ಶ್ರೀಗಂಧ- ಪ್ರಭುರಾವ ಕಂಬಳಿವಾಲೆ

Author : ರಘುಶಂಖ ಭಾತಂಬ್ರಾ

Pages 152

₹ 80.00




Year of Publication: 2008
Published by: ಕರ್ನಾಟಕ ಟ್ರೇಡರ್ಸ್ ಬೀದರ್‌
Address: ಕರ್ನಾಟಕ ಟ್ರೇಡರ್ಸ್, ಅಂಬೇಡ್ಕರ ವೃತ್ತ, ಬೀದರ್‌.

Synopsys

ಹೈದರಾಬಾದ್‌ ಕರ್ನಾಟಕದ ಪ್ರಮುಖ ಸಮಾಜ ಸೇವಕ, ಕನ್ನಡಪರ ಹೋರಾಟಗಾರ ಪ್ರಭುರಾವ್‌ ಕಂಬಳಿವಾಲೆ ಅವರ ಜೀವನಚರಿತ್ರೆ ಒಂದು ರೀತಿಯಲ್ಲಿ ೨೦ನೇ ಶತಮಾನದ ಕಲ್ಯಾಣ ಕರ್ನಾಟಕದ ಸಾಂಸ್ಕೃತಿಕ ವಿದ್ಯಮಾನಗಳಿಗೆ ಹಿಡಿದ ಕನ್ನಡಿ ಕೂಡ. 

೧೯೦೪ರಲ್ಲಿ ಜನಿಸಿದ ಕಂಬಳಿವಾಲೆ ಹೈದರಾಬಾದಿನಲ್ಲಿ ವಕೀಲಿ ವೃತ್ತಿ ಮಾಡುತ್ತಲೇ ಸಮಾಜ ಸೇವೆಗೂ ಕನ್ನಡ ಸೇವೆಗೂ ಅರ್ಪಿಸಿಕೊಂಡರು.  ಉರ್ದು, ಮರಾಠಿ ಭಾಷೆಗಳ ಒತ್ತಡದಲ್ಲಿ ಸಿಲುಕಿ ನಲಗುತ್ತಿದ್ದ ಕನ್ನಡ ರಕ್ಷಣೆಗೆ ಟೊಂಕಕಟ್ಟಿ ನಿಂತು ಮಾನ್ವಿ ನರಸಿಂಗರಾಯ, ಸಿದ್ಧಯ್ಯ ಪುರಾಣಿಕ, ಜಯದೇವಿ ತಾಯಿ ಲಿಗಾಡೆ, ಅನ್ನದಾನಯ್ಯ ಪುರಾಣಿಕ, ಡಿ.ಎಲ್. ನರಸಿಂಹಾಚಾರ್, ಅನಕೃ, ಶಿವರಾಮ ಕಾರಂತ ಮೊದಲಾದ ಸಾಹಿತ್ಯದ ದಿಗ್ಗಜರನ್ನು ಬೀದರ್‌ ಜಿಲ್ಲೆಗೆ ಆಮಂತ್ರಿಸಿ ಇಲ್ಲಿಯವರ ನರನಾಡಿಗಳಲ್ಲಿ ಕನ್ನಡದ ರಕ್ತ ಹರಿದಾಡುವಂತೆ ಮಾಡಿದರು.  

ಅವರ ಮಾತೃಭಾಷೆ ಕನ್ನಡವಾಗಿದ್ದರೂ, ಕಲಿಕೆಯ ಭಾಷೆ ಮರಾಠಿ, ವೃತ್ತಿಯ ಭಾಷೆ ಉರ್ದು ಆಗಿತ್ತು. ಮಾತೃಭಾಷೆಯ ವ್ಯಾಮೋಹದಿಂದಾಗಿ  ಅವರು ಮನೆ ಸಂಸಾರ ಮರೆತು,ತಮ್ಮ ಮೂಲನೆಲೆ ತೊರೆದು ಕನ್ನಡ ಪ್ರಚಾರ ಮಾಡಿದ್ದರು. ಇಂತಹ ಮರೆಯಲಾರದ ಮರೆಯಬಾರದ ಧೀಮಂತ ಕನ್ನಡಿಗನ ಅರ್ಥಪೂರ್ಣ ಜೀವನ ಚಿತ್ರಣ ಈ ಕೃತಿಯಲ್ಲಿದೆ.    

About the Author

ರಘುಶಂಖ ಭಾತಂಬ್ರಾ
(01 January 1970)

“ರಘುಶಂಖ” ಕಾವ್ಯನಾಮದಿಂದ ಪರಿಚಿತರಾಗಿರುವ ಡಾ. ರಘುನಾಥ  ಖರಾಬೆಯವರು ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಭಾತಂಬ್ರಾ ಗ್ರಾಮದವರು. ಶ್ರೀಮತಿ ಗುರಮ್ಮ ಶ್ರೀ ಶಂಕರೆಪ್ಪನವರ ಮಗನಾಗಿ 01-01-1970ರಲ್ಲಿ ಜನಿಸಿದರು. ಎಂ.ಎ; ಎಂ.ಪಿಎಲ್;  ಪಿಎಚ್.ಡಿ. ಪದವಿಧರರು. 1996ರಲ್ಲಿ ಗುಲಬರ್ಗಾ ಶ್ರೀ ಶರಣಬಸವೇಶ್ವರ ವಾಣಿಜ್ಯ ಕಾಲೇಜು; ಎಸ್.ಎಸ್. ಖೂಬಾ ಬಸವೇಶ್ವರ ಪದವಿ ಕಾಲೇಜು ಬಸವಕಲ್ಯಾಣದಲ್ಲಿ ಕನ್ನಡ ಉಪನ್ಯಾಸಕರಾಗಿ ಐದು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಸದ್ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗರ್ಮಾತಾಂಡಾದಲ್ಲಿ ಸಹಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಡಾ. ಶರಣಬಸವಪ್ಪ ಅವರ ಜೀವನ ಸಾಧನೆ (ಎಂ.ಪಿಎಲ್.), ವಚನಕಾರರ ವೃತ್ತಿ ಮೌಲ್ಯಗಳು ಒಂದು ಅಧ್ಯಯನ ...

READ MORE

Related Books