ಶ್ರೀಮನ್ಮಧ್ವಾಚಾರ್ಯರು

Author : ಶ್ರೀರಂಗ (ಆದ್ಯ ರಂಗಾಚಾರ್ಯ)

Pages 96

₹ 0.00




Year of Publication: 1955
Published by: ಶ್ರೀ ಹುಚ್ಚಾಚಾರ್ಯ ಅಳಗಗಟ್ಟಿಪುರಾಣಿಕ
Address: ಕಿತ್ತೂರು

Synopsys

ಶ್ರೀಮಧ್ವವಿಜಯವೇ ಈ ಕೃತಿಗೆ ಮೂಲ ಎಂದು ಕೃತಿಕಾ ಶ್ರೀರಂಗರು ಹೇಳಿದ್ದಾರೆ. ಕೃತಿಗೆ ಮುನ್ನುಡಿ ಬರೆದ ಆಲೂರು ವೆಂಕಟರಾಯರು ‘ಶ್ರೀ ಶಂಕರಾಚಾರ್ಯ, ರಾಮಾನುಜಾಚಾರ್ಯರು ಆಗಿ ಹೋದ ನಂತರ ಶ್ರೀ ಮಧ್ವಾಚಾರ್ಯರು ಬಂದಿರುವುದರಿಂದ ತಮ್ಮ ವಾದವನ್ನು ಹೆಚ್ಚಿ ಚಿಕಿತ್ಸಕವಾಗಿ ಮಂಡಿಸಿದ್ದಾರೆ. ಈ ಕಾರಣಕ್ಕಾಗಿ ಈ ಕೃತಿಯು ಅಧ್ಯಯನ ಯೋಗ್ಯವಾಗಿದೆ’ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಮಧ್ವಾಚಾರ್ಯರ ಬಾಲ್ಯ, ವಿದ್ಯಾಭ್ಯಾಸ, ತತ್ವಮಂಡನೆ ರೀತಿ, ಚಿಂತನಾ ಪ್ರಖರತೆ ಎಲ್ಲವನ್ನು ಈ ಕೃತಿಯಲ್ಲಿ ವಿವರಿಸಲಾಗಿದೆ.

About the Author

ಶ್ರೀರಂಗ (ಆದ್ಯ ರಂಗಾಚಾರ್ಯ)
(26 September 1904 - 17 October 1984)

ಶ್ರೀರಂಗ’ ಎಂದೇ ಖ್ಯಾತರಾಗಿರುವ ಆದ್ಯರಂಗಾಚಾರ್ಯರು ಕನ್ನಡ ನಾಟಕ ಪ್ರಪಂಚಕ್ಕೆ ವಿಶಿಷ್ಟ ಕೊಡುಗೆ ನೀಡಿದ ನಾಟಕಕಾರರು. ಅವರ ತಂದೆ ವಾಸುದೇವಾಚಾರ್ಯ ಜಾಗೀರದಾರ್ ಮತ್ತು ತಾಯಿ ರಮಾಬಾಯಿ. ವಿಜಾಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಅಗರ ಖೇಡದಲ್ಲಿ 1904ರ ಸೆಪ್ಟೆಂಬರ್ 26ರಂದು ಜನಿಸಿದರು. ವಿಜಾಪುರದಲ್ಲಿ ಶಾಲಾ ಶಿಕ್ಷಣ ಪೂರೈಸಿ, 1921ರಲ್ಲಿ ಪುಣೆಯ ಡೆಕ್ಕನ್ ಕಾಲೇಜಿಗೆ ಸೇರಿ ಬಿ. ಎ. (1925) ಪರೀಕ್ಷೆಯಲ್ಲಿ ಉತ್ತೀರ್ಣರಾದರು. 1925ರಲ್ಲಿ ಇಂಗ್ಲೆಂಡಿಗೆ ತೆರಳಿದ ಶ್ರೀರಂಗರು ಲಂಡನ್ ವಿಶ್ವವಿದ್ಯಾಲಯದಲ್ಲಿ ಭಾಷಾಶಾಸ್ತ್ರದಲ್ಲಿ ಎಂ. ಎ. ಪದವಿ ಪಡೆದು 1928ರಲ್ಲಿ ಭಾರತಕ್ಕೆ ಮರಳಿದರು. ಕೆಲವು ಕಾಲ ಹಾಫ್‍ಕಿನ್ ಸಂಸ್ಥೆಯಲ್ಲಿ ನೌಕರಿಯಲ್ಲಿದ್ದು 1930ರಲ್ಲಿ ...

READ MORE

Related Books