ಶಿವಶರಣ ಪಾಟೀಲ ಜವಳಿ ಅವರ ಬದುಕು ಬರಹ

Author : ಸೂರ್ಯಕಾಂತ ಪಾಟೀಲ

Pages 256

₹ 300.00




Year of Publication: 2017
Published by: ವಿಜಯಕ್ರಾಂತಿ ಪ್ರಕಾಶನ,
Address: ಕಲಬುರಗಿ

Synopsys

ಸಾಹಿತಿ ಡಾ. ಶಿವಶರಣ ಪಾಟೀಲ ಅವರ ಬದುಕು ಬರಹ ಕುರಿತು ಡಾ. ಸೂರ್ಯಕಾಂತ ಪಾಟೀಲ್ ಅವರು ಬರೆದ ಕೃತಿ ಇದು. ಹೈದರಾಬಾದ ಕರ್ನಾಟಕದ ಅನೇಕ ಪ್ರಮುಖ ಕವಿಗಳ ಸಾಲಿನಲ್ಲಿ ಶಿವಶರಣ ಪಾಟೀಲ ಜಾವಳಿ ಅವರು ಪ್ರಮುಖವಾಗುತ್ತಾರೆ. ಸಾಹಿತ್ಯ ಸಂಘಟನೆಗಳ ರೂವಾರಿ, ಪ್ರಯೋಗಶೀಲ ಚಿಂತಕರೂ ಹೌದು. ಹುಟ್ಟಿದ ನೆಲದ ಸತ್ವ ಹೀರಿಕೊಂಡು, ನಿಂತ ನೆಲದ ಸಂಸ್ಕೃತಿಯನ್ನು ಗೌರವಿಸಿ,ಪ್ರೀತಿಸುವುದರೊಂದಿಗೆ ಗಮನಾರ್ಹ ಚಿಂತನೆಗಳಿಂದ ಕಾವ್ಯ ಕೃಷಿ ಕೈಗೊಂಡಿದ್ದಾರೆ. ಬಂಡಾಯದ ಧೋರಣೆಯಲ್ಲಿಯೂ  ಸಮಾಜಮುಖಿಯಾಗಿ ಚಿಂತಿಸುತ್ತಾ, ವಿನೂತನ ಶೈಲಿಯಯೊಂದಿಗೆ  ಕಾವ್ಯಪರಂಪರೆಗೆ ಹೊಸ ತಿರುವು  ನೀಡಿದ್ದಾರೆ.  ಕಾವ್ಯವನ್ನು ಮಹಿಳಾಪರ ಕಾಳಜಿ, ಶೋಷಣೆ,ಸಾಮಾಜಿಕ ವಿಡಂಬನೆ, ಸಾಮಾಜಿಕ ಪ್ರಜ್ಞೆ,ರಾಜಕಾರಣ,ಹೀಗೆ ಐದು ನೆಲೆಗಳಲ್ಲಿ ವಿಂಗಡಿಸಿ,ಕಾವ್ಯದ ಕಾಳಜಿಯನ್ನು ಪ್ರಧಾನವಾಗಿ ಗುರುತಿಸಲಾಗಿದ್ದು,ಅವುಗಳಲ್ಲಿ ಸಾಂಪ್ರದಾಯಿಕ ದೃಷ್ಟಿಕೋನ, ಭಯ-ಭಕ್ತಿ ಪ್ರಯುಕ್ತ ಗೌರವ ಮತ್ತು ಭಾವುಕತನದ ಇದೆ.ಹಾಗೂ ಹೆಣ್ಣಿನ ಸೌಂದರ್ಯದ ಪರಿ ಹಾಗೂ ಮಾತೃತ್ವದ ವಿವಿಧ ರೂಪಗಳನ್ನು ಅದಮ್ಯ ಪರಿಕಲ್ಪನೆಯೊಂದಿಗೆ ಬಿಂಬಿಸುವುದನ್ನು ಕಾಣುತ್ತೇವೆ. ಸ್ತ್ರೀಯರು ಗೌರವಯುತವಾಗಿ  ಬದುಕಬೇಕೆಂಬ ಕವಿಯ ಸುಸಂಸ್ಕೃತ ಮನಸ್ಸು ಅವಳು ಶೋಷಣೆಗೆ ಒಳಗಾಗುತ್ತಿರುವುದನ್ನು ಖಂಡಿಸುತ್ತಾರೆ.  ಈ  ನೆಲದ ಭಾಷೆ ಸೊಬಗಿನೊಂದಿಗೆ, ವಿಶಿಷ್ಟ ಶೈಲಿಯನ್ನು ರೂಪಿಸಿಕೊಂಡು ಕಾವ್ಯದ ಅಸಲಿತನವನ್ನು ಇವರು ಸುಂದರವಾಗಿ ಬಿಂಬಿಸಿದ್ದಾರೆ.

