ಶ್ರೀ ಆದಿನಾಥ ವೈಭವ

Author : ವೀಣಾ ರಘುಚಂದ್ರ ಶೆಟ್ಟಿ

Pages 392

₹ 300.00
Year of Publication: 2021
Published by: ಪಂಚಮಿ ಮೀಡಿಯಾ ಪಬ್ಲಿಕೇಷನ್ಸ್
Address: #99, ಶ್ರೀರಕ್ಷಾ, ಕೆಇಬಿ ಎದುರು, ಇಟ್ಟಮಡು ಮುಖ್ಯ ರಸ್ತೆ, ಬನಶಂಕರಿ ಮೂರನೇ ಹಂತ, ಬೆಂಗಳೂರು-560 085
Phone: 9739561334

Synopsys

ಲೇಖಕಿ ವೀಣಾ ರಘುಚಂದ್ರ ಶೆಟ್ಟಿ ಅವರ ಜಿನ ಸಹಸ್ರನಾಮ ಸ್ತುತಿ ‘ಶ್ರೀ ಆದಿನಾಥ ವೈಭವ’. ಈ ಕೃತಿಗೆ ಕೇಸರಿ ರತ್ನರಾಜಯ್ಯ ಅವರು ಮುನ್ನುಡಿಬರೆದಿದ್ದಾರೆ. ಅವರು ಹೇಳುವಂತೆ, ಕವಯಿತ್ರಿ ಶ್ರೀಮತಿ ವೀಣಾ ರಘುಚಂದ್ರ ಶೆಟ್ಟಿಯವರು ನಿರಂತರ ಶ್ರದ್ಧಾ ಭಕ್ತಿಯಿಂದ ತಮ್ಮದೇ ಆದ ಉತ್ತಮ ಉನ್ನತ ಮಟ್ಟದ ಕಾವ್ಯಶೈಲಿಯೊಂದಿಗೆ ಅರ್ಥಸಹಿತ ಪದಗಳ ಜೋಡಣೆಯೊಂದಿಗೆ ಆದಿನಾಥರ ವೈಭವವನ್ನು ಸಾಂಗತ್ಯದಲ್ಲಿ ಸುಂದರವಾಗಿ, ಸರಳವಾಗಿ, ಸುಲಭವಾಗಿ ಶ್ರಾವಕ-ಶ್ರಾವಕಿ ಬಂಧುಗಳಿಗೆ ಅರ್ಥವಾಗುವಂತೆ ನಿರೂಪಿಸಿದ್ದಾರೆ. ನಿಜಕ್ಕೂ ಶ್ಲಾಘನೀಯ, ಮೇರು ಸಾಹಿತ್ಯ, ಸರಳ ರಚನೆ. ಇದೊಂದು ದೀರ್ಘ ಸಂಯಮ ಸಹನೆಯ ಸಾಧನೆಯೇ ಹೌದು’ ಎಂಬುದಾಗಿ ಹೇಳಿದ್ದಾರೆ.

