ಶ್ರೀ ರಾಮಕೃಷ್ಣ ಪರಮಹಂಸರು

Author : ಸಂಗಮೇಶ ತಮ್ಮನಗೌಡ್ರ

Pages 52

₹ 25.00




Year of Publication: 2014
Published by: ಸಿದ್ದೇಶ್ವರ ಪ್ರಕಾಶನ
Address: ಹಳೆ ಸರಾಫ್ ಬಜಾರ, ಶ್ರೀ ಜಗದಂಬಾ ದೇವಿ ದೇವಸ್ಥಾನ ಹತ್ತಿರ, ಗದಗ-01

Synopsys

ಲೇಖಕ ಸಂಗಮೇಶ ತಮ್ಮನಗೌಡ್ರ ಅವರು ಶ್ರೀ ರಾಮಕೃಷ್ಣ ಪರಮ ಹಂಸರ ಬದುಕು-ಬೋಧನೆ-ಜೀವನ ರೀತಿ-ದೇವರ ಸೇವೆ ಇತ್ಯಾದಿ ಕುರಿತು ಬರೆದ ಕೃತಿ-ಶ್ರೀ ರಾಮಕೃಷ್ಣ ಪರಮಹಂಸರು. ರಾಮಕೃಷ್ಣರು ವ್ಯಕ್ತಿ ಮತ್ತು ಶಕ್ತಿ, ಅಧ್ಯಾತ್ಮಿಕ ಜೀವನ ಸಿದ್ಧಿ, ದಿವ್ಯ ವ್ಯಕ್ತಿತ್ವ, ಅವರ ನಿರ್ಲಪ್ತ ಮನೋಭಾವದ ಸ್ಥಿತಿ, ಪರಮಹಂಸರ ನುಡಿಮುತ್ತುಗಳು ಹೀಗೆ ವಿವಿಧ ಶೀರ್ಷಿಕೆಗಳಡಿ ರಾಮಕೃಷ್ಣರ ಸಮಗ್ರ ವಿಚಾರಗಳನ್ನು ಸರಳವಾಗಿ ವಿವರಿಸುವ ಪ್ರಯತ್ನ ಇಲ್ಲಿ ಕಾಣಬಹುದು. 2012ರಲ್ಲಿ ಈ ಕೃತಿಯು ಮೊದಲ ಮುದ್ರಣ ಕಂಡಿತ್ತು.

About the Author

ಸಂಗಮೇಶ ತಮ್ಮನಗೌಡ್ರ
(15 January 1970)

ಸಂಗಮೇಶ ತಮ್ಮನಗೌಡ್ರ (ಎಸ್.ವಿ. ತಮ್ಮನಗೌಡ್ರ) ಮೂಲತಃ ಗದಗ ಜಿಲ್ಲೆಯ ಗುಜಮಾಗಡಿ ಗ್ರಾಮದವರು. (ಜನನ: 15-01-1970) ಸದ್ಯ, ರೋಣ ತಾಲೂಕಿನ ಬೂದಿಹಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಹಾರಾಷ್ಟ್ರದ ಕೊಲ್ಹಾಪುರ ವಿ.ವಿ.ಯಿಂದ ಎಂ.ಎ, ಮಧುರೈ ಕಾಮರಾಜ ವಿವಿಯಿಂದ ಎಂ.ಫಿಲ್ ಹಾಗೂ ಮುಂಬೈ ವಿ.ವಿ.ಯಿಂದ ಪಿಎಚ್ ಡಿ (ವಿಷಯ: ಕನ್ನಡದಲ್ಲಿ ಏಕಾಂಕಗಳು: ಒಂದು ಅಧ್ಯಯನ-1975-95) ಪದವಿ ಪಡೆದರು. ದ.ರಾ. ಬೇಂದ್ರೆ ವೇದಿಕೆ ಸ್ಥಾಪಿಸಿ (2000) ನಿರಂತರವಾಗಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಕೃತಿಗಳು: ಹಂಸ, ಸ್ಫೂರ್ತಿ-ಕವನ ಸಂಕಲನಗಳು, ಮತ್ತೆ ಹುಟ್ಟಿತು ಕವನ-ಭಾವಗೀತೆಗಳ ಸಂಕಲನ, ಪಶ್ಚಾತ್ತಾಪ, ಕರುಳಿನ ಬೆಲೆ, ಖಳನಾಯಕನ ...

READ MORE

Related Books