ಶಿಕ್ಷಣ ಮತ್ತು ಜೀವನ ಶೈಲಿ

Author : ಚಿದಾನಂದ ಸಾಲಿ

Pages 10

₹ 30.00




Year of Publication: 2010
Published by: ಪ್ರಸರಾಂಗ
Address: ಕನ್ನಡ ವಿಶ್ವವಿದ್ಯಾಲಯ ಹಂಪಿ, ವಿದ್ಯಾರಣ್ಯ - 583276
Phone: 083942 41337

Synopsys

ಕನ್ನಡ ವಿಶ್ವವಿದ್ಯಾಲಯ ತನ್ನ ಸೃಜನಶೀಲ ಸಂಶೋಧನೆಯ ಹಾದಿಗಳನ್ನು ಶೋಧಿಸುವ ನಿಟ್ಟಿನಲ್ಲಿ, ಶೋಧನೆಯ ಹಿನ್ನೆಲೆಯಾಗಿ  ಕನ್ನಡ ಸಾಹಿತ್ಯ ಪರಂಪರೆ, ಜನಪದ ಮೌಖಿಕ ಪರಂಪರೆ,  ಜ್ಞಾನಶಿಸ್ತುಗಳನ್ನು ರೂಪಿಸಿಕೊಳ್ಳುವ ಅಗತ್ಯವನ್ನು  ಶಿಕ್ಷಣವಲಯಕ್ಕೆ ಪರಿಚಯಿಸಿದೆ. ಶೈಕ್ಷಣಿಕ ಚಿಂತನೆಯ ಸಂಕಟಗಳನ್ನು, ಬಿಕ್ಕಟ್ಟುಗಳನ್ನು ಎದುರಿಸುತ್ತಲೇ ಕನ್ನಡ ವಿಶ್ವವಿದ್ಯಾಲಯ, ಶಿಕ್ಷಣ ವಿಭಾಗ ಮುಂದುವರೆಯುತ್ತಿದೆ. ಕನ್ನಡದ ಜಗತ್ತು, ಜಗತ್ತಿಗೆ ಹೇಳಬೇಕಾದದ್ದು ಮತ್ತು ಕಲಿಸಬೇಕಾದದ್ದನ್ನು ’ಶಿಕ್ಷಣ ಮತ್ತು ಜೀವನ ಶೈಲಿ’ ಕಿರುಹೊತ್ತಿಗೆಯಲ್ಲಿ ಆಧುನಿಕ ಚಿಂತನೆಗಳನ್ನು ಲೇಖಕರಾದ ಚಿದಾನಂದ ಸಾಲಿಯವರು ಈ ಕಿರುಹೊತ್ತಿಗೆಯಲ್ಲಿ  ಮುಖಾಮುಖಿಗೊಳಿಸುವ ಪ್ರಯತ್ನವನ್ನು ಮಾಡಿದ್ದಾರೆ.   

About the Author

ಚಿದಾನಂದ ಸಾಲಿ

ಕವಿ-ಕತೆಗಾರ- ಅನುವಾದಕ ಚಿದಾನಂದ ಸಾಲಿ ಅವರು ಮೂಲತಃ ರಾಯಚೂರು ಜಿಲ್ಲೆಯ ಸಿರವಾರದವರು.  ಗಣಿತಶಾಸ್ತ್ರದಲ್ಲಿ ಎಂಎಸ್ಸಿ, ಪತ್ರಿಕೋದ್ಯಮ, ಕನ್ನಡದಲ್ಲಿ  ಎಂ.ಎ. ಪದವಿ ಪಡೆದಿರುವ ಅವರು ಎಂಫಿಲ್, ಪಿಜಿಡಿಎಚ್ ಇ ಮತ್ತು ಪಿಜಿಡಿಎಚ್ ಆರ್ ಎಂ ಪದವೀಧರರು. ಕೆಲಕಾಲ ಪತ್ರಕರ್ತರಾಗಿದ್ದ ಅವರು ಸರ್ಕಾರಿ ಪ್ರೌಢಶಾಲೆಯ ಗಣಿತ ಶಿಕ್ಷಕರು. ಪ್ರಜಾವಾಣಿ ಕಥಾಸ್ಪರ್ಧೆ, ಕ್ರೈಸ್ಟ್‌ ಕಾಲೇಜ್ ಕಾವ್ಯಸ್ಪರ್ಧೆ, ಕನ್ನಡಪ್ರಭ ಕಥಾಸ್ಪರ್ಧೆ, ಸಂಕ್ರಮಣ ಕಾವ್ಯಸ್ಪರ್ಧೆ, ಸಂಚಯ ಕಾವ್ಯಸ್ಪರ್ಧೆ, ಪ್ರಜಾವಾಣಿ ಕಾವ್ಯಸ್ಪರ್ಧೆ ಮುಂತಾದವುಗಳಲ್ಲಿ ಬಹುಮಾನ ಪಡೆದಿದ್ದಾರೆ. ರೆ. ..(ಕವಿತೆ); ಮೌನ(ಕನ್ನಡ ಗಜಲ್); ಧರೆಗೆ ನಿದ್ರೆಯು ಇಲ್ಲ(ಕಥಾಸಂಕಲನ), ಚೌಕಟ್ಟಿನಾಚೆ (ಬೆಟ್ಟದೂರರ ಕಲಾಕೃತಿಗಳನ್ನು ಕುರಿತು); ಶಿಕ್ಷಣ ಮತ್ತು ಜೀವನಶೈಲಿ ...

READ MORE

Related Books