಠಿ ಭಾಷೆಗಳಲ್ಲಿ ಪ್ರಭುತ್ವ ಪಡೆದಿದ್ದ ಅವರು ಶಿಕ್ಷಣ ಇಲಾಖೆಯಲ್ಲಿ ವೃತ್ತಿಯನ್ನು ಆರಂಭಿಸಿದರು.  ಸರಕಾರಿ ಪದವಿ ಮಹಾವಿದ್ಯಾಲಯ ಯಾದಗಿರಿ, ಸರಕಾರಿ ಮಹಾವಿದ್ಯಾಲಯ ಗುಲಬರ್ಗಾ, ಸರಕಾರಿ ಪ್ರಥಮ ದರ್ಜೆ ಕಾಲೇಜು ಬೀದರ ಮುಂತಾದೆಡೆ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ 1997ರಲ್ಲಿ ನಿವೃತ್ತಿಯಾದರು. ಹಲವಾರು ಶಿಕ್ಷಣ ಸಂಸ್ಥೆಗಳ ...

READ MORE

Related Books