ಶ್ರೀಮಾರುತೇಶ್ವರ ಮಹಿಮೆ

Author : ಜಗದೀಶ ಮಲ್ಲಪ್ಪ ಹದ್ಲಿ

Pages 92

₹ 130.00




Year of Publication: 2022
Published by: ಗೌರಿ ಶಂಕರ ಪ್ರಕಾಶನ
Address: ತಿಮ್ಮಾಪುರ ಹುನಗುಂದ ತಾಲೂಕು,ಬಾಗಲಕೋಟೆ ಜಿಲ್ಲೆ
Phone: 9611761979

Synopsys

ಸಾವಿರಾರು ವರ್ಷಗಳ ಭವ್ಯವಾದ ಇತಿಹಾಸ ಹೊಂದಿರುವ ಕರ್ನಾಟಕ ರಾಮಾಯಣ ಮಹಾಭಾರತಗಳ ಕಾಲದಿಂದಲೂ ಋಷಿಮುನಿಗಳ, ಸಂತ-ಮಹಾಂತರ, ಅಸಂಖ್ಯಾತ ಸಾಧಕರನ್ನು ತನ್ನೊಡಲಲ್ಲಿ ಘೋಷಿಸಿ ಬೆಳಸಿಕೊಂಡು ಬಂದ ಪುಣ್ಯಭೂಮಿ, ವಿಜಯನಗರದ ಅರಸರ ಕಾಲಾವಧಿಯಲ್ಲಿ ವೈಭವದಿಂದ ಮೆರೆದ ಹಂಪೆಯ ಅಂಜನಾದ್ರಿ ಬೆಟ್ಟದಲ್ಲಿ ಪ್ರಾಣ ದೇವರು, ಶಕ್ತಿವಂತ ಆಂಜನೇಯನು ಜನಿಸಿದನೆಂಬ ಪ್ರತೀತಿ ಇದೆ. ಈತನಿಗೆ ಹನುಮಂತ, ವಾನರ, ಪವನಸುತ, ಮಾರುತಿ, ಶ್ರೀರಾಮ ಭಕ್ತ ಹೀಗೆ ಹತ್ತು ಹಲವು ಹೆಸರುಗಳಿಂದ ಭಾರತದ ಉದ್ದಗಲಕ್ಕೂ ಕರೆಯುವರಲ್ಲದೇ, ಅಸಂಖ್ಯಾತ ಮಾರುತಿ ದೇವಾಲಯಗಳನ್ನು ನಿರ್ಮಿಸಿ ಆರಾಧಿಸುತ್ತಿರುವುದು ಹನುಮಂತನ ಘನವಾದ ಮಹಿಮೆಗೆ ಸಾಕ್ಷಿ. ಇಂತಹ ಮಹಾಮಹಿಮನು, ಭಕ್ತಿ-ಶಕ್ತಿಯ ಪ್ರತಿರೂಪನಾಗಿರುವ ಹನುಮಂತನ ದೇವಾಲಯಗಳಿಲ್ಲದ ಊರುಗಳೇ ಇಲ್ಲ. ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕು ಇದಕ್ಕೆ ಹೊರತಾಗಿಲ್ಲ. ಇಲ್ಲಿಗೆ ಸಮೀಪದ ತಿಮ್ಮಾಪೂರ ಗ್ರಾಮದ “ಮಾರುತೇಶ್ವರ ದೇವಾಲಯ” ಮತ್ತು “ಬಸವೇಶ್ವರ ದೇವಾಲಯಗಳೆರಡೂ ಜೋಡಿಯಾಗಿರುವುದು ವಿಶೇಷ. ಅದರಲ್ಲೂ ಉತ್ತರಿ ಮಳೆಯ ಜಾತ್ರೆಯ ಸಂದರ್ಭದಲ್ಲಿ ಪಲ್ಲಕ್ಕಿ ಉತ್ಸವ, ಹತಾರ ಕಾಯಿ ಒಡೆಯುವುದು, ಕಾರ್ಯಗಳಿಂದಾಗಿ ಜಾತಿ ಮತಗಳೆನ್ನದೇ ಅಪಾರ ಭಕ್ತರು ಶ್ರದ್ಧಾ-ಭಕ್ತಿಯಿಂದ ನಡೆದುಕೊಳ್ಳುತ್ತಾರೆ. ಹೀಗೆ ತನ್ನದೇ ಆದ ಸ್ಥಳ ಮಹಿಮೆಯ ವಿಶೇಷತೆಯುಳ್ಳ ಮಾರುತಿ ದೇವಾಲಯದ ಬಗ್ಗೆ ಯುವ ಬರಹಗಾರ ಜಗದೀಶ ಹದ್ದಿಯವರು ಬಾಲ್ಯದಿಂದಲೇ ಹನುಮಂತ ದೇವರಲ್ಲಿ ತುಂಬಾ ಪ್ರಭಾವಿತನಾದವನು. ದೇವಾಲಯದ ಆಚರಣೆಗಳ ಕುರಿತು ಕೇವಲ ಪತ್ರಿಕೆಗಳಿಗೆ ಲೇಖನ ಬರೆಯುತ್ತಲಿದ್ದ ಜಗದೀಶ ಹದ್ದಿಯವರು ಹತ್ತು ಹಲವು ಮೂಲಗಳಿಂದ ಮಾಹಿತಿ ಸಂಗ್ರಹಿಸಿ “ಶ್ರೀಮಾರುತೇಶ್ವರ ಮಹಿಮೆ” ಕೃತಿಯೊಂದನ್ನು ಪ್ರಕಟಿಸುವ ಎತ್ತರಕ್ಕೆ ಬೆಳೆದಿರುವುದು ಹೆಮ್ಮೆಯ ಸಂಗತಿ. ಯುವಕರು ಸತತ ಅಧ್ಯಯನ, ಕುತೂಹಲ ಪ್ರವೃತ್ತಿ, ಸಾಧಿಸುವ ಛಲವನ್ನು ಇಟ್ಟುಕೊಂಡು ಆತ್ಮವಿಶ್ವಾಸದಿಂದ ಮುನ್ನಡೆದರೆ ನಮ್ಮ ಸುತ್ತಲು ಇನ್ನೂ ಕತ್ತಲೆಯಲ್ಲಿಯೇ ಇರುವ ಹಲವಾರು ದೇವಾಲಯಗಳ ವಾಸ್ತುಶಿಲ್ಪ, ಶಾಸನಗಳು, ಸ್ಥಳ ಐತಿಹ್ಯ, ಸ್ಥಳ ಪುರಾಣ, ಪ್ರಾಚೀನ ವಸ್ತು ವಿಷಯಗಳ ಮೇಲೆ ಬೆಳಕನ್ನು ಚೆಲ್ಲಬಹುದೆಂಬುದಕ್ಕೆ ಕುತೂಹಲ ಹಾಗೂ ಪರಿಶ್ರಮ ಗುಣವುಳ್ಳ ಜಗದೀಶ ಹದ್ದಿಯವರು ಮಾದರಿಯಾಗಿದ್ದಾರೆ.ಸಾಹಿತಿ ಎನ್.ಪಿ ನಾಡಗೌಡರ ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.

