ಶಿಲ್ಪಕಲಾ ದೇವಾಲಯಕ್ಕೆ ದಾರಿ- ಸಂಪುಟ 4

Author : ಎನ್.ಎಸ್‌. ಶ್ರೀನಿವಾಸಮೂರ್ತಿ

₹ 125.00




Published by: ಸಹನಾ ಪಬ್ಲಿಕೇಶನ್

Synopsys

ಲೇಖಕ ಎನ್.‌ಎಸ್.‌ ಶ್ರೀನಿವಾಸಮೂರ್ತಿ ಅವರ ಐತಿಹಾಸಿಕ ಕೃತಿ ʻಶಿಲ್ಪಕಲಾ ದೇವಾಲಯಕ್ಕೆ ದಾರಿ- ಸಂಪುಟ 4ʼ. ಕಲೆ ಸಂಸ್ಕೃತಿಯಲ್ಲಿ ಶ್ರೀಮಂತವೆನಿಸಿಕೊಂಡಿರುವ ನಾಡು ಕರ್ನಾಟಕ. ಇಲ್ಲಿನ ವಾಸ್ತು ಶಿಲ್ಪ ಚಾರಿತ್ರಿಕ ಯುಗದ ಆರಂಭಕಾಲದಿಂದಲೂ ಪ್ರಾಮುಖ್ಯತೆಯನ್ನು ಗಳಿಸಿಕೊಳ್ಳುತ್ತಾ ಬಂದಿದೆ. ಹೀಗೆ ಮೌರ್ಯರು, ಸಾತವಾಹನರು, ಕದಂಬರು, ಚಾಳುಕ್ಯರು, ರಾಷ್ಟ್ರಕೂಟ, ಹೊಯ್ಸಲ ರಾಜರುಗಳು ಕಟ್ಟಿದ ದೇವಾಲಯಗಳು ಹಲವಾರು. ಆದರೆ ಅವುಗಳಲ್ಲಿ ಯಾರ ಗಮನಕ್ಕೂ ಬಾರದೆ ಹೋಗಿರುವ ಕೆಲವು ದೇವಾಲಯ, ಶಿಲ್ಪಕಲೆಗಳ ಪರಿಚಯವನ್ನು ಈ ಕೃತಿ ಮಾಡುತ್ತದೆ. ಶ್ರೀನಿವಾಸಮೂರ್ತಿ ಅವರು ತಮ್ಮ ದೇವಾಲಯದ ಪಯಣದಲ್ಲಿ ಸುಮಾರು 1600ಕ್ಕೂ ಅಧಿಕ ದೇವಾಲಯಗಳಿಗೆ ಭೇಟಿ ನೀಡಿದ್ದಾರೆ. ಅಂತಹ ದೇವಾಲಯಗಳ ಮಾಹಿತಿಗಳನ್ನು ಸಂಪುಟಗಳಾಗಿ ಹೊರತಂದಿದ್ದಾರೆ. ಈಗಾಗಲೇ ಅವರು ಹಿಂದಿನ ಮೂರೂ ಭಾಗಗಳಲ್ಲಿ ಜ ನರಿಗೆ ಅಪರಿಚಿತವಾದ ಹಲವಾರು ದೇವಾಲಯಗಳ ಪರಿಚಯ ನೀಡಿದ್ದು, ಇದೀಗ ನಾಲ್ಕನೇ ಸಂಪುಟವಾಗಿ ಬಂದ ಪುಸ್ತಕದಲ್ಲಿ ಕನಾಟಕದ ಆಯ್ದ 50 ಸ್ಥಳಗಳಲ್ಲಿನ ಸುಂದರ ಅಪರಿಚಿತ ದೇವಾಲಯಗಳ ಕುರಿತು ಹೇಳುತ್ತಾರೆ.

About the Author

ಎನ್.ಎಸ್‌. ಶ್ರೀನಿವಾಸಮೂರ್ತಿ

ಲೇಖಕ ಎನ್.ಎಸ್‌. ಶ್ರೀನಿವಾಸಮೂರ್ತಿ ಅವರು ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಹರಿಹರಪುರದವರು. ಕುವೆಂಪು ವಿಶ್ವವಿದ್ಯಾಲಯದಲ್ಲಿ ಎಂ.ಎಸ್ಸಿ ವಿದ್ಯಾಭ್ಯಾಸವನ್ನು ಪಡೆದಿರುವ ಅವರು ನಾಲ್ಕು ವರ್ಷಗಳ ಕಾಲ ಅಂಚೆ ಇಲಾಖೆಯಲ್ಲಿ ಕಾರ್ಯನಿರ್ವಹಿಸಿರುತ್ತಾರೆ. ಕಳೆದ 24 ವರ್ಷಗಳಿಂದ ಕರ್ನಾಟಕ ಬ್ಯಾಂಕಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೃತಿಗಳು : ಶಿಲ್ಪಕಲಾ ದೇವಾಲಯಕ್ಕೆ ದಾರಿ ಸಂಪುಟ-1, ಶಿಲ್ಪಕಲಾ ದೇವಾಲಯಕ್ಕೆ ದಾರಿ ಸಂಪುಟ-2 ...

READ MORE

Related Books