ಶಿವಾಜಿ ಮೂಲ ಕನ್ನಡ ನೆಲ

Author : ಸರಜೂ ಕಾಟ್ಕರ್‌

Pages 214

₹ 125.00




Year of Publication: 2015
Published by: ಲೋಹಿಯಾ ಪ್ರಕಾಶನ
Address: ಕ್ಷಿತಿಜ, ಕಪ್ಪುಗಲ್ಲು ರಸ್ತೆ, ಬಳ್ಳಾರಿ-583103
Phone: 08392257412

Synopsys

ಶಿವಾಜಿ ಸ್ವಸಾಮರ್ಥ್ಯದಿಂದ ವಿಶಾಲ ಪ್ರದೇಶವನ್ನು ಗೆದ್ದರೂ ಅಧಿಕೃತವಾಗಿ ಮಹಾರಾಜನೆನ್ನಿಸಿಕೊಂಡು ಸಿಂಹಾಸನವನ್ನೇರಲು ಅವನ ಹುಟ್ಟು ಅಡ್ಡಿ ಬಂದಾಗ, ರಾಜಾಸ್ಥಾನದ ಸಿಸೋದಿಯ ಎಂಬ ಕ್ಷತ್ರಿಯ ವಂಶದ ಜೊತೆಗೆ ಅವನ ವಂಶವನ್ನು ಸಮ್ಮಿಲನಗೊಳಿಸಿ ಒಂದು ಕೃತಕ ವಂಶವೃಕ್ಷವನ್ನು ಸೃಷ್ಟಿಸುವುದರ ಮೂಲಕ ಅವನಿಗೆ ಕ್ಷತ್ರಿಯತ್ವವನ್ನು ಪುರೋಹಿತರು ಕಲ್ಪಿಸಿದ್ದೇ ಅವನ ಮೂಲವನ್ನು ತಪ್ಪಾಗಿ ಗುರುತಿಸಲು ನಿಮಿತ್ತವಾಯಿತು.

ಡಾ. ಢೇರೆ ಹೀಗೆ ಪರಂಪರೆ ಒಪ್ಪಿದ್ದ ರಾಜಸ್ಥಾನದ ಸಿಸೋದಿಯ ಮೂಲವನ್ನು ನಿರಾಕರಿಸಿ ಅವನನ್ನು ಮೂಲತಃ ಕರ್ನಾಟಕದ ಗವಳಿ(ಗೌಳಿ) ಜನಾಂಗದವನೆಂದು ಸ್ಥಾಪಿಸಲು ಬಹು ಧೈರ್ಯವನ್ನು ತೋರಿದ್ದಾರೆ; ಗೆದ್ದಿದ್ದಾರೆ.

ಲೇಖಕ ಸರಜೂ ಕಾಟ್ಕರ್ ಈ ಕೃತಿಯ ಮೂಲವಾದ ಮರಾಠಿ ಕೃತಿಯ ಸಾರವನ್ನು ಬಹು ಸಮರ್ಥವಾಗಿ ಆಕರ್ಷಕ ಶೈಲಿಯಲ್ಲಿ ಹಿಡಿದಿಟ್ಟಿದ್ದಾರೆ. ವಾಸ್ತವತೆ, ಪರಂಪರೆ ಹಾಗೂ ಸಂಶೋಧನೆಯ ನೆಲೆಗಟ್ಟಿನ ಮೇಲೆ ಅವರು ಈ ಕೃತಿಯನ್ನು ರಚಿಸಿದ್ದಾರೆ. ಈವರೆಗೂ ಕೃತಿಯು ಐದು ಬಾರಿ ಮುದ್ರಣಗಳನ್ನು ಕಂಡಿದೆ.

About the Author

ಸರಜೂ ಕಾಟ್ಕರ್‌
(14 August 1953)

ವೃತ್ತಿಯಲ್ಲಿ ಪತ್ರಕರ್ತರು ಆಗಿರುವ ಕವಿ ಸರಜೂ ಕಾಟ್ಕರ್ ಅವರು ಜನಿಸಿದ್ದು (1953 ಆಗಸ್ಟ್‌ 14ರಂದು) ಹುಬ್ಬಳ್ಳಿಯಲ್ಲಿ . ತಂದೆ ಹಣಮಂತರಾವ್, ತಾಯಿ ಗೌರಾಬಾಯಿ.  ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ (ಕನ್ನಡ) ಪದವೀಧರರು.ಕರ್ನಾಟಕ ವಿ.ವಿ.ಯಿಂದ ‘ಕನ್ನಡ-ಮರಾಠಿ ದಲಿತ ಸಾಹಿತ್ಯ: ಒಂದು ಅಧ್ಯಯನ’ ವಿಷಯವಾಗಿ (1994) ಪಿಎಚ್ ಡಿ ಪಡೆದರು. ಸಂಯುಕ್ತ ಕರ್ನಾಟಕದಲ್ಲಿ ವರದಿಗಾರರಾಗಿ ವೃತ್ತಿ ಆರಂಭಿಸಿ, ನಂತರ ಇಂಡಿಯನ್‌ ಎಕ್ಸ್‌ಪ್ರೆಸ್‌ ಬಳಗದ ಪತ್ರಿಕೆಯಲ್ಲಿ ಪತ್ರಕರ್ತರಾಗಿದ್ದರು. ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರು ಸೇರಿದಂತೆ ಸರ್ಕಾರದ ಹಲವಾರು ಅಕಾಡೆಮಿ, ಸಮಿತಿ ಹೀಗೆ ವಿವಿಧ ಜವಾಬ್ದಾರಿತ ಸ್ಥಾನಗಳನ್ನು ನಿರ್ವಹಿಸಿದ್ದಾರೆ.  ಕೃತಿಗಳು: ಬೆಂಕಿ-ನೀರು, ಹಸಿದ ನೆಲ, ಸೂರ್ಯ, ...

READ MORE

Related Books