ಶತಮಾನದ ಕವಿತೆ ಜೋಗಿ

Author : ಕೆ.ಸಿ. ಶಿವಾರೆಡ್ಡಿ

Pages 128

₹ 60.00




Year of Publication: 1999
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ಹಂಪಿ.

Synopsys

ಅಂಬಿಕಾತನಯ ದತ್ತರ “ಜೋಗಿ' ಕವನದ ಬಗ್ಗೆ ನಾಡಿನ ವಿಮರ್ಶಕರು ಈ ಕವಿತೆಯೊಂದಿಗೆ ಉದ್ದಕ್ಕೂ ನಡೆಸುತ್ತ ಬಂದ ಸಂವಾದ ವಿಮರ್ಶೆಗಳನ್ನು ಈ ಪುಸ್ತಕದಲ್ಲಿ ಸಂಕಲಿಸ ಲಾಗಿದೆ. ಈ ಗ್ರಂಥದಲ್ಲಿರುವ ೩೧ ಲೇಖನಗಳು `ಜೋಗಿ'ಯನ್ನು ವಿವಿಧರೀತಿಯಲ್ಲಿ ಕಂಡಿದ್ದು ಒಂದು ಕವನವನ್ನು ಬೇರೆ ಬೇರೆ ವಿಮರ್ಶಕರು ಹೇಗೆ ಹೇಗೆ ಓದಿದ್ದಾರೆ. ಎಂಬುದನ್ನು ಈ ಕೃತಿ ಸ್ಪಷ್ಟಪಡಿಸುತ್ತದೆ.

About the Author

ಕೆ.ಸಿ. ಶಿವಾರೆಡ್ಡಿ
(01 June 1961)

ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಭಾಷಾಂತರ ಅಧ್ಯಯನ ವಿಭಾಗದದಲ್ಲಿ ಸಹ ಪ್ರಾಧ್ಯಾಪಕರಾಗಿರುವ ಕೆ.ಸಿ. ಶಿವಾರೆಡ್ಡಿ ಅವರು ಆಧುನಿಕ ಗ್ರಂಥ ಸಂಪಾದನೆಯಲ್ಲಿ ಮಹತ್ವದ ಕೆಲಸ ಮಾಡಿದ್ದಾರೆ. ಕುವೆಂಪು ಅವರ ಸಮಗ್ರ ಕೃತಿಗಳ ಸಂಪಾದಕರಾಗಿ ಅವರು ಮಾಡಿರುವ ಕೆಲಸ ಅನನ್ಯವಾದದ್ದು. ರಾಷ್ಟ್ರಕವಿ ಕುವೆಂಪು ಅವರ ಸಮಗ್ರ ಕೃತಿಗಳನ್ನು 9 ಸಂಪುಟಗಳಲ್ಲಿ ಸಂಪಾದಿಸಿ ಪ್ರಕಟಿಸಿದ್ದಾರೆ. ಹಾಗೆಯೇ ಬೇಂದ್ರೆಯವರ ಕವಿತೆಗಳನ್ನು ಕುರಿತ ’ಅಂಬಿಕಾತನಯನ ನಂಬಿಕೆಯ ಹಾಡು’ ಹಾಗೂ ’ಶತಮಾನದ ಕವಿತೆ ಜೋಗಿ’ ಕೃತಿಗಳನ್ನು ಸಂಪಾದಿಸಿ ಪ್ರಕಟಿಸಿದ್ದಾರೆ.  ಒಂದನೇ ನಾಗವರ್ಮನ ಕರ್ನಾಟಕ ಕಾದಂಬರಿ, ಕನಸುಗಳ ಕವಿ ಕಂಬಾರರ ಚಕೋರಿ ಒಂದು ಅಧ್ಯಯನ, ಇದು ಎಂಥಾ ಹಾಡು (ಕವಿ ...

READ MORE

Related Books