ಶ್ರೀ ಮಹಾಭಾರತ ಸಂಪುಟ-೧

Author : ಜಿ.ಎನ್. ರಂಗನಾಥ ರಾವ್

Pages 320

₹ 280.00




Year of Publication: 2019
Published by: ವಸಂತ ಪ್ರಕಾಶನ
Address: #360, 10ನೇ ಬಿ ಮುಖ್ಯರಸ್ತೆ, 3ನೇ ಬ್ಲಾಕ್‌, ಜಯನಗರ, ಬೆಂಗಳೂರು-560011
Phone: 08022443996

Synopsys

ಮಹಾಭಾರತದ ಕಾಲಾವಧಿ (ಕ್ರಿ.ಪೂ. 3140-ಕ್ರಿ.ಪೂ. 1402ರವರೆಗೆ) ಎನ್ನಲಾಗುತ್ತದೆ. ಅದು ದಾಯಾದಿ ಕಲಹವೋ ಅಥವಾ ಭೀಕರ ಯುದ್ಧವೋ ಏನೇ ಆಗಿರಲಿ, ಮಾನವನ ಅನವರತ ಅಸ್ತಿತ್ವದ ಅನಂತ ರೂಪಕವಾದ್ದರಿಂದ ಸೂರ್ಯ, ಚಂದ್ರ, ತಾರೆಗಳು ಇರುವವರೆಗೆ ಅದು ಪ್ರಸ್ತುತವಾದುದು ಎನ್ನುವ ಅಭಿಪ್ರಾಯವೂ ಇದೆ.

ಮಾನವರ ಅಸ್ತಿತ್ವದ ಮೇಲಾಟ, ಬೀಳಾಟಗಳನ್ನು ಮಾನವನ ಬದುಕಿನ ನಾಟ್ಯ ವಿಲಾಸಗಳನ್ನು ಎಲ್ಲ ಬಗೆಯಲ್ಲೂ ಬಿಂಬಿಸುವ ಕಾವ್ಯವಾಗಿರುವ ಮಹಾಭಾರತ ಕೃತಿಯನ್ನು ಪ್ರೊ.ಎಸ್.ಎಲ್‌. ಶೇಷಗಿರಿರಾವ್‌ ಅವರು ಇಂಗ್ಲಿಷ್‌ನಲ್ಲಿ ರಚಿಸಿದ್ದರು. ಜಿ.ಎನ್. ರಂಗನಾಥರಾವ್‌ ಅವರು ಅದನ್ನು ನಾಲ್ಕು ಸಂಪುಟಗಳಲ್ಲಿ ಕನ್ನಡೀಕರಿಸಿದ್ದಾರೆ.

ಮೊದಲ ಸಂಪುಟದಲ್ಲಿ ಆಧುನಿಕ ಜಗತ್ತಿನಲ್ಲಿ ಮಹಾಭಾರತ-ಆಧುನಿಕ ಮಾನವ ಮತ್ತು ಭವಿಷ್ಯದ  ಮಾನವ-ಕವಿ, ಕವಿಯ ಉದ್ದೇಶ-ಕೆಲವು ಸಮಸ್ಯೆಗಳು, ವ್ಯಕ್ತ ಉದ್ದೇಶ-ವಾಸ್ತವಿಕತೆ, ಧರ್ಮ-ಮಾನವ ಸ್ವಭಾವ ದರ್ಶನ.. ಹೀಗೆ ವಿವರಿಸುತ್ತಾ ಹೋಗಿದ್ದಾರೆ. ಮಹಾಭಾರತ ಕುರಿತು ಪ್ರಾಸ್ತಾವಿಕವಾಗಿ ಬರೆದ ಹೊತ್ತಗೆಯನ್ನು ಪ್ರಸ್ತಾವನೆಯಲ್ಲಿ ಕೊಡಲಾಗಿದೆ. ಆದಿ ಪರ್ವದಲ್ಲಿ ಯಯಾತಿಯ ಕಥೆ, ದುಷ್ಯಂತ ಮತ್ತು ಶಕುಂತಲೆಯರ ಕಥೆ, ಸುಂದ ಮತ್ತು ಉಪಸುಂದರ ಕಥೆ ಹಾಗೂ ಶ್ವೇತಕಿಯ ಕಥೆಯನ್ನು ಅನುವಾದಿಸಿದ್ದಾರೆ. ಸಭಾ ಪರ್ವದಲ್ಲಿಯೂ ನಾಲ್ಕು ಕಥೆಗಳಿವೆ. ಜರಾಸಂದನ ಕಥೆ, ಅಗ್ನಿ ಮತ್ತು ನೀಲರ ಕಥೆ, ಶಿಶುಪಾಲನ ಜನನದ ಕತೆ ಹಾಗೂ ಪ್ರಹ್ಲಾದನ ಕಥೆ.

About the Author

ಜಿ.ಎನ್. ರಂಗನಾಥ ರಾವ್
(12 January 1942 - 09 October 2023)

ನಾಡಿನ ಖ್ಯಾತ ಪತ್ರಕರ್ತ, ಹಿರಿಯ ಲೇಖಕ ಜಿ.ಎನ್.ರಂಗನಾಥ ರಾವ್ ಮೂಲತಃ ಬೆಂಗಳೂರಿನ ಹಾರೋಹಳ್ಳಿಯವರು. 1942 ರಲ್ಲಿ ಜನಿಸಿದ ಅವರು, ಕನ್ನಡ ಪತ್ರಿಕೋದ್ಯಮದಲ್ಲಿ ಹಲವು ಮೈಲಿಗಲ್ಲುಗಳನ್ನು ನಿರ್ಮಿಸಿದ್ದಾರೆ.   ಹೊಸಕೋಟೆ ಹಾಗೂ ಬೆಂಗಳೂರು ನಗರಗಳಲ್ಲಿ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿ, ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಉಪ ಸಂಪಾದಕರಾಗಿ ವೃತ್ತಿ ಜೀವನ ಆರಂಭಿಸಿದ್ದ ಅವರು ’ನವರಂಗ’ ಕಾವ್ಯನಾಮದಿಂದ ಕೂಡ ಬರವಣಿಗೆ ಮಾಡಿದ್ದರು. ಅಲ್ಲದೇ ಪ್ರಜಾವಾಣಿ ದಿನಪತ್ರಿಕೆಯ ಕಾರ್ಯ ನಿರ್ವಾಹಕ ಸಂಪಾದಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದರು. ಸಾಹಿತ್ಯ ಕ್ಷೇತ್ರದಲ್ಲಿಯೂ ಮಹತ್ವದ ಕಾರ್ಯ ನಿರ್ವಹಿಸಿದ್ದ ರಂಗನಾಥ ರಾವ್ ಕಾದಂಬರಿ, ಸಣ್ಣಕತೆ, ನಾಟಕ, ಪ್ರಬಂಧ ಸೇರಿದಂತೆ ಸಾಹಿತ್ಯದ ಹಲವು  ಪ್ರಕಾರಗಳಲ್ಲಿ ...

READ MORE

Awards & Recognitions

Related Books