ಶಾಸನ ಲೋಕ

Author : ಲಕ್ಷ್ಮೀಶ್ ಹೆಗಡೆ ಸೋಂದಾ

Pages 142

₹ 150.00




Year of Publication: 2021
Address: ಭರತ್ ಪಬ್ಲಿಕೇಶನ್,ದತ್ತಾತ್ರೇಯ ನಗರ,ಬೆಂಗಳೂರು
Phone: 9480088960

Synopsys

ಲೇಖಕ ಲಕ್ಷ್ಮೀಶ್ ಹೆಗಡೆ ಸೋಂದಾ ಅವರ ಕೃತಿ ಶಾಸನ ಲೋಕ. ಪ್ರಸ್ತುತ ಕೃತಿ ಲಕ್ಷ್ಮೀಶ್ ಸೋಂದಾರವರ ಅಂಕಣ ಬರಹಗಳ ಸಂಗ್ರಹವಾಗಿದ್ದು ದೇಶದ ಹಾಗೂ ರಾಜ್ಯದ ಅಪೂರ್ವ ಶಾಸನಗಳ ಅಚ್ಚರಿಯ ಸಂಗತಿಯನ್ನು ಒಳಗೊಂಡಿದೆ. ಸಂಶೋಧಕರಿಗೆ ಬಹಳ ಉಪಯುಕ್ತ ಕೃತಿ ಇದಾಗಿದ್ದು, 35 ವಿಶಿಷ್ಟವಾದ ಲೇಖನಗಳ ಗುಚ್ಚವಿದು. ಈಗಾಗಲೇ ಪ್ರಖ್ಯಾತ ಶಾಸಕತಜ್ಞರುಗಳಿಂದ ಶೋಧಿಸಲ್ಪಟ್ಟ, ವಿಭಿನ್ನ ಅಭಿಪ್ರಾಯಗಳನ್ನು ಒಳಗೊಂಡ ಶಾಸನಗಳ ಅರ್ತಪೂರ್ಣವಾದ ಸಾರವನ್ನು ಜನಸಾಮಾನ್ಯರಿಗೆ ತಲುಪಿಸುವ ಪ್ರಯತ್ನವನ್ನು ಈ ಕೃತಿಯಲ್ಲಿ ಮಾಡಲಾಗಿದೆ.

About the Author

ಲಕ್ಷ್ಮೀಶ್ ಹೆಗಡೆ ಸೋಂದಾ
(18 February 1984)

ಲಕ್ಷ್ಮೀಶ್ ಹೆಗಡೆ ಸೋಂದಾ, ಇತಿಹಾಸಕಾರರಾಗಿ, ವಾಗ್ಮಿಗಳಾಗಿ ನಾಡಿನ ಚಿರಪರಿಚಿತ ಹೆಸರು. ಕಳೆದ 15 ವರ್ಷಗಳಿಂದ ಇತಿಹಾಸ ಸಂಶೋಧನೆಯಲ್ಲಿ ಸಕ್ರಿಯರಾಗಿ ಹಲವಾರು ಶಾಸನಗಳು, ವೀರಗಲ್ಲುಗಳು, ಐತಿಹಾಸಿಕ ಕುರುಹುಗಳನ್ನು ಸಂಶೋಧಿಸಿ ಅವುಗಳನ್ನು ಅಭ್ಯಸಿಸಿ ಸಮಾಜಕ್ಕೆ ಪರಿಚಯಿಸಿರುತ್ತಾರೆ. ಇದುವರೆಗೂ 13 ಕೃತಿಗಳು, 400 ಕ್ಕೂ ಹೆಚ್ಚು ಲೇಖನಗಳು ಪ್ರಕಟಗೊಂಡಿವೆ. ಸಂಶೋಧನೆಗಾಗಿ 2013 ರಲ್ಲಿ ಬಸವರಾಜ ಕಟ್ಟಿಮನಿ ರಾಜ್ಯ ಪ್ರಶಸ್ತಿ ಮತ್ತು 2016 ರಲ್ಲಿ ಕದಂಬ ಸೇವಾರತ್ನ ರಾಜ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರತಿ ವರ್ಷ ಇವರ ಸಂಚಾಲಕತ್ವದಲ್ಲಿ ನಡೆಯುವ ಸೋಂದಾ ಇತಿಹಾಸೋತ್ಸವ ನಾಡಿನಲ್ಲಿ ಪ್ರಸಿದ್ಧಿ ಪಡೆದಿದೆ. ಯುವ ಜನತೆಯಲ್ಲಿ ಸ್ಥಳೀಯ ಇತಿಹಾಸದ ಕುರಿತು ...

READ MORE

Related Books