ಶತಮಾನದ ತಿರುವಿನಲ್ಲಿ ಭಾರತ

Author : ಎಸ್‌.ಆರ್‌. ರಾಮಸ್ವಾಮಿ

₹ 115.00




Published by: ರಾಷ್ಟ್ರೋತ್ತಾನ ಸಾಹಿತ್ಯ
Address: ನೃಪತುಂಗ ರಸ್ತೆ, ರಿಜರ್ವ ಬ್ಯಾಂಕ್ ಎದುರು, ಬೆಂಗಳೂರು

Synopsys

‘ಶತಮಾನದ ತಿರುವಿನಲ್ಲಿ ಭಾರತ’ ಕೃತಿಯು ಎಸ್.ಆರ್.ರಾಮಸ್ವಾಮಿ ಅವರ ಮೌಲಿಕ ವಿಚಾರಗಳ ಕುರಿತ ಬರವಣಿಗೆಯಾಗಿದ್ದು, ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದಿರುತ್ತದೆ. ಈ ಕೃತಿಯಲ್ಲಿನ ವಿಚಾರಗಳು ಹೀಗಿವೆ : ಸ್ವಾತಂತ್ಯ್ರೋತ್ತರ ಭಾರತದ ಆರ್ಥಿಕ ಯೋಜನೆಗಳನ್ನು ಕುರಿತ ಚಿಕಿತ್ಸಕ ಜಿಜ್ಞಾಸೆಯ ಗ್ರಂಥ. ವಿವಿಧ ಯೋಜನೆಗಳ ವೈಫಲ್ಯಕ್ಕೆ ಕಾರಣವೇನು? ಸರ್ಕಾರ ಜನವಿರೋಧಿ ಯೋಜನೆಗಳನ್ನೇ ಕೈಗೊಳ್ಳುವುದಕ್ಕೆ ಪ್ರೇರಕವಾದ ಒತ್ತಡಗಳು ಯಾವುವು? ಇವುಗಳ ತಲಸ್ಪರ್ಶಿ ವಿಶ್ಲೇಷಣೆ. ಬಡತನ ನಿರುದ್ಯೋಗಿಗಳಿಗೆ ಕಾರಣ ಸಂಪನ್ಮೂಲಗಳ ಕೊರೆತೆ ಇವುಗಳನೆಲ್ಲಾ ಇಲ್ಲಿಕಟ್ಟಿಕೊಡಲಾಗಿದ. ವ್ಯವಸ್ಥೆ-ಧೋರಣೆಗಳಲ್ಲೆ ಇರುವ ನ್ಯೂನತೆ; ಗ್ರಾಮಾಂತರ ಪ್ರದೇಶಗಳ ಬಾಳಿನ ಸಮಸ್ಯೆಗಳಿಗೂ ಅಂತರರಾಷ್ಟ್ರೀಯ ಆಯಾಮಗಳಿವೆ ಎಂಬುದನ್ನು ವಿಶದೀಕರಿಸುವ ಪ್ರಯತ್ನವನ್ನು ಈ ಪುಸ್ತಕದಲ್ಲಿ ಮಾಡಲಾಗಿದೆ.

 

About the Author

ಎಸ್‌.ಆರ್‌. ರಾಮಸ್ವಾಮಿ

ನಾಡೋಜ ಎಸ್‌.ಆರ್‌.ರಾಮಸ್ವಾಮಿ ಅವರು ಪತ್ರಕರ್ತರಾಗಿ, ಲೇಖಕರಾಗಿ, ಚಿಂತಕರಾಗಿ, ವಿಮರ್ಶಕರಾಗಿ, ಸಾಮಾಜಿಕ ಕಾರ್ಯಕರ್ತರಾಗಿ ನಾಡಿನಲ್ಲಿ ಸುಪರಿಚಿತರು. ಮೂಲತಃ ಬೆಂಗಳೂರಿನವರೇ ಆದ ರಾಮಸ್ವಾಮಿ ಅವರು ಕನ್ನಡ, ತೆಲುಗು, ಸಂಸ್ಕೃತ, ಹಿಂದಿ, ಇಂಗ್ಲಿಷ್, ಜರ್ಮನ್, ಫ್ರೆಂಚ್ ಭಾಷೆಗಳಲ್ಲಿ ಪ್ರಾವೀಣ್ಯತೆ ಹೊಂದಿದವರು. 1950ರ ದಶಕದಲ್ಲಿ ಪತ್ರಿಕೋದ್ಯಮ ಪ್ರವೇಶಿಸಿದ ಇವರು, 1972 ರಿಂದ 79ರ ವರೆಗೆ ಸುಧಾ ವಾರಪತ್ರಿಕೆಯ ಮುಖ್ಯ ಉಪಸಂಪಾದಕರಾಗಿ ಸೇವೆ ಸಲ್ಲಿಸಿದರು. 1980ರಲ್ಲಿ ರಾಷ್ಟೋತ್ಥಾನ ಸಾಹಿತ್ಯ ಮತ್ತು ಉತ್ಥಾನ ಮಾಸಪತ್ರಿಕೆಯ ಗೌರವ ಪ್ರಧಾನ ಸಂಪಾದಕರಾದ ಇವರು ಇಂದಿಗೂ ಆ ಹುದ್ದೆಯಲ್ಲಿ ಸೇವಾನಿರತರಾಗಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಸುಮಾರು 55 ಕ್ಕೂ ...

READ MORE

Related Books