ಶ್ರವಣಸುಧಾ ಕಥನ

Author : ಶ್ರೀಪಾದ ಪೂಜಾರ್

Pages 304

₹ 300.00




Year of Publication: 2021
Published by: ಕಾಮಧೇನು ಪುಸ್ತಕ ಭವನ
Address: ನಾಗಪ್ಪ ಬೀದಿ, ಶೇಷಾದ್ರಿಪುರಂ, ಬೆಂಗಳೂರು

Synopsys

ಲೇಖಕ ಶ್ರೀಪಾದ ಪೂಜಾರ್ ಅವರು ರಚಿಸಿದ ಕೃತಿ-`ಶ್ರವಣಸುಧಾ ಕಥನ`. ವಿದ್ವಾನ್ ಡಾ. ಮಲ್ಲೇಪುರಂ ಜಿ. ವೆಂಕಟೇಶ ಅವರು ಈ ಕೃತಿಯ ಕುರಿತು ‘ ಶ್ರೀಪಾದ ಪೂಜಾರರು ಗಂಗಾನದಿಯನ್ನು ರೂಪಕ ಮಾಡಿಕೊಂಡು ಚಿತ್ರಸಂಗೀತಗಂಗೆಯ ಪಾವಿತ್ರ್ಯವನ್ನು ಪುಟಪುಟಗಳಲ್ಲೂ ಎತ್ತಿ ಹೇಳಿದ್ದಾರೆ . ಅದಕ್ಕೆ ಕಾರಣರಾದ ಮಹನೀಯರ ಶ್ರಮವನ್ನೂ ಆಸಕ್ತಿಯನ್ನೂ ಶ್ರದ್ದಾಪೂರ್ಣವಾದ ಕ್ರಿಯಾಫಲವನ್ನೂ ಸಹೃದಯ ಓದುಗರ ಮುಂದೆ ಇರಿಸಿದ್ದಾರೆ . ಈ ಕೃತಿಯು ನಾಂದಿಯಿಂದ ಪ್ರಾರಂಭಗೊಂಡು ಭರತವಾಕ್ಯದಲ್ಲಿ ಮುಗಿಯುತ್ತದೆ . ಚಿತ್ರಸಂಗೀತದ ಸುವರ್ಣಕಾಲದ ಸಮಸ್ತ ಸಂಗತಿಗಳು ಇಲ್ಲಿ ಮೈವೆತ್ತಿ ರೂಪು ಪಡೆದಿವೆ . ಶ್ರೀಪಾದ ಪೂಜಾರರು ಭಾರತೀಯ ಚಿತ್ರಸಂಗೀತದ ಮೌಲ್ಯಪರಂಪರೆಯ ಸಮಸ್ತ ಮುಖಗಳನ್ನು ಈ ಕೃತಿಯ ಮೂಲಕ ಅನಾವರಣಗೊಳಿಸಿದ್ದಾರೆ . ಈ ಕೃತಿಯು ಬಂಧ , ಭಾವ , ಭಾಷೆ , ವಿಂಗಡಣೆ , ಶೈಲಿ ಕಾದಂಬರಿಯಂತೆ ಓದಿಸಿಕೊಂಡು ಹೋಗುತ್ತದೆ . ನನಗೆ ತಿಳಿದಿರುವಂತೆ ಹಿಂದಿ ಚಿತ್ರಸಂಗೀತದ ಅಭಿಜಾತಯುಗವನ್ನು ಶ್ರೀಪಾದ ಪೂಜಾರರು ನಿರುಮ್ಮಳವಾಗಿ ಈ ಕೃತಿಯ ಮೂಲಕ ನಮಗೆ ಕಟ್ಟಿಕೊಟ್ಟಿದ್ದಾರೆ . ಇಂಥದೊಂದು ಕೃತಿ ಯಾವ ಭಾರತೀಯ ಭಾಷೆಯಲ್ಲೂ ಪ್ರಕಟವಾಗಿಲ್ಲದಿರುವುದನ್ನು ನಾವು ಗಮನಿಸಬೇಕು . ಕನ್ನಡದ ಭಾಗ್ಯವೆಂಬಂತೆ , ಈ ಕೃತಿಯು ಶ್ರೀಪಾದ ಪೂಜಾರರ ಅನನ್ಯಸಾಧನೆಯ ಮೂಲಕ ಕನ್ನಡದಲ್ಲಿ ಅವತರಣಗೊಂಡಿದೆ . ಈ ಕೃತಿಯು ಹಿಂದಿಭಾಷೆಗೆ ಅನುವಾದಗೊಂಡು , ಹಿಂದಿ ಚಿತ್ರರಸಿಕರ ಕಣ್ಣಿಗೆ ಬೀಳಲೆಂದು ನಾನು ಮನಸಾರೆ ಆಶಿಸುತ್ತೇನೆ . ಶ್ರೀಪಾದ ಪೂಜಾರರ ಅಸೀಮ ಸಾಹಸಕ್ಕೆ ನಾನು ` ನಮೋನಮಃ ` ಎನ್ನದೆ ವಿಧಿಯಿಲ್ಲ’ ಎಂದು ಪ್ರಶಂಸಿಸಿದ್ದಾರೆ.

About the Author

ಶ್ರೀಪಾದ ಪೂಜಾರ್

ಶ್ರೀಪಾದ ಪೂಜಾರ ಅವರು ಲೇಖಕರು ಕೃತಿಗಳು: ನಾನಿದ್ದೂ ನನ್ನದೇನಿಲ್ಲ(ಬೆಳೆಗೆರೆ ಬೆಳಕು ಕೃಷ್ಣಶಾಸ್ತ್ರೀಗಳನ್ನು ಕುರಿತು), ಬೆಳಗೆರೆ ಕೃಷ್ಣಶಾಸ್ತ್ರೀ : ಸಮಗ್ರ ಸಾಹಿತ್ಯ ನೂರರ ನೆನಪು (ಸಂಪಾದನೆ) ...

READ MORE

Related Books