ಶ್ರೀಹರಿಚರಿತೆ

Author : ಪು.ತಿ.ನ. (ಪು.ತಿ. ನರಸಿಂಹಾಚಾರ್ )

Pages 208

₹ 100.00




Year of Publication: 2014
Published by: ಪು.ತಿ.ನ. ಟ್ರಸ್ಟ್‌
Address: ನಂ.30, ಸಂಕಲ್ಪ, ಪುಷ್ಪಗಿರಿನಗರ, ಬನಶಂಕರಿ ಮೂರನೇ ಹಂತ, ಬೆಂಗಳೂರು.

Synopsys

ಪು.ತಿ.ನ. ಅವರು ರಚಿಸಿರುವ ಕೃತಿ ಶ್ರೀಹರಿಚರಿತೆ. ಲೇಖಕರು ಈ ಕುರಿತು ಬರೆಯುತ್ತಾ, ಶ್ರೀಮದ್‌ಭಾಗವತದ  ಶ್ಲೋಕವೊಂದರಿಂದ ಶ್ರೀಹರಿಚರಿತೆ ಎಂಬ ಕಾವ್ಯವನ್ನು ರಚಿಸಲು ಪ್ರೇರಣೆ ಆಯಿತು. ಶ್ರೀ ಕೃಷ್ಣನು ನನ್ನ ಆತ್ಮಕ್ಕೆ ತುಂಬ ಹತ್ತಿರದ ದೇವರು. ನಿರಂತರವಾಗಿ ಆತನನ್ನು ನೆನೆಯುವುದು ನನಗೆ ಸ್ವಭಾವವಾಗಿ ಬಿಟ್ಟಿದೆ. ಗೋಕುಲಾಷ್ಟಮಿ ಎಂಬ ಪ್ರಬಂಧದಲ್ಲಿ, ಮಳೆಯು ನಾಡ ತೊಯ್ಯುತಿರೆ ಎಂಬ ಪದ್ಯದಲ್ಲಿ ಗೋಕುಲ ನಿರ್ಗಮನ ಎಂಬ ಗೀತರೂಪದಲ್ಲಿ ದೀಪಲಕ್ಷ್ಮಿ ಎಂಬ ಹಾಡುಗಬ್ಬದಲ್ಲಿ, ಗೀತೆಯ ಕನ್ನಡ ಪದ್ಯಾನುವಾದದಲ್ಲಿ, ಇನ್ನು ಇತರೆಡೆಗಳಲ್ಲಿ ಕೃಷ್ಣನನ್ನು ನೆನೆದಿದ್ದೇನೆ ಎಂದಿದ್ದಾರೆ.

ಶ್ರೀಹರಿಚರಿತೆಯು ಪ್ರಣಾಮಂ, ಅಭಯಪ್ರದಾನಂ, ಜನನೀಜನಕ ಸಂಸ್ಕಾರಂ, ಸದವತಾರಂ, ಗೋಕುಲ ಗಮನಂ, ವಜ್ರಗಮನಂ, ಶೈಶವಲೀಲಾಲೋಕನಂ, ವಿಪಿನಾವಗಾಹನಂ, ಭಾಂಡೀರ ದರ್ಶನ, ವರ್ಷಾವಗಾಹಂ, ವೇಣುಗಾನಾವತರಣಂ, ವೇಣುಗಾನ ತರಂಗಿಣೀ ಪ್ಲಾವನಂ, ರಾಧಾ ದರ್ಶನಂ, ರಾಧಾಕೃಷ್ಣ ಸಂಗತಿ, ಕಾಳಿಂಗ ಹ್ರದಪ್ರವೇಶಂ, ಕಾಳಿಂಗ ಮರ್ದನಂ, ಇಂದ್ರಪರ್ವ ಸಂರಂಭಂ, ಗೋವರ್ಧನ ಪರ್ವಂ, ಗೋವರ್ಧನೋದ್ಧರಣಂ, ಗೋವಿಂದ ಪಟ್ಟಾಭಿಷೇಕಂ, ನವನಿರ್ಮಾಣಂ, ಜನ್ನಿಗವೆಂಡಿರೌತಣಂ, ಪ್ರಲಂಬ ವಧಂ, ರಾಸಾರಂಭಂ, ಗೋಪಿಕಾ ವಿಲಾಪಂ, ರಾಸಕ್ರೀಡೆ, ವೇಣುತ್ಯಾಗಂ, ರಾಧಾನಿರ್ವೇದಂ, ಗೋಕುಲ ಪ್ರಸ್ಥಾನಂ, ಯಶೋದಾವತ್ಸನಿಗೆ ಜಯಮಂಗಳಂ, ನಿವೇದನಂ ಹೀಗೆ ವಿವಿಧ ಪಠ್ಯಗಳಿವೆ.

About the Author

ಪು.ತಿ.ನ. (ಪು.ತಿ. ನರಸಿಂಹಾಚಾರ್ )
(17 March 1905 - 13 October 1998)

ಪುತಿನ ಎಂದು ಚಿರಪರಿಚಿತರಾಗಿದ್ದ ಪುರೋಹಿತ ತಿರುನಾರಾಯಣ ನರಸಿಂಹಾಚಾರ್ ಅವರು ಕನ್ನಡ ನವೋದಯ ಕವಿಗಳಲ್ಲಿ ಪ್ರಮುಖರು. ಮೇಲುಕೋಟೆಯಲ್ಲಿ 1905ರ ಮಾರ್ಚ್ 17ರಂದು ಜನಿಸಿದರು. ತಂದೆ ತಿರುನಾರಾಯಣ ಅಯ್ಯಂಗಾರ್, ತಾಯಿ ಶಾಂತಮ್ಮ.  ಬಾಲ್ಯದ ವಿದ್ಯಾಭ್ಯಾಸವನ್ನು ಮೇಲುಕೋಟೆ ಮತ್ತು ಮೈಸೂರಿನಲ್ಲಿ ಮುಗಿಸಿದ ನಂತರ ಬಿ.ಎ. ಪದವಿಯನ್ನು ಗಳಿಸಿದ ಮೇಲೆ ಗೋರಕ್ಷಕ ಸಮಿತಿಯಲ್ಲಿ ಗುಮಾಸ್ತರಾಗಿ ಕಾರ್ಯನಿರ್ವಹಿಸಿದರು. ಅನಂತರ ಸೈನ್ಯದ ಮುಖ್ಯಾಧಿಕಾರಿಗಳ ಕಚೇರಿಯಲ್ಲಿ ಕೆಲಸಕ್ಕೆ ಸೇರಿದರು. ಅದೇ ಕಚೇರಿಯಲ್ಲಿ 1938ರಲ್ಲಿ ವ್ಯವಸ್ಥಾಪಕರಾಗಿಯೂ 1945ರಲ್ಲಿ ಅಧೀಕ್ಷಕರಾಗಿಯೂ ಕೆಲಸ ಮಾಡಿದ್ದ ಅವರು ಅನಂತರ 1952ರಲ್ಲಿ ಶಾಸನ ಸಭಾ ಕಚೇರಿಯ ಸಂಪಾದಕರೂ ಆಗಿದ್ದರು. ಕನ್ನಡ ವಿಶ್ವಕೋಶದ ಕಚೇರಿಯಲ್ಲಿ ಭಾಷಾಂತರಕಾರ ...

READ MORE

Related Books