ಶ್ರೀ ವಿದ್ಯಾರಣ್ಯ ಚರಿತ್ರ

Author : ಶಾಂತಕವಿ

Pages 57

₹ 1.00




Year of Publication: 1919
Published by: ವೆಂಕಟೇಶ ಭೀಮರಾವ್ ಆಲೂರ
Address: ಮಂಗಳವಾರಪೇಟೆ, ಪೋತನೀಸ್ ಗಲ್ಲಿ, ಧಾರವಾಡ

Synopsys

ಬಾಳಾಚಾರ್ಯ ಸಕ್ಕರಿ (ಶಾಂತಕವಿ) ಬರೆದ ಕೃತಿ-ಶ್ರೀ ವಿದ್ಯಾರಣ್ಯ ಚರಿತ್ರ. ಇದು ಕೀರ್ತನ ರೂಪದ ಪುಸ್ತಕ. ವಿಜಯನಗರ ಸಿಂಹಾಸನ ಸ್ಥಾಪನೆಯ ವೈಭವವನ್ನು ಇಲ್ಲಿ ವರ್ಣಿಸಲಾಗಿದೆ. ಇದರಿಂದ ಕರ್ನಾಟಕ-ಕನ್ನಡದ ಬಗ್ಗೆ ಅಭಿಮಾನ ಮೂಡಿಸುವುದೂ ಕೀರ್ತನಕಾರ ಕವಿಗಳ ಉದ್ದೇಶವೂ ಆಗಿದೆ.

About the Author

ಶಾಂತಕವಿ
(15 January 1856)

ಆಧುನಿಕ ಕರ್ನಾಟಕ ನಾಟಕ ಪಿತಾಮಹ-ಶಾಂತಕವಿ ಎಂದೇ ಖ್ಯಾತಿಯ ಬಾಳಾಚಾರ್ಯ ಗೋಪಾಲಾಚಾರ್ಯ ಸಕ್ಕರಿ ಅವರು ನಾಟಕಕಾರರು, ಕವಿಗಳು. 1856ರ ಜನೆವರಿ 15ರಂದು ಹಾವೇರಿ ಜಿಲ್ಲೆಯ ಸಾತೇನಹಳ್ಳಿಯಲ್ಲಿ ಹುಟ್ಟಿದರು. ಈ ಮನೆತನದ ಶ್ರೀನಿವಾಸಾಚಾರ್ಯ ಎನ್ನುವವರು “ಶರ್ಕರಾ” (ಸಂಸ್ಕೃತದಲ್ಲಿ ಸಕ್ಕರೆ) ಎನ್ನುವ ಸಂಸ್ಕೃತ ಟೀಕೆಯನ್ನು ರಚಿಸಿದ್ದರಿಂದ ಇವರ ಮನೆತನಕ್ಕೆ “ಸಕ್ಕರಿ” ಎನ್ನುವ ಅಡ್ಡಹೆಸರು ಬಂದಿತು. ಬಾಲ್ಯದಲ್ಲೇ ಜೈಮಿನಿ ಭಾರತ, ಮಹಾಭಾರತ ಪಠಣ ಹಾಗೂ ತಾಯಿಯಿಂದ ಕಲಿತ ದಾಸರ ಪದಗಳು. ಧಾರ್ಮಿಕ ಕಾವ್ಯ, ದಾಸರ ಪದಗಳಿಂದ ಬಂದ ಸಾಹಿತ್ಯ ಪ್ರಜ್ಞೆ. ಕೇವಲ 14 ರ ಹರೆಯದಲ್ಲೇ ರಾಣಿಬೆನ್ನೂರಿನಲ್ಲಿ ಶಾಲಾ ಶಿಕ್ಷಕರಾದರು. ಆಗಲೇ, ಮೊದಲ ನಾಟಕ ‘ಉಷಾಹರಣ’ ಬರೆದದ್ದು, ...

READ MORE

Related Books