ಶ್ರೀಪಾದ ದಾಮೋದರ ಸಾತವಲೇಕರ್

Author : ಎಸ್‌.ಆರ್‌. ರಾಮಸ್ವಾಮಿ

Pages 102

₹ 15.00




Year of Publication: 1980
Published by: ರಾಷ್ಟ್ರೋತ್ಥಾನ ಸಾಹಿತ್ಯ
Address: ಕೇಶವ ಶಿಲ್ಪ, ಕೆಂಪೇಗೌಡ ನಗರ, ಬೆಂಗಳೂರು-560019

Synopsys

ಶ್ರೀಪಾದ ದಾಮೋದರ ಸಾತವಲೇಕರ್ ಜೀವನಚರಿತ್ರೆ ಪುಸ್ತಕವನ್ನು ಲೇಖಕ ಎಸ್.ಆರ್.‌ ರಾಮಸ್ವಾಮಿ ಅವರು ರಚಿಸಿದ್ದಾರೆ. ಈ ಕೃತಿಯಲ್ಲಿ ವೇದ ಸಾಹಿತ್ಯದ ಮತ್ತು ವೈದಿಕ ಸಂಸ್ಸೃತಿಯ ಪ್ರಚಾರಕ್ಕಾಗಿ ತಮ್ಮ ಜೀವನವನ್ನು ಮುಡುಪಾಗಿರಿಸಿ ದುಡಿದವರು ಪಂಡಿತ ಶ್ರೀಪಾದ ದಾಮೋದರ ಸಾತವಲೇಕರ್. ಒಂದು ಕಡೆ ಸನಾತನ ಧರ್ಮನಿಷ್ಠೆ, ಇನ್ನೊಂದು ಕಡೆ ಪ್ರಖರ ರಾಷ್ಟ್ರಭಕ್ತಿ – ಎರಡನ್ನೂ ಮೈಗೂಡಿಸಿಕೊಂಡವರು ಅವರು. ವೇದವ್ಯಾಖ್ಯಾನ ಮೊದಲೆದ ವಿದ್ವತ್ಕಾರ್ಯ, ಸ್ವಾತಂತ್ರ್ಯದ ಹೋರಾಟದ ರಾಜಕೀಯ ಚಟುವಟಿಕೆ ಎರಡೂ ದಿಕ್ಕುಗಳಲ್ಲಿ ಅವರ ಸಾಧನೆ ಸ್ಮರಣೀಯ ಎಂದು ಪುಸ್ತಕದ ಕುರಿತಾಗಿ ಇಲ್ಲಿ ವಿವರಿಸಲಾಗಿದೆ.

About the Author

ಎಸ್‌.ಆರ್‌. ರಾಮಸ್ವಾಮಿ

ನಾಡೋಜ ಎಸ್‌.ಆರ್‌.ರಾಮಸ್ವಾಮಿ ಅವರು ಪತ್ರಕರ್ತರಾಗಿ, ಲೇಖಕರಾಗಿ, ಚಿಂತಕರಾಗಿ, ವಿಮರ್ಶಕರಾಗಿ, ಸಾಮಾಜಿಕ ಕಾರ್ಯಕರ್ತರಾಗಿ ನಾಡಿನಲ್ಲಿ ಸುಪರಿಚಿತರು. ಮೂಲತಃ ಬೆಂಗಳೂರಿನವರೇ ಆದ ರಾಮಸ್ವಾಮಿ ಅವರು ಕನ್ನಡ, ತೆಲುಗು, ಸಂಸ್ಕೃತ, ಹಿಂದಿ, ಇಂಗ್ಲಿಷ್, ಜರ್ಮನ್, ಫ್ರೆಂಚ್ ಭಾಷೆಗಳಲ್ಲಿ ಪ್ರಾವೀಣ್ಯತೆ ಹೊಂದಿದವರು. 1950ರ ದಶಕದಲ್ಲಿ ಪತ್ರಿಕೋದ್ಯಮ ಪ್ರವೇಶಿಸಿದ ಇವರು, 1972 ರಿಂದ 79ರ ವರೆಗೆ ಸುಧಾ ವಾರಪತ್ರಿಕೆಯ ಮುಖ್ಯ ಉಪಸಂಪಾದಕರಾಗಿ ಸೇವೆ ಸಲ್ಲಿಸಿದರು. 1980ರಲ್ಲಿ ರಾಷ್ಟೋತ್ಥಾನ ಸಾಹಿತ್ಯ ಮತ್ತು ಉತ್ಥಾನ ಮಾಸಪತ್ರಿಕೆಯ ಗೌರವ ಪ್ರಧಾನ ಸಂಪಾದಕರಾದ ಇವರು ಇಂದಿಗೂ ಆ ಹುದ್ದೆಯಲ್ಲಿ ಸೇವಾನಿರತರಾಗಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಸುಮಾರು 55 ಕ್ಕೂ ...

READ MORE

Related Books