
ಸಾಹಿತಿ ಉದಯ್ ಕುಮಾರ್ ಹಬ್ಬು ಅವರು ಶಿಕ್ಷಣದ ಕುರಿತ ಮಹಾನ್ ಚಿಂತಕರ ಆಲೋಚನೆಗಳನ್ನು ವ್ಯವಸ್ಥಿತವಾಗಿ ಕ್ರೋಢಿಕರಿಸಲಾಗಿರುವ ಕೃತಿ- ಶಿಕ್ಷಣತಜ್ಞರ ಅಭಿಪ್ರಾಯಗಳ ಒಂದು ಚಿಂತನೆ. ಕೃತಿಗೆ ಮುನ್ನುಡಿ ಬರೆದ ಸಾಹಿತಿ ಮದನ್ ಹೆಚ್. ‘ಈ ಹೊತ್ತಗೆಯು ಮಹಾನ್ ಶೈಕ್ಷಣಿಕ ಚಿಂತಕರಾದ ಬುದ್ಧ, ಕನ್ಪೂಶಿಯಸ್, ನಾರಾಯಣಗುರು, ಸ್ವಾಮಿ ವಿವೇಕಾನಂದ, ಸ್ವಾಮಿ ದಯಾನಂದ ಸರಸ್ವತಿ ಮುಂತಾದ ಚಿಂತಕರ ಶೈಕ್ಷಣಿಕ ವಿಚಾರಗಳು ಕ್ರೋಢಿಕೃತಗೊಂಡು, ಶಿಕ್ಷಣ ತಜ್ಞರಿಗೆ ಅನುಕೂಲವಾಗುವಂತಿದೆ. ವಿದ್ಯಾರ್ಥಿಗಳಿಗೆ, ಶಿಕ್ಷಣಕ್ಷೇತ್ರದಲ್ಲಿ ಅಧ್ಯಾಪಕರಾಗಿ ದುಡಿಯುತ್ತಿರುವವರಿಗೆ ದೀವಟಿಗೆಯಂತಿದೆ. ಇಂತಹ ಒಂದು ಪುಸ್ತಕ ಈ ಹಿಂದೆ ಶಿಕ್ಷಣದ ಕುರಿತಾಗಿ ಬಂದದ್ದಿಲ್ಲ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
©2025 Book Brahma Private Limited.