ತತ್ವಜ್ಞಾನಿ, ಕವಿ, ಸ್ವತಂತ್ರ್ಯ ಹೋರಾಟಗಾರ, ಯೋಗಿ ಶ್ರೀಅರವಿಂದರು ರಚಿಸಿದ ಯೌಗಿಕ ಮಹಾಕಾವ್ಯ ಸಾವಿತ್ರಿಯನ್ನು ಚೆನ್ನಬಸಪ್ಪನವರು ಕನ್ನಡಕ್ಕೆ ಸರಳ ಭಾಷೆಯಲ್ಲಿ ಅನುವಾದಿಸಿದ್ದಾರೆ. ಅರವಿಂದರ ಯೌಗಿಕಾನುಭವಗಳು ಇಲ್ಲಿ ಕಾವ್ಯರೂಪದಲ್ಲಿ ಮೈತಳೆದಿವೆ. ಮಹಾಭಾರತದ ಕಥಾಸೂತ್ರವನ್ನೇ ಇಟ್ಟುಕೊಂಡು ಯೋಗದರ್ಶನವನ್ನು ಕಾವ್ಯಮಯವಾಗಿ ಚಿತ್ರಿಸಿದ್ದಾರೆ. ಪ್ರಾರ್ಥನೆ.. ಮಹಾಕಾರ್ಯ, ಮಹಾಭಾವ ಇವು ಮನುಷ್ಯನ ಅತೀತಶಕ್ತಿಯೊಡನೆ ಸೇರಿಸುವ ದಿವ್ಯ ಶಕ್ತಿಗಳೆಂಬುದನ್ನು ಸಾವಿತ್ರಿ ಬಾಲ್ಯದಲ್ಲಿಯೇ ಅರಿತಿದ್ದಳು. ಅವಳು ಮೃತ್ಯುವನ್ನು ಪ್ರಜ್ಞಾಪೂರ್ವಕವಾಗಿ ಗೆದ್ದು ತಪಶ್ಯಕ್ತಿಯ ಹಿರಿಮೆಯನ್ನು ತೋರಿದ ಮಹಾಯೋಗಿನಿ. ಅವಳ ಯೋಗಸಾಧನೆಯನ್ನು ಈ ಕೃತಿಯಲ್ಲಿ ಕಾಣಬಹುದಾಗಿದೆ.
©2023 Book Brahma Private Limited.