ಶಿವರಾಮ ಕಾರಂತ ಹತ್ತು ಅಧ್ಯಯನಗಳು

Author : ಶಿವರಾಮು ಕಾಡನಕುಪ್ಪೆ

Pages 152

₹ 10.00




Year of Publication: 1982
Published by: ಭಾರತೀ ಪ್ರಕಾಶನ
Address: ಮೈಸೂರು ಪ್ರಿಟಿಂಗ್ ಅಂಡ್ ಪಬ್ಲಿಷಿಂಗ್ ಹೌಸ್ ಮೈಸೂರು

Synopsys

‘ಶಿವರಾಮ ಕಾರಂತ ಹತ್ತು ಅಧ್ಯಯನಗಳು’ ಕೃತಿಯು ಶಿವರಾಮು ಕಾಡನಕುಪ್ಪೆ ಅವರ ಸಂಪಾದಿತ  ಕೃತಿ. ಹತ್ತು ವಿಮರ್ಶಾತ್ಮಕ ಬರವಣಿಗೆಗಳನ್ನು ಒಳಗೊಂಡಿವೆ. ಅಳಿದ ಮೇಲೆ (ಜಿ. ಎಚ್. ನಾಯಕ), ಬೆಟ್ಟದ ಜೀವ (ಲಿಂಗದೇವರು ಹಳೆಮನೆ), ಮರಳಿ ಮಣ್ಣಿಗೆ(ಪೋಲಂಕಿ ರಾಮಮೂರ್ತಿ), ಮೂಕಜ್ಜಿಯ ಕನಸುಗಳು(ಶಿವರಾಮು ಕಾಡನಕುಪ್ಪೆ), ಗೀತನಾಟಕಗಳು ( ರಾಗೌ), ಅಪೂರ್ವ ಪಶ್ಚಿಮ (ಹೆಚ್. ಬಿ. ನರಸೇಗೌಡ), ಯಕ್ಷಗಾನ (ಹಿ. ಶೀ. ರಾಮಚಂದ್ರೇಗೌಡ) ಆ ಹಳ್ಳಿಯ ಹತ್ತು ಸಮಸ್ತರು (ಶಿವರಾಮ ಕಾಡನಕುಪ್ಪೆ), ಬಾಳ್ವೆಯೇ ಬೆಳಕು (ಕೆ. ರಾಮದಾಸ್), ಕಲೆಯ ದರ್ಶನ (ಸಿ.ಪಿ.ಕೆ)

