ಶ್ರೀ ಗುರುದೇವ ನಾರಾಯಣ ಗುರು

Author : ಸಮತಾ ಬಿ. ದೇಶಮಾನೆ

Pages 166

₹ 175.00




Year of Publication: 2018
Published by: ಅನ್ನಪೂರ್ಣ ಪಬ್ಲಿಷಿಂಗ್ ಹೌಸ್
Address: #176, 12ನೇ ಅಡ್ಡರಸ್ತೆ, ಮಾಗಡಿ ಮುಖ್ಯರಸ್ತೆ, ಅಗ್ರಹಾರ ದಾಸರಹಳ್ಳಿ, ಬೆಂಗಳೂರು-560 079,

Synopsys

ಲೇಖಕಿ ಪ್ರೊ. ಸಮತಾ ಬಿ. ದೇಶಮಾನೆ ಅವರು ರಚಿಸಿದ ಕೃತಿ-ಶ್ರೀ ಗುರುದೇವ ನಾರಾಯಣ ಗುರು. ಒಂದೇ ಜಾತಿ, ಒಂದೇ ಧರ್ಮ, ಒಂದೇ ದೇವರು ಎಂಬ ಚಿಂತನೆಯೊಂದಿಗೆ ಜನಮನದಲ್ಲಿ ಗುರುವಿನ ಸ್ಥಾನ ಪಡೆದ ಶ್ರೀ ಗುರುದೇವ ನಾರಾಯಣ ಗುರುವಿನ ಜೀವನ ಚಿತ್ರಣ ನೀಡುವ ಕೃತಿ ಇದು. ಸಾಮಾಜಿಕ ಹಾಗೂ ಅಧ್ಯಾತ್ಮಿಕ ಚಳವಳಿಯ ಸಮಾಜ ಶಾಸ್ತ್ರೀಯ ಅಧ್ಯಯನದ ಈ ಕೃತಿಯು, ನಾರಾಯಣ ಗುರುಗಳ ಚಿಂತನೆಗಳನ್ನು ಆಳವಾಗಿ ಪ್ರತಿಪಾದಿಸುತ್ತವೆ. ಭಾರತದಂತಹ ಜಾತಿ ಶ್ರೇಣಿಕೃತ ಸಮಾಜದಲ್ಲಿ ಆರೋಗ್ಯಕರ ಮನಸ್ಸುಗಳನ್ನು ಬೆಳೆಸುವಲ್ಲಿ ಇವರ ಚಿಂತನೆಗಳು ಪ್ರಮುಖ ಪಾತ್ರವಹಿಸುತ್ತವೆ ಎಂಬುದರ ಚರ್ಚೆಯ ವಿಸ್ತೃತ ರೂಪವೇ ಈ ಕೃತಿ.

About the Author

ಸಮತಾ ಬಿ. ದೇಶಮಾನೆ

ಸಮತಾ ಬಿ. ದೇಶಮಾನೆ, ಎಂ.ಎ.(ಸಮಾಜಶಾಸ್ತ್ರ), ಎಂ.ಎ.(ಇತಿಹಾಸ), ಪಿಎಚ್.ಡಿ. ಪತ್ರಿಕೋದ್ಯಮ ಹಾಗೂ ಜೈನಶಾಸ್ತ್ರದಲ್ಲಿ ಡಿಪ್ಲೊಮಾ ಪದವಿಗಳನ್ನು ಪಡೆದವರು. ಇವರು ಜನಿಸಿದ್ದು 1963 ಸೆಪ್ಟೆಂಬರ್‌ 23ರಂದು ಗಾಜಿಪುರ, ಗುಲಬರ್ಗಾ ಜಿಲ್ಲೆಯಲ್ಲಿ. ತಂದೆ  ಬಾಬುರಾವ್ ಎಸ್. ದೇಶಮಾನೆ, ತಾಯಿ- ರತ್ನಾ ದೇಶಮಾನೆ. ಕೃತಿ : ಮಹಿಳೆ ಮತ್ತು ಸಮಾಜಶಾಸ್ತ್ರ, ಸಮಾಜಶಾಸ್ತ್ರ ಮತ್ತು ಮಾಧ್ಯಮ, ಸಮಾಜ ಪರಿವರ್ತನೆಯ ಚಿಂತಕರು, ಸಮಾಜಶಾಸ್ತ್ರ ಮತ್ತು ಸಂಘಟನೆಗಳು, ಸಮಾಜಶಾಸ್ತ್ರ ಮತ್ತು ಮಹಿಳಾ ಚಳವಳಿಗಳು, ಸಮಾಜ ಮತ್ತು ಸಾಮಾಜಿಕ ಚಳವಳಿಗಳು ಡಾ. ಕೆ.ಎನ್. ವಿಜಯಲಕ್ಷ್ಮಿ (ಪರಿಚಯಾತ್ಮಕ ಕೃತಿ), ಅಂಬೇಡ್ಕರ್‌ ದೃಷ್ಟಿಯಲ್ಲಿ ಕಾರ್ಮಿಕರು ಮತ್ತು ಮಹಿಳೆ, ದಲಿತ ಮಹಿಳೆಯರ ಬದಲಾಗುತ್ತಿರುವ ಸ್ಥಾನಮಾನಗಳು (ಪಿಹೆಚ್.ಡಿ.) ...

READ MORE

Related Books