ಶಿವಾಜಿ ಮತ್ತು ಸುರಾಜ್ಯ

Author : ಮಹಾಬಲ ಸೀತಾಳಭಾವಿ

Pages 284

₹ 275.00




Year of Publication: 2019
Published by: ಸಮೃದ್ಧ ಸಾಹಿತ್ಯ
Address: ಬೆಂಗಳೂರು
Phone: 9880773027

Synopsys

ಲೇಖಕ ಮಹಾಬಲ ಸೀತಾಳಭಾವಿ ಅವರ ಅನುವಾದಿತ ಕೃತಿ ‘ಶಿವಾಜಿ ಮತ್ತು ಸುರಾಜ್ಯ’. ಪುಸ್ತಕದ ಹೆಸರೇ ಆಕರ್ಷಣೀಯವಾದದ್ದು, ಈ ಪುಸ್ತಕಕ್ಕೆ 2012 ರಲ್ಲಿ ಈಗಿನ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮುನ್ನುಡಿ ಇದೆ ಎಂದು ತಿಳಿದ ಮೇಲೆ ಆಸಕ್ತಿ ಒಂದಿಷ್ಟು ಹೆಚ್ಚಿತು. ಕನ್ನಡದ ಮಟ್ಟಿಗೆ ಶಿವಾಜಿಯ ಕಥೆ ಹೇಳುವ ಪುಸ್ತಕಗಳ ಸಂಖ್ಯೆ ತೀರಾ ಕಡಿಮೆ, ರಾಷ್ಟ್ರೋತ್ಥಾನ ಪರಿಷತ್ತಿನ ಯುಗಾವತಾರ ಮತ್ತು ಮಕ್ಕಳಿಗಾಗಿ ಬಾಲ ಭಾರತಿ ಸರಣಿ ಬಿಟ್ಟರೆ, ನಮ್ಮ ಶಾಲಾ ದಿನಗಳಲ್ಲಿ ಶಿವಾಜಿಯ ಹೆಸರು ಪರೀಕ್ಷಾರ್ಥವಾಗಿ ಒಂದೆರೆಡು ಪುಟ ಮೀಸಲಿಟ್ಟಿರಬಹುದು.!

ಈ ಕೃತಿಯು ಆತನ ಬಾಲ್ಯದ ಬಗ್ಗೆ ಅಷ್ಟಾಗಿ ಬೆಳಕು ಚೆಲ್ಲದಿದ್ದರೂ, ಆತನ ನಾಯನಾಗುವ ಪರಿ ಸವಿವರವಾಗಿ ಕಟ್ಟಿಕೊಟ್ಟಿದ್ದಾರೆ ಲೇಖಕರು (ಅನಿಲ್ ಮಾಧವ ಧಾವೆ). ಉದಾಹರಣೆಗೆ, ಅಫ್ಝಲಖಾನ್ ಸಾವಿನ ಸಂಚು ಪ್ರತಾಪಘಡ್ ಯೋಜನೆ,ಅನುಷ್ಠಾನ ಮತ್ತು ಸಿದ್ದಿ. ಒಬ್ಬ ನಾಯಕನ ಲಕ್ಷಣ, ಆತ ಜನರನ್ನು ಮತ್ತು ಶತ್ರುಗಳನ್ನು ಹೇಗೆ ಪರಿಗಣಿಸುತ್ತಿದ್ದ. ಯಾರಿಗೆ ಏನು ಯಾವಾಗ ಏಕೆ ಹೇಗೆ ಪರಿಶೀಲನಾ ಹಂತ ಅತ್ಯುತ್ತಮ ಸಂಸ್ಕರಿಸಲ್ಪಟ್ಟ ರಾಜ್ಯಶಾಸ್ತ್ರ ಶಿವಾಜಿಯ ಕಲ್ಪನೆ.ಆತ ತಯಾರಿಸಿದ ಮಧ್ಯಮ ಗಾತ್ರದ ನೌಕೆ ವಿಶ್ವ ಮಹಾಯುದ್ಧದಲ್ಲಿ ಬಳಕೆಯಾಯಿತು, ಆತನ ಸೇನಾ ವೈಖರಿ ಹಲವು ದೇಶಗಳಲ್ಲಿ(ಪಾಕಿಸ್ತಾನದ ಆಯುಬ್ ಖಾನ್) ಪಾಠವಾಗಿತ್ತು.

