ಶಿವರಾಮ ಕಾರಂತರ ಗ್ನಾನ

Author : ಶಿವರಾಮ ಕಾರಂತ

Pages 109

₹ 135.00
Year of Publication: 2018
Published by: ಗೀತಾಂಜಲಿ ಪುಸ್ತಕ ಪ್ರಕಾಶನ
Address: ಕಂದಾಯ ಭವನ, ನೂರಡಿ ರಸ್ತೆ, ರಾಜೇಂದ್ರನಗರ, ಶಿವಮೊಗ್ಗ- 577204
Phone: 9449886390

Synopsys

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಕೆ. ಶಿವರಾಮ ಕಾರಂತ ಅವರು ಬರೆದ ಕೃತಿ-ಗ್ನಾನ. ಈ ಕೃತಿಯು ವಿಡಂಬನಾತ್ಮಕವಾಗಿ ಬರೆದ ಲೇಖನಗಳ ಸಂಕಲನವಾಗಿದೆ. ಈ ಪ್ರಪಂಚದ ಸೃಷ್ಟಿ ಹೇಗೆ? ಜೀವವೆಂಬುದಿದೆಯೇ?, ಜೀವ ಸೃಷ್ಟಿ ಹೇಗೆ?, ಜೀವ ಯಾರಲ್ಲಿದೆ, ಯಾರಲ್ಲಿಲ್ಲ. ಜೀವ ಎಲ್ಲಿಗೆ ಹೋಗುತ್ತದೆ. ಎಲ್ಲಿಂದ ಬಂತು, ಹೆಂಗಂ ಗ್ನಾನ, ಹೆಂಗಂ ವೃತಗಳು ಹೀಗೆ ವಿವಿಧ ಅಧ್ಯಾಯಗಳಿದ್ದು, ಹಾಸ್ಯರಸ ಹರಿಯುತ್ತದೆ. ಸ್ತ್ರೀಧರ್ಮ ರಹಸ್ಯ,, ಪತ್ರಗಳು, ಧರ್ಮ ಇತ್ಯಾದಿ ಅಧ್ಯಾಯಗಳಿವೆ. ಸ್ತ್ರೀಯು ಕೇಶ, ಕಣ್ಣು, ತುಟಿಗಳಿಂದಲೇ ಹಾವಳಿ ಮಾಡುತ್ತಿರಲು ಅವರಿಗೆ ಕೈಯಲ್ಲಿ ಲೇಖನಿಯನ್ನು ಹಿಡಿಯುವ ಅಧಿಕಾರ ಬರಲಾರದು. ಹಾಗೆ ಮಾಡಿದಲ್ಲಿ, ಬೀದಿಯಲ್ಲಿ ಹೋಗುವವರಿಗೆಲ್ಲ ಅವರು ಪ್ರಣಯ ಪತ್ರಗಳನ್ನು ಬರೆದಾರು ಇಂತಹ ವಾಕ್ಯಗಳಿಂದ ಲೇಖಕರು ಹಾಸ್ಯ ರಸ ಚಿಮ್ಮಿಸುವ ಬರೆಹಗಳನ್ನು ಈ ಸಂಕಲನದಲ್ಲಿ ಕಟ್ಟಿಕೊಡಲಾಗಿದೆ. 

