`ಶಿರಾಡಿ ಘಾಟ್’ ರಮೇಶ್ ಶೆಟ್ಟಿಗಾರ ಮಂಜೇಶ್ವರ ಅವರ ಕೃತಿಯಾಗಿದೆ. ಸಾಮಾನ್ಯವಾಗಿ ಹಾರರ್ ಕಥೆಗಳಲ್ಲಿ ವೈವಿಧ್ಯತೆ ತರುವುದು ಅಷ್ಟು ಸುಲಭವಲ್ಲ. ಆದರೆ ಈ ಕಥಾಸಂಕಲನದಲ್ಲಿ ಲೇಖಕರು ವೈವಿಧ್ಯದ ಜೊತೆಗೆ ಕೆಲವೆಡೆ ತಿಳಿಹಾಸ್ಯ ಸಿಂಪಡಿಸಿ. ಇನ್ನು ಕೆಲವು ಕಥೆಗಳಲ್ಲಿ ಹಾಂಟೆಡ್ ಸ್ಥಳಗಳ ಮಾಹಿತಿಗಳನ್ನು ನೀಡಿದ್ದಾರೆ. ಹಾರರ್ ಡಾರ್ಕ್ ಕಾಮಿಡಿ ಎಂಬ ಹೊಸ ಜಾನರ್ ಅನ್ನು ಕನ್ನಡಕ್ಕೆ ನೀಡುವ ಹಲವು ಕಥೆಗಳು ಇಲ್ಲಿವೆ. ಅಪೂರ್ಣ ಸತ್ಯ, ಮದನಿಕೆ. ಹಾಂಟೆಡ್ ಹೊಸಮನೆ ಹಾಗೂ ಎರಡನೇ ದೇವರು ಕೃತಿಗಳ ಮೂಲಕ ಈಗಾಗಲೇ ಕೌತುಕಮಯ ಕಥನ-ಕೃತಿಗಳನ್ನು ನೀಡಿದ ಶ್ರೀ ರಮೇಶ್ ಶೆಟ್ಟಿಗಾರರು "ಶಿರಾಡಿ ಘಾಟ್" ಕಥಾಸಂಕಲನದ ಮೂಲಕವೂ ಓದುಗರನ್ನು ಕಥೆಯೊಳಗೆ ಹಿಡಿದಿಟ್ಟುಕೊಂಡು ರೋಮಾಂಚನಗೊಳಿಸುವಲ್ಲಿ ಸಂದೇಹವಿಲ್ಲ.
ಕತೆಗಾರ ರಮೇಶ್ ಶೆಟ್ಟಿಗಾರ್ ಮಂಜೇಶ್ವರ ಅವರು (ಜನನ: 1969 ಡಿಸೆಂಬರ್ 13) ಮಂಜೇಶ್ವರದ ಕೊಡ್ಲಮೊಗರುದವರು. ಕೊಡ್ಲಮೊಗರು ಹಾಗೂ ಮಂಗಳೂರಿನಲ್ಲಿ ಶಿಕ್ಷಣ ಪಡೆದು, ವಾಣಿಜ್ಯ ವಿಭಾಗದಲ್ಲಿ ಪದವೀಧರರು. ಅಂತಾಷ್ಟ್ರೀಯ ಕಂಪನಿಗಳಲ್ಲಿ ಮಾನವ ಸಂಪನ್ಮೂಲ ವೃತ್ತಿಪರರಾಗಿ ಕಾರ್ಯನಿರ್ವಹಿಸಿದ್ದಾರೆ. ಅಪೂರ್ಣಸತ್ಯ, ಮದನಿಕೆ ಹಾಗೂ ಹಾಂಟೆಂಡ್ ಹೊಸಮನೆ ಇವರ ಕೃತಿಗಳು. ...
READ MORE