ಈ ಪುಸ್ತಕದಲ್ಲಿ ಒಂದೊಂದು ಕಥೆಯಾದಮೇಲೆ, ವಾಸ್ತವಾಂಶಗಳನ್ನು ಹೋಲಿಸಿ ಬರೆದದ್ದು ಓದುಗನ ಜ್ಞಾನಕ್ಕೆ ಹೊಸ ರುಚಿ. ಇತ್ತೀಚಿನ ಸರ್ಕಾರಗಳು ರೈತರ ಸಾಲಮನ್ನ ಮಾಡೋದು ಸಾಧನೆ ಅಂದುಕೊಂಡಿರುವಾಗ, ಶಿವಾಜಿ ಆತನ ಕಾಲದಲ್ಲಿ ನೇಗಿಲಿಗೆ ನೇಗಿಲು, ಎತ್ತಿಗೆ ಎತ್ತು ಕೊಟ್ಟು ರೈತ ಹಾದಿ ತಪ್ಪದ ಹಾಗೆ ನೋಡಿಕೊಂಡ. ಮಳೆಗಾಲದಲ್ಲಿ ಸೈನಿಕರು ಸಹ ಕೃಷಿಯಲ್ಲಿ ತೊಡಗಿಕೊಳ್ಳಬೇಕೆಂಬ ಕಟ್ಟು ನಿಟ್ಟಿನ ಆದೇಶ, ಸ್ವತಃ ತಾನೇ ಮುಂದೆ ನಿಂತು ಎಲ್ಲವನ್ನು ಪರಿಶೀಲಿಸುತ್ತಿದ್ದ. ನಾನು ಅನ್ನುವ ಬದಲು ನಾವು ಎನ್ನುವ ಪರಿಕಲ್ಪನೆ ಸ್ವರಾಜ್ಯದ ಬುನಾದಿ, ಇದು ಎಷ್ಟರಮಟ್ಟಿಗೆ ಇತ್ತೆಂದರೆ ಶಿವಾಜಿಯ ಅನುಪಸ್ಥಿಯಲ್ಲೂ ಅಚ್ಚುಕಟ್ಟಾಗಿ ಸಾಗಿತ್ತು. ಉತ್ತಮ ನಾಯಕತ್ವಕ್ಕೆ ಶಿವಾಜಿಯ 22 ಸೂತ್ರಗಳು ಈ ಪುಸ್ತಕದ ಮೂಲ ಉದ್ದೇಶ, ಆದ್ದರಿಂದ ಇತಿಹಾಸದ ಸರ್ವವಸ್ತು ಇಲ್ಲಿ ಲಭ್ಯವಿಲ್ಲ.

About the Author

ಮಹಾಬಲ ಸೀತಾಳಭಾವಿ

ಮಹಾಬಲ ಸೀತಾಳಭಾವಿ ಅವರು ಮೂಲತಃ ಲೇಖಕರು ಹಾಗೂ ಅನುವಾದಕರು.  ಕೃತಿಗಳು: ಕಾಳಿದಾಸ ಮಹಾಕವಿಯ ಅಭಿಜ್ಞಾನ ಶಾಕುಂತಲ (ಅನುವಾದಿತ ನಾಟಕ), ಚಾಟು ಕವಿತೆಗೆ ಚುಟುಕು ಕತೆ (ಚಾಟೋಕ್ತಿಗಳ ಸಂಗ್ರಹ ಕೃತಿ), 108 ಹಳೆ ಆಚಾರ ಹೊಸ ವಿಚಾರ, ಆಂಟೆನ ಚೆಕಾಫ್ ಕಥೆಗಳು (ಅನುವಾದ), ಮ್ಯಾನೇಜ್ ಮೆಂಟ್ ಕತೆಗಳು (ಯಶಸ್ವಿಗೆ 150 ಅಡ್ಡದಾರಿಗಳು), ಚಾಣಕ್ಯ ನೀತಿ, ಮ್ಯಾನೇಜ್ ಮೆಂಟ್ ಭಗವದ್ಗೀತೆ, ನಿತ್ಯ ಜೀವನಕ್ಕೆ ಹತ್ತಿರದ ಸುಭಾಷಿತಗಳು, ಈ ತಪ್ಪು ನೀವು ಮಾಡಬೇಡಿ.  ...

READ MORE

Related Books