ಶ್ರೀಕೌಸ್ತುಭ

Author : ಜಿ.ಎಂ. ಹೆಗಡೆ



Year of Publication: 2021
Published by: ಬಿ. ಎಂ.ಶ್ರೀ ಪ್ರತಿಷ್ಠಾನ
Address: ಎನ್.ಆರ್. ಕಾಲೊನಿ, ಬೆಂಗಳೂರು

Synopsys

‘ಶ್ರೀಕೌಸ್ತುಭ’ ಕೃತಿಯು ಆರ್ ಲಕ್ಷ್ಮೀನಾರಾಯಣ ಹಾಗೂ ಜಿ.ಎಂ ಹೆಗಡೆ ಅವರ ಸಂಪಾದಿತ ಬಿ.ಎಂ.ಶ್ರೀಗಳ ವಿಮರ್ಶಾತ್ಮಕ ಲೇಖನಗಳ ಸಂಪುಟವಾಗಿದೆ. ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಒಂದು ಮೈಲುಗಲ್ಲೆನಿಸಿದೆ. ಶ್ರೀಯವರ ಸಾಹಿತ್ಯವನ್ನು ಕುರಿತಂತೆ ಇದುವರೆಗೆ ಪ್ರಕಟವಾಗಿರುವ ನಾಡಿನ ಪ್ರಮುಖ ವಿದ್ವಾಂಸರ, ವಿಮರ್ಶಕರ ಮುಖ್ಯಲೇಖನಗಳನ್ನೆಲ್ಲ ಒಟ್ಟುಗೂಡಿಸಿ ಪ್ರಕಟಿಸಿರುವ ಕೃತಿ ಶ್ರೀಕೌಸ್ತುಭ.

ಈ ಕೃತಿಯಲ್ಲಿ ಮೂರು ಭಾಗಗಳಿವೆ. ಮೊದಲನೆಯದರಲ್ಲಿ, ಶ್ರೀಯವರ 'ಇಂಗ್ಲಿಷ್ ಗೀತಗಳು, 'ಹೊಂಗನಸುಗಳು' ಕುರಿತು ಲೇಖನಗಳಿವೆ; ಎರಡನೆಯ ಭಾಗದಲ್ಲಿ ಅವರ ನಾಟಕಸಾಹಿತ್ಯದ ವಿಮರ್ಶೆ ಇದ್ದರೆ, ಮೂರನೆಯ ಭಾಗದಲ್ಲಿ, ಕನ್ನಡ ಸಾರಸ್ವತಲೋಕಕ್ಕೆ ಬಿ.ಎಂ.ಶ್ರೀ.ಯವರ ಕೊಡುಗೆಯ ಬಗ್ಗೆ ವಿಮರ್ಶಾತ್ಮಕ ಲೇಖನಗಳಿವೆ. ಹಲವು ಗ್ರಂಥಗಳಲ್ಲಿ ನಾಲ್ಕಾರು ದಶಕಗಳಿಂದ ಪ್ರಕಟವಾಗಿದ್ದ ಲೇಖನಗಳ ಸಂಗ್ರಹವಾಗಿರುವ ಈ ಹೆಬ್ಬೊತ್ತಗೆ ಕನ್ನಡ ಸಾಹಿತ್ಯ ಚರಿತ್ರೆಯಲ್ಲೂ ಕಾವ್ಯಮೀಮಾಂಸೆಯಲ್ಲೂ ಆಕರಗ್ರಂಥವಾಗಿ ಒದಗುತ್ತದೆ. ಮಾಸ್ತಿ, ಬೇಂದ್ರೆ, ತೀನಂಶ್ರೀ, ಕುರ್ತಕೋಟಿ, ಎ.ಆರ್.ಕೃ., - ಹೀಗೆ ಒಟ್ಟು 43 ಲೇಖನಗಳು 'ಶ್ರೀಕೌಸ್ತಭ'ದಲ್ಲಿವೆ.

 

About the Author

ಜಿ.ಎಂ. ಹೆಗಡೆ
(12 December 1952)

ವಿಮರ್ಶಕ ಜಿ.ಎಂ. ಹೆಗಡೆ ಅವರು  ಧಾರವಾಡದ ಕಿಟೆಲ್‌ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಸದ್ಯ ನಿವೃತ್ತರು. ಧಾರವಾಡದಲ್ಲಿ ನೆಲೆಸಿದ್ದಾರೆ. ’ಮಾಸ್ತಿಯವರ ವಿಮರ್ಶೆ: ಒಂದು ಅಧ್ಯಯನ’ ಇವರ ಪಿಎಚ್ ಡಿ ಮಹಾಪ್ರಬಂಧ.  ಕೃತಿಗಳು:  ಸಾಹಿತ್ಯ ಸಹೃದಯತೆ, ಪುಸ್ತಕಲೋಕ, ಸಾಹಿತ್ಯ ಮತ್ತು ಸಂಸ್ಕೃತಿ ಸ್ಪಂದನ, ಕವಿ ಕಣವಿ, ಕಿಟೆಲ್ ಜೀವನ ಹಾಗು ಕೃತಿ ಸಮೀಕ್ಷೆ.    ...

READ MORE

Related Books