ಶಾಸನಗಳಲ್ಲಿ ಶಿವಶರಣರು

Author : ಎಂ.ಎಂ. ಕಲಬುರ್ಗಿ

Pages 160

₹ 130.00




Published by: ಕನ್ನಡ ಸಾಹಿತ್ಯ ಪರಿಷತ್ತು
Address: ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು

Synopsys

ಸುಮಾರು ನೂರು ಜನ ಶಿವಶರಣರ ಕುರಿತು ಪ್ರಸ್ತಾಪಿಸಲಾದ ಶಾಸನಗಳ ವಿವರವನ್ನು ನೀಡಿರುವ ವಿಶಿಷ್ಟ ಪುಸ್ತಕ ಇದು. ಶಾಸನದ ಲಿಪ್ಯಂತರದ ಜೊತೆಗೆ ಅದರ ವಿವರಣೆಯನ್ನೂ ನೀಡಲಾಗಿದೆ. ಕರ್ನಾಟಕದ ಶಾಸನಗಳ ಬಗೆಗೆ ಕೂಡ ಸಮೃದ್ಧ ಮಾಹಿತಿ ಇದ್ದು ಶಾಸನಗಳನ್ನು ಅಧ್ಯಯನ ಮಾಡುವವರು ಓದಲೇಬೇಕಾದ ಪುಸ್ತಕ.

ಶಾಸನಗಳ ಕುರಿತ ಅಧ್ಯಾಯವಲ್ಲದೆ ಶರಣರ ಚರಿತ್ರೆ- ಶಾಸನಗಳ ಮಹತ್ವ, ಶರಣದ ದೃಷ್ಟಿ- ಶಾಸನಗಳ ಸೃಷ್ಟಿ ಎಂಬ ಇನ್ನೆರಡು ವಿಭಾಗಗಳು ಶರಣ ಚಳವಳಿಯ ಮಹತ್ವವನ್ನು ಸಾರುತ್ತಿವೆ. ಬಸವಪೂರ್ವ ಯುಗದ ಬಗೆಗಿನ ಅಧ್ಯಯನದಲ್ಲಿ ಶೈವ ಧರ್ಮದ ಉಗಮ ಮತ್ತಿತರ ವಿವರಗಳಿದ್ದರೆ, ಶರಣರಿಗೂ ಬಸವಪೂರ್ವ ಯುಗಕ್ಕೂ ಇದ್ದ ವ್ಯತ್ಯಾಸವನ್ನು ಬಸವಯುಗ ಕುರಿತ ಅಧ್ಯಯನ ತಿಳಿಸುತ್ತದೆ. ಶೈವ- ವೀರಶೈವ ಎರಡೂ ತತ್ವಗಳೊಂದಿಗೆ ಶರಣರ ಬರಹ ಬದುಕನ್ನು ರಗಳೆ- ಕಥನಗಳ ಮೂಲಕ ದಶ ದಿಕ್ಕುಗಳಿಗೆ ಹರಡಿದ ವಿಚಾರವನ್ನು ಬಸವೋತ್ತರ ಯುಗ ವಿವರಿಸುತ್ತದೆ.

About the Author

ಎಂ.ಎಂ. ಕಲಬುರ್ಗಿ
(28 November 1938 - 30 August 2015)

ಕರ್ನಾಟಕದಲ್ಲಿ ಸಂಶೋಧನಾ ಕ್ಷೇತ್ರದ ಪ್ರಮುಖ ಹೆಸರು ಎಂ.ಎಂ. ಕಲಬುರ್ಗಿ. ಶಾಸನಶಾಸ್ತ್ರ, ಸಾಹಿತ್ಯ ಚರಿತ್ರೆ, ಛಂದಸ್ಸು, ಇತಿಹಾಸ, ವಾಸ್ತುಶಿಲ್ಪ, ಗ್ರಂಥಸಂಪಾದನೆ, ಹಸ್ತಪ್ರತಿಶಾಸ್ತ್ರ, ಜಾನಪದ, ಸ್ಥಳನಾಮಗಳ ಅಧ್ಯಯನ, ಸಾಹಿತ್ಯ ವಿಮರ್ಶೆ ಕ್ಷೇತ್ರಗಳಲ್ಲಿ ಹರಡಿಕೊಂಡಿವೆ. ಮಲ್ಲೇಶಪ್ಪ ಮಡಿವಾಳಪ್ಪ ಕಲಬುರ್ಗಿಯವರು ಬಿಜಾಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಯರಗಲ್ಲ ಗ್ರಾಮದಲ್ಲಿ 1938ರ ನವೆಂಬರ್ 28ರಂದು ಜನಿಸಿದರು. ತಾಯಿ ಗುರಮ್ಮ; ತಂದೆ ಮಡಿವಾಳಪ್ಪ. ಕಲಬುರ್ಗಿಯವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ (1960) ಮತ್ತು  ಎಂ.ಎ (1962) ಪದವಿ ಪಡೆದ ಅವರು ಸಲ್ಲಿಸಿದ ‘ಕವಿರಾಜಮಾರ್ಗ ಪರಿಸರದ ಕನ್ನಡ ಸಾಹಿತ್ಯ’ (1968) ಎಂಬ ಮಹಾಪ್ರಬಂಧಕ್ಕೆ ಪಿ.ಎಚ್.ಡಿ. ಪದವಿ ಸಂದಿತ್ತು. ಕರ್ನಾಟಕ ಕಾಲೇಜಿನಲ್ಲಿ ...

READ MORE

Related Books