ಎಸ್. ಪಿ. ಅಜಿತ್ ಪ್ರಸಾದ್, ಮೂಡುಬಿದಿರೆ ಅವರು ಕೃತಿಗೆ ಬೆನ್ನುಡಿಯನ್ನು ಬರೆದಿದ್ದು, “ಶ್ರೀ ಆದಿನಾಥ ವೈಭವ”ವು (ಜಿನಸಹಸ್ರನಾಮ) ಭಗವಾನ್ ಆದಿನಾಥರ ಸಾವಿರದ ಎಂಟು ಹೆಸರುಗಳನ್ನು ಸ್ತುತಿ ರೂಪದಲ್ಲಿ ಆರಾಧಿಸುವ ಅಪರೂಪದ ಕೃತಿ. ಶ್ರೀಮತಿ ವೀಣಾ ರಘುಚಂದ್ರ ಶೆಟ್ಟಿ ಅವರಿಗೆ ಕವಿತ್ವ ಸಹಜವಾಗಿಯೇ ಒದಗಿ ಬಂದಿದೆ. ನಿರಂತರವಾದ ಸ್ವಾಧ್ಯಾಯದ ಮೂಲಕವಾಗಿ ತಮ್ಮಲ್ಲಿರುವ ಕವಿತಾ ಪ್ರತಿಭೆಗೆ ಸಾಣೆ ಹಿಡಿಯುತ್ತಾ ಬಂದಿದ್ದಾರೆ. ಅವರು ರಚಿಸಿರುವ ನೂರಾರು ಜಿನಭಕ್ತಿಗೀತೆಗಳು ನಾಡಿನಾದ್ಯಂತ ಇಂದು ಸಹೃದಯರ ನಾಲಿಗೆ ಮೇಲೆ ನಲಿದಾಡುತ್ತಿದೆ. ಸಹಜ ಕವಿತ್ವಾ ಶಕ್ತಿ ಮತ್ತು ವ್ಯುತ್ಪತ್ತಿ ಜ್ಞಾನದ ಪರಿಣಾಮವಾಗಿ ಇಂದು ಲೋಕಾರ್ಪಣೆಗೊಳ್ಳುತ್ತಿರುವ “ಶ್ರೀ ಆದಿನಾಥ ವೈಭವ” (ಜಿನಸಹಸ್ರನಾಮ) ದ ಪ್ರತೀ ರಚನೆಗಳೂ ಅತ್ಯಂತ ಸರಳವಾಗಿ ಒಂದೇ ಓದಿಗೆ ಮನಸ್ಸನ್ನು ಸೂರೆಗೊಳ್ಳುತ್ತವೆ. ಆದುದರಿಂದಲೇ ಇಲ್ಲಿಯ ರಚನೆಗಳು ಕಾವ್ಯ ರಸಿಕರ ಮನಸ್ಸಿಗೆ ಮುದವನ್ನು ಕೊಡುವುದರಲ್ಲಿ ನನಗೆ ಯಾವುದೇ ಸಂಶಯವೂ ಇಲ್ಲ’ ಎಂದಿದ್ದಾರೆ.

About the Author

ವೀಣಾ ರಘುಚಂದ್ರ ಶೆಟ್ಟಿ

ಖ್ಯಾತ ಜಿನಭಜನಾ ಸಾಹಿತಿಯಾಗಿರುವ ವೀಣಾ ಬಿ.ಆರ್. ಶೆಟ್ಟಿ ಮೂಡುಬಿದಿರೆಯ ನೆಲ್ಲಿಕಾರು ಗ್ರಾಮದವರು. ನೆಲ್ಲಿಕಾರಿನ ದೊಡ್ಡಮನೆ ಚಂದ್ರರಾಜ ಬಲ್ಲಾಳ್ ಹಾಗೂ ಪ್ರಭಾವತಿ ದಂಪತಿಗಳ ಪುತ್ರಿ. ಪ್ರೌಢ ಶಾಲಾ ವಿದ್ಯಾಭ್ಯಾಸವನ್ನು ಪೂರೈಸಿರುವ ಇವರು ನಂತರ ಮೂಡುಬಿದಿರೆಯ ಪ್ರಸಿದ್ಧ ಬೆಟ್ಕೇರಿ ಮನೆತನದ ರಘುಚಂದ್ರ ಶೆಟ್ಟಿಯವರನ್ನು ವಿವಾಹವಾದರು. ಗೃಹಸ್ಥ ಜೀವನದಲ್ಲಿ ಶ್ರಾವಕ ಕರ್ತವ್ಯದಲ್ಲಿ ನಿರತರಾದವರು. ದೇವ ಪೂಜೆ ಗುರುಪಾಸ್ತಿ ಹಾಗೂ ಶಾಸ್ತ್ರಗಳ ಅಧ್ಯಯನ, ಜಿನ ಭಜನಾ ಸಾಹಿತ್ಯದ ರಚನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು. ಹಾಗೆಯೇ ಮೂಡುಬಿದಿರೆ ಪೂಜ್ಯ ಭಟ್ಟಾರಕರ ಆದೇಶದಂತೆ ತ್ಯಾಗಿವೃಂದದ ಸೇವೆಯಲ್ಲಿ ಮುಂಚೂಣಿಯಲ್ಲಿ ನಿಂತು ಸಾರ್ಥಕ್ಯವನ್ನು ಹೊಂದುತ್ತ, ಜೊತೆಗೆ ಶ್ರೀಮಠದ ಸೇವೆಯಲ್ಲೂ ...

READ MORE

Related Books