ಸಂಶೋಧನೆ ಕೈಗೊಂಡಿರುವ ಡಾ.ಸೂರ್ಯಕಾಂತ್ ಪಾಟೀಲರು ಹೈದರಾಬಾದ ಕರ್ನಾಟಕ -ಒಂದು ನೋಟ, ಶಿವಶರಣ ಪಾಟೀಲ  ಜಾವಳಿ ಅವರ ಬದುಕು, ಶಿವಶರಣ ಪಾಟೀಲ ಜಾವಳಿಯವರ ಬರಹ,  ಶಿವಶರಣ  ಪಾಟೀಲ ಜಾವಳಿ ಅವರ ಸಂಘಟನಾತ್ಮಕ ಜೀವನ,  ಶಿವಶರಣ ಪಾಟೀಲ ಜಾವಳಿ ಅವರ ವ್ಯಕ್ತಿತ್ವ ದರ್ಶನ, ಕನ್ನಡ ಸಾಹಿತ್ಯಕ್ಕೆ ಶಿವಶರಣ ಪಾಟೀಲ ಜಾವಳಿ ಅವರ ಕೊಡುಗೆ ಹೀಗೆ ಏಳು ( 7 ) ಭಾಗ ಮಾಡಿಕೊಂಡ ಸಂಶೋಧನಾತ್ಮಕ ಬರಹಗಳು ಈ ಕೃತಿಯ ವಿಶಿಷ್ಟ್ಯವಾಗಿವೆ. 

 

About the Author

ಸೂರ್ಯಕಾಂತ ಪಾಟೀಲ

ಲೇಖಕ ಡಾ. ಸೂರ್ಯಕಾಂತ ಪಾಟೀಲರು ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಸರಸಂಬಾ ಗ್ರಾಮದವರು. ಎಂ.ಎ.ಪಿಹೆಚ್.ಡಿ (ಕನ್ನಡ), ಎಲ್.ಎಲ್.ಬಿ. ಪದವೀಧರರು. ಕಲಬುರಗಿ (ಉತ್ತರ ವಲಯ) ಬಂಡನಕೇರಾ ತಾಂಡಾದ ಸರಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರು.  ಶಿವಶರಣ ಪಾಟೀಲ ಜಾವಳಿ, ಬದುಕು - ಬರಹ ವಿಷಯವಾಗಿ ಪಿಎಚ್ ಡಿ ಪಡೆದಿದ್ದಾರೆ.  ಕೃ ತಿಗಳು :  ಶಿವಶರಣ ಪಾಟೀಲ ಜಾವಳಿ ಬದುಕು - ಬರಹ (ಸಂಶೋಧನೆ)  , ಬೆವರು--ಕಲಬುರಗಿ ಜಿಲ್ಲಾ 10 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆ -2007)  ಪ್ರಣತಿ -ಕಲಬುರಗಿ ಜಿಲ್ಲಾ11ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಕಟಣೆ-2010,  ಜಿಲ್ಲಾ ಪ್ರಾತಿನಿಧಿಕ ಕವಿತೆ ಸಂಕಲನ (ಸಂ), ನಮ್ಮೂರ ಹಿರಿಮೆ  ಕಲಬುರಗಿ ಜಿಲ್ಲಾ17ನೇ ...

READ MORE

Related Books