About the Author

ಜಗದೀಶ ಮಲ್ಲಪ್ಪ ಹದ್ಲಿ

ಜಗದೀಶ ಮಲ್ಲಪ್ಪ ಹದ್ಲಿ ಮೂಲತಃ ಬಾಗಲಕೋಟೆ ಜಿಲ್ಲೆಯ ಹುನಗುಂದ  ತಾಲೂಕಿನ ತಿಮ್ಮಾಪೂರದವರು. ತಂದೆ ಮಲ್ಲಪ್ಪ ಶಂಕ್ರಪ್ಪ ಹದ್ಲಿ, ತಾಯಿ ಮಲ್ಲಮ್ಮ ಮಲ್ಲಪ್ಪ ಹದ್ಲಿ. ತಿಮ್ಮಾಪೂರ ಗ್ರಾಮದ ಸ್ವಾಮಿ ವಿವೇಕಾನಂದ ಯುವಕ ಮಂಡಳದ ಕಾರ್ಯ ದರ್ಶಿಯಾಗಿ, ಹುನಗುಂದದ ಕೃಷಿಕ ಸಮಾಜದ ಸದಸ್ಯರಾಗಿ, ಕನ್ನಡ ಸಾಹಿತ್ಯ ಪರಿಷತ್‌ನ ಅಜೀವ ಸದಸ್ಯರಾಗಿ, ಶರಣ ಸಾಹಿತ್ಯ ಪರಿಷತ್ ಸದಸ್ಯರಾಗಿ, ವಿವಿಧ ಪತ್ರಿಕೆಗಳ ವರದಿಗಾರರಾಗಿ ಸಮಾಜವೀರ, ಸ್ಟೇಟ್ ಎಕ್ಸಪ್ರೆಸ್, ಸೂಪರ ಟೈಮ್ಸ್, ಸುದಿನ ಮುಂತಾದ ಪತ್ರಿಕೆಯ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಸಾಹಿತ್ಯ ಕೃಷಿ ಮೂಲತ ಗ್ರಾಮೀಣ ಪತ್ರಕರ್ತನಾಗಿ ವ್ಯಕ್ತಿ ಪರಿಚಯ ಕನ್ನಡ ಸಾಹಿತ್ಯ ಜನಪದ ರಂಗಕಲೆ ಸಾಮಾಜಿಕ ...

READ MORE

Related Books