ಕೃತಿಗೆ ಮೊದಲ ಮಾತು ಬರೆದಿರುವ ಶಿವರಾಮು ಕಾಡನಕುಪ್ಪೆ ಅವರು, ಆಧುನಿಕ ಕನ್ನಡ ಸಾಹಿತ್ಯದ ಮಹತ್ವ ಪೂರ್ಣ ಲೇಖಕರಲ್ಲಿ ಕಾರಂತರ ಸ್ಥಾನ ಪ್ರಮುಖವಾದುದು. ಬದುಕಿನ ಬಗ್ಗೆ ಅವರಿಗಿರುವ ಕಾಳಜಿ, ಕುತೂಹಲ, ಅನ್ವೇಷಕ ಮನಸ್ಥಿತಿಗಳು ಹೊಸ ಪೀಳಿಗೆಯ ಬರಹಗಾರರ ಮೇಲೆ ಗಾಢವಾದ ಪ್ರಭಾವ ಬೀರಿವೆಯೆಂದು ನನ್ನ ಗ್ರಹಿಕೆ, ಜೀವನವನ್ನು ಶೋಧಿಸುತ್ತಲೇ ಅದರ ಒಳಿತು-ಕೆಡುಕುಗಳ ಮೌಲ್ಯ ನಿರ್ಣಯ ಮಾಡುವ ಕಾರಂತರು, ನಮ್ಮ ನಡುವಿನ ದೊಡ್ಡ ವಿಚಾರವಾದಿ ; ವಾಸ್ತವವಾದಿ. ಕಲೆಯ ಎಲ್ಲ ಪ್ರಕಾರಗಳಲ್ಲಿ ದುಡಿದಿರುವ ದೈತ್ಯ ಸೃಜನಶೀಲ ವ್ಯಕ್ತಿ. ಕಾರಂತರ ಸಾಹಿತ್ಯದ ಬಗ್ಗೆ ನಮ್ಮಲ್ಲಿ ಸಾಕಷ್ಟು ವಿಮರ್ಶೆ ಬಂದಿದೆ. ಆದರೆ, ಅವರ ಸಾಹಿತ್ಯವನ್ನು ಹೊಸ ದೃಷ್ಟಿಕೋನದಿಂದ ನೋಡಿರುವ, ಅಧ್ಯಯನ ಮಾಡಿರುವ ವಿಮರ್ಶೆ ಕಡಿಮೆ ಇದೆ. ಇತ್ತಿಚಿನ ಕೆಲ ಹೊಸ ಲೇಖಕರು ಈ ಕೆಲಸ ಮಾಡುತ್ತಿರುವುದು ಕನ್ನಡ ವಿಮರ್ಶೆಯ ಬೆಳವಣಿಗೆಯ ಸೂಚನೆ. ಪ್ರಸ್ತುತ ಈ ಪುಸ್ತಕ ಅಂಥ ಒಂದು ಪ್ರಯತ್ನ. ಕಾರಂತರ ಸಾಹಿತ್ಯ ಸೃಷ್ಟಿಯ ವಿವಿಧ ಪ್ರಕಾರಗಳ ಕೆಲವು ಮುಖ್ಯ ಕೃತಿಗಳನ್ನು ಈ ಪುಸ್ತಕದಲ್ಲಿ ವಿಮರ್ಶೆ ಮಾಡಲಾಗಿದೆ. ಇಲ್ಲಿನ ಬಹುಪಾಲು ಲೇಖಕರು ಹೊಸ ಪೀಳಿಗೆಯವರು. ಸಾಹಿತ್ಯವನ್ನು ಭಿನ್ನ ದೃಷ್ಟಿಕೋನದಿಂದ ನೋಡುವ ಮನೋಧರ್ಮದವರು. ಇದರಿಂದಾಗಿ ಇಲ್ಲಿನ ಲೇಖನಗಳು ಕಾರಂತರ ಸಾಹಿತ್ಯದ ಮೇಲೆ ಹೊಸ ಬೆಳಕನ್ನು ಚೆಲ್ಲುವ ಪ್ರಯತ್ನ ಮಾಡಿವೆ ಎಂದು ಹೇಳಿದ್ದಾರೆ. 

About the Author

ಶಿವರಾಮು ಕಾಡನಕುಪ್ಪೆ
(09 August 1953 - 26 July 2018)

ರಾಮನಗರ ಜಿಲ್ಲೆಯ ಕಾಡನಕುಪ್ಪೆಯ ಹಳ್ಳಿಯಲ್ಲಿ ಶಿವರಾಮು ಕಾಡನಕುಪ್ಪೆ (1953ರ ಆಗಸ್ಟ್ 9) ಜನಿಸಿದರು. ತಂದೆ ಲಿಂಗೇಗೌಡ, ತಾಯಿ-ಶಿವಮ್ಮ. ಕನ್ನಡ ಸಾಹಿತ್ಯವಲಯದಲ್ಲಿ ಉತ್ತಮ ವಿಮರ್ಶಕರು, ಪ್ರಬಂಧಕಾರರು, ಕವಿಗಳು, ಕಾದಂಬರಿಕಾರರು ಎಂಬ ಖ್ಯಾತಿ ಇವರಿಗಿದೆ. ದಲಿತ ಸಮುದಾಯದ ಜೀವನ ಅನುಭವಗಳನ್ನು ಸಮಗ್ರವಾಗಿ ಕಟ್ಟಿಕೊಡುವ ಕೃತಿ-ಕುಕ್ಕರಹಳ್ಳಿ, ಮೈಸೂರು ವಿ.ವಿ. ಪದವಿ ವಿದ್ಯಾರ್ಥಿಗಳಿಗೆ ಪಠ್ಯವಾಗಿದೆ. ಮೈಸೂರಿನ ವಿದ್ಯಾವರ್ಧಕ ಪ್ರಥಮ ದರ್ಜೆ ಪದವಿ ಕಾಲೇಜು ಪ್ರಿನ್ಸಿಪಾಲರಾಗಿಯೂ ಸೇವೆ ಸಲ್ಲಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ಪಂಪ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರು, ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರು, 2006ರಲ್ಲಿ ಜರುಗಿದ ಬೆಂಗಳೂರು ಗ್ರಾಮಾಂತರ ಕನ್ನಡ ಸಾಹಿತ್ಯ ...

READ MORE

Related Books