ಹಕ್ಕು ಲೇಖಕರವು ಎಂಬುದು ಸಾಮಾನ್ಯವಾಗಿ ಎಲ್ಲ ಸೃಜನಶೀಲ ಕೃತಿಗಳ ಮೊದಲ ಪುಟದಲ್ಲಿ ಕಾಣಿಸಿಕೊಳ್ಳುವ ವಾಕ್ಯವಾದರೆ, ಈ ಕೃತಿಯ ಮೊದಲ ಪುಟದಿಂದಲೇ ತನ್ನ ವಿಡಂಬನಾತ್ಮಕ ಹಾಸ್ಯಮಯ ಶೈಲಿಯಿಂದ ಓದುಗರ ಗಮನ ಸೆಳೆಯುತ್ತದೆ.  ‘ಇದು ಸರ್ವ ಹಕ್ಕು ಕಾಯಿಸಿ ಇಡಲ್ಪಟ್ಟಿದೆ’ ಎಂಬುದೇ ಆ ವಾಕ್ಯ. ಮತ್ತೊಂದು ವಾಕ್ಯ ನೋಡಿ; ಈ ಗ್ರಂಥವನ್ನು ಮೂಸಿದವರಿಗೂ, ನೋಡಿದವರಿಗೂ ಒಂದು ಒಂದೂವರೆ ಟನ್ ತೂಕ ಪುಣ್ಯ ಸಿಗುವುದು...ಹೀಘೆ ಕಾರಂತರು ಈ ಕೃತಿಯ ಪ್ರಸ್ತಾವನೆಯಲ್ಲಿ ಹೇಳಿದ್ದಾರೆ. ಅವರ ಮುನ್ನುಡಿ ಬದಲಿಗೆ ಮರೆನುಡಿ. ಇದೆ.    

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಹರ್ಷ ಪ್ರಕಟಣಾಲಯವು 1935ರಲ್ಲಿ (ಪುಟ: 183) ಹರಟೆಗಳ ಈ ಕೃತಿಯನ್ನು ಮೊದಲ ಬಾರಿಗೆ ಪ್ರಕಟಿಸಿತ್ತು.15-06-1934 ರಿಂದ 30-11-1934ರವರೆಗೆ ಮಂಗಳೂರಿನ ‘ಸ್ವದೇಶಾಭಿಮಾನಿ’ ವಾರಪತ್ರಿಕೆಯಲ್ಲಿ ಪ್ರಕಟಗೊಂಡಿತ್ತು. 

About the Author

ಶಿವರಾಮ ಕಾರಂತ
(10 October 1902 - 09 December 1997)

ತಮ್ಮ ಬಹುಮುಖ ಪ್ರತಿಭೆಯಿಂದ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ಕೋಟ ಶಿವರಾಮ ಕಾರಂತರ ಕೊಡುಗೆ ಅನನ್ಯ- ಅಭೂತಪೂರ್ವ. 1902ರ ಅಕ್ಟೋಬರ್ 10ರಂದು ಜನಿಸಿದರು. ತಂದೆ ಶೇಷ ಕಾರಂತ ತಾಯಿ ಲಕ್ಷ್ಮಮ್ಮ. ಕುಂದಾಪುರದಲ್ಲಿ ಪ್ರೌಢಶಾಲಾ ವ್ಯಾಸಂಗವನ್ನು ಮುಗಿಸಿ ಮಂಗಳೂರಿನ ಸರ್ಕಾರಿ ಕಾಲೇಜನ್ನು ಸೇರಿದಾಗಲೆ ಗಾಂಧೀಜಿಯವರ ಅಸಹಕಾರ ಚಳುವಳಿಗೆ ಧುಮುಕಿದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕಾರಂತರು ಪ್ರವೇಶಿಸದ ಕ್ಷೇತ್ರವಿಲ್ಲ. ಅವರು ಸರ್ಕಾರದಲ್ಲಿ ಅಥವಾ ಇತರರ ಆಶ್ರಯದಲ್ಲಿ ದುಡಿಯಲಿಲ್ಲ. ಒಂಟಿಸಲಗದಂತೆ ನಡೆದರು, ವ್ಯಾಪಾರ ಮಾಡಿದರು, ವಸಂತ, ವಿಚಾರವಾಣಿ ಪತ್ರಿಕೆ ನಡೆಸಿದರು. ಬಾಲವನ ಸ್ಥಾಪಿಸಿದ್ದರು. ಚಲನಚಿತ್ರ , ಯಕ್ಷಗಾನ ಪ್ರಯೋಗಗಳನ್ನು ನಡೆಸಿದ್ದರು, ಹೀಗೆ ...

READ MORE

Related Books